ದಸರಾ ವಿಶೇಷ: ನಂದಿನಿ ಮನುಪ್ರಸಾದ್ ನಾಯಕ್
ಆನೆಗಳನ್ನ ದೂರದಿಂದ ನೋಡಿ ಆನಂದಿಸಿ ಹತ್ತಿರ ಹೋದರೇ ಅಪಾಯ. ಜೋಕೆ…
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ನೋಡಲು ವರ್ಷದಿಂದ ವರ್ಷಕ್ಕೆ ಜನರ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೇ ಈ ವರ್ಷ ವಿಶೇಷ ಎಂದರೇ ಗಜಪಡೆ ತಾಲೀಮು ನೋಡಲೆಂದೇ ಲಕ್ಷ ಲಕ್ಷ ಜನ ಪ್ರತಿ ನಿತ್ಯ ಕಾದು ಕುಳಿತುಕೊಳುತ್ತಿದ್ದಾರೆ.ಹಿಂದೆ ಬ್ಯಾರಿಕೇಟ್ ಇಲ್ಲದೇ ಆನೆಗಳ ತಾಲೀಮು ನೋಡುತಿದ್ರು ಆದರೇ ಈಗ ಬ್ಯಾರಿಕೇಟ್ ಹಿಂದೆ ನಿಂತು ನೋಡು ಕಾಲ ಬಂದಿದೆ.


ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೇಯೂ ಯಾವುದೇ ಅಡೆತಡೆ ಇಲ್ಲದೇ ಯಶಸ್ವಿಯಾಗಿ ಮತ್ತು ಸುರಕ್ಷತವಾಗಿ ನಡೆಯಲು ದಸರಾ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ.
ಅರಮನೆಯಿಂದ ಬನ್ನಿ ಮಂಟಪದ ಮೈದಾನದವರಗೆ ಸುಮಾರು 4.8 ಕಿಲೋಮೀಟರ್ ದೂರ ರಾಜಮಾರ್ಗದಲ್ಲಿ ಆನೆಗಳು ಸಾಗಲಿದೆ.
ದಸರಾ ಆನೆಗಳು ಎಷ್ಟೇ ಪಳಗಿದ್ದರೂ, ಅವುಗಳ ಮೂಲ ಸ್ವಭಾವ ವನ್ಯಜೀವಿಗಳದ್ದೇ ಆಗಿರುತ್ತದೆ.
ದಸರಾ ಆನೆಗಳು ನೋಡಲು ಎಷ್ಟು ಶಾಂತ ಮತ್ತು ಭವ್ಯವಾಗಿ ಕಾಣಿಸುತ್ತವೆಯೋ, ಅಷ್ಟೇ ಅವುಗಳ ಬಳಿ ಸಾರ್ವಜನಿಕರು ಹೋಗುವುದು ಅತ್ಯಂತ ಅಪಾಯಕಾರಿ. ತಾಲೀಮು ಅಥವಾ ವಿಶ್ರಾಂತಿಯ ಸಮಯದಲ್ಲಿ ದಸರಾ ಆನೆಗಳ ಹತ್ತಿರಕ್ಕೆ ಸುಲಭವಾಗಿ ಹೋಗಲು ಬಿಡುವುದಿಲ್ಲ.
ಆನೆಗಳು ಮೂಲತಃ ಕಾಡಿನ ಪ್ರಾಣಿಗಳು. ಅಪರಿಚಿತರು ಹತ್ತಿರ ಬಂದಾಗ ಅವು ತಮಗೆ ಅಪಾಯವಿದೆ ಎಂದು ಭಾವಿಸಿ, ರಕ್ಷಣಾತ್ಮಕವಾಗಿ ದಾಳಿ ಮಾಡುವ ಸಾಧ್ಯತೆ ಇರುತ್ತದೆ.
ಫ್ಲ್ಯಾಶ್ ಲೈಟ್ ಮತ್ತು ಮೊಬೈಲ್ ಕ್ಯಾಮೆರಾಗಳ ಭಯ ಆನೆಗಳಿಗೆ ಇರುತ್ತದೆ. ಆನೆಗಳ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುವುದು ಅಥವಾ ಮುಖದ ಹತ್ತಿರ ಕ್ಯಾಮೆರಾ ಫ್ಲ್ಯಾಶ್ ಆನ್ ಮಾಡುವುದರಿಂದ ಆನೆಗಳು ಗಾಬರಿಗೊಳ್ಳುತ್ತವೆ (ಬೆದರುತ್ತವೆ). ಕಣ್ಣಿಗೆ ಹಠಾತ್ ಬೆಳಕು ಬಿದ್ದಾಗ ಅವು ನಿಯಂತ್ರಣ ತಪ್ಪಬಹುದು.
ಗಂಡಾನೆಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ‘ಮಸ್ತ್’ (ಮದವೇರುವುದು) ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ಅವುಗಳ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ತುಂಬಾ ಹೆಚ್ಚಿರುತ್ತದೆ. ಇದರಿಂದ ಅವು ತೀವ್ರ ಆಕ್ರಮಣಕಾರಿಯಾಗುತ್ತವೆ. ಮಾವುತರಿಗೂ ಇವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ವಿಶೇಷ ಆಹಾರ ಮತ್ತು ವಿಶ್ರಾಂತಿಗೆ ಅಡ್ಡಿ ಮಾಡಬಾರದು. ತಾಲೀಮಿನ ನಂತರ ಆನೆಗಳಿಗೆ ದೈಹಿಕ ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಜನರು ಸುತ್ತುವರಿದರೆ ಅವುಗಳಿಗೆ ಒತ್ತಡ (Stress) ಹೆಚ್ಚಾಗುತ್ತದೆ. ಒತ್ತಡಕ್ಕೆ ಒಳಗಾದ ಆನೆಗಳು ಅನಿರೀಕ್ಷಿತವಾಗಿ ವರ್ತಿಸಬಹುದು.
ರೋಗ ಹರಡುವ ಭೀತಿ (Zoonotic Diseases): ಮನುಷ್ಯರಿಂದ ಪ್ರಾಣಿಗಳಿಗೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಕೆಲವು ಸೂಕ್ಷ್ಮ ಕಾಯಿಲೆಗಳು ಅಥವಾ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಆನೆಗಳ ಆರೋಗ್ಯದ ದೃಷ್ಟಿಯಿಂದಲೂ ಜನರನ್ನು ದೂರ ಇಡಲಾಗುತ್ತದೆ.
ಮಕ್ಕಳು ಮತ್ತು ಗದ್ದಲದ ನಡವಳಿಕೆಯಿಂದ ಕಿರಿಕಿರಿ ಉಂಟಾಗುತ್ತದೆ.ಆನೆಗಳ ಮುಂದೆ ಜೋರಾಗಿ ಕಿರುಚುವುದು, ಕೈ-ಕಾಲು ಆಡಿಸುವುದು ಅಥವಾ ಮಕ್ಕಳು ಓಡಾಡುವುದನ್ನು ಆನೆಗಳು ತಮಗೆ ಮಾಡುತ್ತಿರುವ ಸವಾಲು ಎಂದು ತಪ್ಪಾಗಿ ಭಾವಿಸಬಹುದು.
ಮಾವುತರ ಎಚ್ಚರಿಕೆ: ಆನೆಗಳನ್ನು ಕೇವಲ ಅವುಗಳ ಮಾವುತರು (Mahouts) ಮತ್ತು ಕಾವಾಡಿಗಳು ಮಾತ್ರ ನಿಯಂತ್ರಿಸಬಲ್ಲರು. ಆನೆಗಳಿಗೆ ಅವರ ಧ್ವನಿ ಮತ್ತು ಸನ್ನೆಗಳು ಮಾತ್ರ ಅರ್ಥವಾಗುತ್ತವೆ. ಆದ್ದರಿಂದ ಸುರಕ್ಷಿತ ಅಂತರದಿಂದ ಆನೆಗಳನ್ನು ನೋಡಿ ಆನಂದಿಸುವುದೇ ಜಾಣತನ.
ವಿಶೇಷ ಸೂಚನೆ : ಆನೆ ಹಾಗೂ ಜನರ ಸುರಕ್ಷತಾ ದೃಷ್ಟಿಯಿಂದ ಅರಮನೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.ರಾಜಮಾರ್ಗದಲ್ಲಿ ನಡೆದು ಬರುವ ಗಜಪಡೆಗಳಿಗೆ ಫೋಟೋ ತೆಗೆಯುವುದು,ವಿಡಿಯೋ ಮಾಡುವುದು.ಹತ್ತಿರ ಹೋಗುವುದು .ಕಿರಿಕಿರಿ ಉಂಟುಮಾಡದಿರಲು ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.