ನಂದಿನಿ ಮನುಪ್ರಸಾದ್ ನಾಯಕ್
* *ಯರ ಹಳ್ಳಿ ಮತ್ತು ಹ್ಯಾಂಡ್ ಪೋಸ್ಟ್ ಹೋಟೆಲ್ ಮತ್ತು ಬೇಕರಿ ಗಳಿಗೆ ಆಹಾರ ಸುರಕ್ಷತಾಧಿಕಾರಿಗಳು ದಿಡೀರ್ ಬೇಟಿ**

ಇಂದು ಆಹಾರ ಸುರಕ್ಷತಾಧಿಕಾರಿಗಳಾದ ಡಾ ” ರವಿಕುಮಾರ್ ಮತ್ತು ತಂಡದವರು ಯರ ಹಳ್ಳಿ ಮತ್ತು ಹ್ಯಾಂಡ್ ಪೋಸ್ಟ್ ನ ಹೋಟೆಲ್, ಬೇಕರಿ, ಟೀ ಸ್ಟಾಲ್ ಗಳಿಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿ ಕೆಲವು ಹೋಟೆಲ್ ಗಳು ಮತ್ತು ಬೇಕರಿ ಗಳಿಗೆ ಸ್ವಚ್ಛತೆ ಇಲ್ಲದ ಕಾರಣ ನೋಟಿಸ್ ನೀಡಿ, ದಂಡ ವಿಧಿಸಲಾಯಿತು .
ನಂತರ ಆಹಾರ ಸುರಕ್ಷಾಧಿಕಾರಿಗಳು ಮಾತನಾಡಿ
ಹೋಟೆಲ್‌ಗಳು ಮತ್ತು ಬೇಕರಿ, ಟೀ ಸ್ಟಾಲ್ ಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಸ್ವಚ್ಛತೆ ಮತ್ತು ಸುರಕ್ಷತೆಯು ಜನರ ಆರೋಗ್ಯ ಕಾಪಾಡಲು ಅತ್ಯಂತು ಮುಖ್ಯವಾಗಿದೆ.ಹಾಗೂ FSSA ಪರವಾಣಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು
ಅಡುಗೆ ಮಾಡುವ ಸ್ಥಳ, ಬಳಸುವ ಪದಾರ್ಥಗಳು ಮತ್ತು ಸಿಬ್ಬಂದಿಯ ಸ್ವಚ್ಛತೆಯು ಕಡ್ಡಾಯವಾಗಿರಬೇಕು.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.
*ಅಡುಗೆ ಮನೆ ಮತ್ತು ಆಹಾರದ ಸ್ವಚ್ಛತೆ*
*ಶುದ್ಧ ನೀರು :* ಅಡುಗೆ ಮಾಡಲು ಮತ್ತು ಪಾತ್ರೆ ತೊಳೆಯಲು ಕುಡಿಯಲು ಯೋಗ್ಯವಾದ ಶುದ್ಧ ನೀರನ್ನು ಮಾತ್ರ ಬಳಸಬೇಕು.
*ತಾಜಾ ಪದಾರ್ಥಗಳು:* ಕೊಳೆತ ಅಥವಾ ಹಳೆಯ ಆಹಾರ ಪದಾರ್ಥಗಳನ್ನು ಬಳಸದೆ ತಾಜಾ ವಸ್ತುಗಳನ್ನು ಬಳಸಬೇಕು.
ಹಳೆಯ ಮತ್ತು ಕೊಳೆತ ಆಹಾರವನ್ನು ಅಲ್ಲಲ್ಲಿ ಬಿಸಾಕದೆ ಪುರಸಭೆಯಿಂದ ಬರುವ ವಾಹನಗಳಿಗೆ ನೀಡಬೇಕು.
*ತಾಪಮಾನ ನಿಯಂತ್ರಣ:* ಬಿಸಿ ಆಹಾರವನ್ನು ಸರಿಯಾದ ಬಿಸಿಯಲ್ಲಿ ಮತ್ತು ತಣ್ಣನೆಯ ಆಹಾರವನ್ನು ನಿಗದಿತ ತಂಪಾದ ವಾತಾವರಣದಲ್ಲಿ ಸಂಗ್ರಹಿಸಬೇಕು.
*ಕೀಟ ನಿಯಂತ್ರಣ:* ಅಡುಗೆ ಕೋಣೆಯಲ್ಲಿ ಜಿರಳೆ, ಇಲಿ ಮತ್ತು ನೊಣಗಳು ಇರದಂತೆ ನಿರಂತರ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಬೇಕು.
**ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ*
*ಕೈತೊಳೆಯುವುದು: ಅಡುಗೆ ಮಾಡುವವರು ಮತ್ತು ಬಡಿಸುವವರು ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು.
*ಸುರಕ್ಷತಾ ಉಡುಪು*
ಕೆಲಸದ ಸಮಯದಲ್ಲಿ ಸ್ವಚ್ಛವಾದ ಯೂನಿಫಾರ್ಮ್, ಮುಖದ ಮುಖಗವಸು (ಮಸ್ಕ್) ಮತ್ತು ಕೈಗವಸುಗಳನ್ನು (ಗ್ಲೌಸ್) ಮತ್ತು ತಲೆಗೆ ಕ್ಯಾಪ್ ಗಳನ್ನು ಧರಿಸಬೇಕು.
*ಆರೋಗ್ಯ ತಪಾಸಣೆ:* *ಆಹಾರ ತಯಾರಿಸುವ ಸಿಬ್ಬಂದಿಗೆ ಯಾವುದೇ ಸಾಂಕ್ರಾಮಿಕ ಕಾಯಿಲೆ ಗಳು ಇರಬಾರದು..
*ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಬೇಕು
**ಗ್ರಾಹಕರ ಗಮನಕ್ಕೆ*
ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳ ಅಡುಗೆ ಮನೆ ಸ್ವಚ್ಛತೆ ಬಗ್ಗೆ ದೂರುಗಳಿದ್ದರೆ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಗ್ರಾಹಕರು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮೂಲಕ ಅಧಿಕೃತವಾಗಿ ಮಾಹಿತಿ ನೀಡಬಹುದು.ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ , ರವಿರಾಜ್. DEO ಪ್ರತಾಪ್,ಹೋಟೆಲ್‌ನ ಸಿಬ್ಬಂದಿ ವರ್ಗದವರು ಇನ್ನಿತರರು ಹಾಜರಿದ್ದರು .