ರಾಜರು ಹತ್ತು ಆನೆಗಳನ್ನ ಸಾಕಬಹುದಿತ್ತಂತೆ.ಆದರೆ ಎರಡು ಕಾಲಿನ ಜಟ್ಟಿಗಳನ್ನ ಸಾಕೋಕೆ ಆಗುತ್ತಿರಲಿಲ್ವಂತೆ ಜಟ್ಟಿ ಕಾಳಗ ಕುಸ್ತಿಯಲ್ಲ, ಅದೊಂದು ಉಗ್ರರೂಪ. ಸಮರ ಕಲೆ.

ದಸರಾ ವಿಶೇಷ :ನಂದಿನಿ ಮನುಪ್ರಸಾದ್ ನಾಯಕ್

ರಾಜರು ಹತ್ತು ಆನೆಗಳನ್ನ ಸಾಕಬಹುದಿತ್ತಂತೆ.ಆದರೆ ಎರಡು ಕಾಲಿನ ಜಟ್ಟಿಗಳನ್ನ ಸಾಕೋಕೆ ಆಗುತ್ತಿರಲಿಲ್ವಂತೆ

ಜಟ್ಟಿ ಕಾಳಗ ಕುಸ್ತಿಯಲ್ಲ, ಅದೊಂದು ಉಗ್ರರೂಪ. ಸಮರ ಕಲೆ.
ವಜ್ರಮುಷ್ಠಿ ಕಾಳಗದ ರೋಚಕ ಕಥೆ*

         ಬರೀ ಮುಷ್ಠಿಯಿಂದ ಹೊಡೆದ್ರೇ ತಡೆದುಕೊಳ್ಳುವುದು ಕಷ್ಟ.ಇನ್ನೂ ಚೂಪಾದ ಆಯುಧ ಕಟ್ಟಿಕೊಂಡು ಹೊಡುದ್ರೆ ಎದುರಾಳಿ ಕಥೆ ಮುಗಿಯಿತೆಂದೇ ಅರ್ಥ.


          ಹೌದು ,ದಶಮಿಯ ದಿನ ಮೈಸೂರು ಅಂಬಾವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ‘ವಜ್ರಮುಷ್ಠಿ’ ಕಾಳಗ ನಡೆಯುತ್ತದೆ.
ಕುಸ್ತಿ,ಕಾಳಗ ಕೌಶಲ್ಯ ಹೊಂದಿದ್ದರಿಂದ ರಾಜ ಮಹಾರಾಜರು ಈ ಜಗ ಜಟ್ಟಿಗಳಿಗೆ ರಾಜಾಶ್ರಯ ನೀಡಿ, ಅಂಗರಕ್ಷಕರನ್ನಾಗಿಸಿಕೊಂಡರು. ಅವರಲ್ಲಿ ಶಕ್ತಿ-ಯುಕ್ತಿಶಾಲಿಗಳನ್ನು ಆಯ್ಕೆ ಮಾಡಿಕೊಳ್ಳಲೆಂದು ಜಟ್ಟಿ ಕಾಳಗ ಏರ್ಪಡಿಸಲಾಗುತ್ತಿತ್ತು. ಅದು,‘ವಜ್ರಮುಷ್ಠಿ ಕಾಳಗ’ ಎಂದೇ ಪ್ರಸಿದ್ಧ.

           ಮೈಸೂರು ದಸರೆಯ ಖಾಸಗಿ ದರ್ಬಾರಿನಲ್ಲಿ ವಜ್ರಮುಷ್ಠಿ ಕಾಳಗ ಈಗಲೂ ಫೇಮಸ್ಸು. ರೋಚಕ, ರೋಮಾಂಚಕ ಕಾಳಗ ಮಾಡುವ ಜಟ್ಟಿಗಳು ಭಾರ ಎತ್ತಿ, ದಂಡ-ಸಾಮು ಹೊಡೆದು ರಟ್ಟೆಯಲ್ಲಿ ಗಟ್ಟಿತನ, ಗುಂಡಿಗೆಯಲ್ಲಿ ಗಟ್ಟಿಗತನವನ್ನು ಕಾಯ್ದಿಟ್ಟುಕೊಂಡಿದ್ದವರು. ಹೊಡೆತಗಳಿಗೆ ಎದುರಾಳಿಯ ಹಲ್ಲು ಉದುರಬಹುದು. ಕಣ್ಣು ಹೊರಬಂದು, ಮುಖ ವಿಕಾರಗೊಳ್ಳಬಹುದು. ಕೆಲವೊಮ್ಮೆ ಉಸಿರು ಹೋಗಲುಬಹುದು ರಕ್ತ ಚಿಮ್ಮಿದ ಕ್ಷಣಾರ್ಥದಲ್ಲಿ ಕಾಳಗ ಅಂತ್ಯಗೊಳ್ಳಿವುದು.

ಚೂಪು ಚೂಪಾದ‘ಆಭರಣ’ ಮಾದರಿ ಆಯುಧ ‘ವಜ್ರನಖ’ವನ್ನು ಕಟ್ಟಿಕೊಂಡು ಕಾಳಗಕ್ಕಿಳಿಯುವುದು ವಿಶೇಷ.ವಜ್ರಮುಷ್ಠಿಯನ್ನ
ಎಮ್ಮೆ ಕೊಂಬು,ಗೇಂಡಾಮೃಗ ಕೊಂಬು, ಆನೆ ದಂತದಲ್ಲಿ ನಖ ತಯಾರಿಸಲಾಗಿರುತ್ತದೆ.

ಬಾರಾ ಧ್ವಜ ಗೋತ್ರದವರು ಜಟ್ಟಿ ಕಾಳಗದಲ್ಲಿ ಭಾಗವಹಿಸುವುದು ವಾಡಿಕೆ.
ಪುಟ್ಟ ಜುಟ್ಟಿನ ಹೊರತು ನುಣ್ಣೆಗೆ ತಲೆ ಬೋಳಿಸಿ, ಹಣೆಗೆ ನಾಮ ಹಚ್ಚಿಕೊಂಡು, ಹನುಮಾನ್ ಚಡ್ಡಿ ಧರಿಸಿ ಮೈಹುರಿಗಟ್ಟಿದ ಹುರಿಯಾಳುಗಳು ಕೆಮ್ಮಣಿನ ಮಟ್ಟಿಯಲ್ಲಿ ಕಾಳಗಕ್ಕಿಳಿಯುತ್ತಾರೆ. ‘ನಖ’ಮುಷ್ಠಿಯ ಏಟು ಎದುರಾಳಿಯ ನೆತ್ತಿ ಸೀಳಿ ನೆತ್ತರು ತರಿಸಬೇಕು. ಹಿಂದೆಲ್ಲ ಒಬ್ಬ ನೆಲ ಕಚ್ಚುವವರೆಗೂ ಕಾಳಗ ಮುಂದುವರಿಯುತ್ತಿತ್ತು. ಉಳಿದು ಗೆದ್ದ ಬಲಿಷ್ಠ ಅಂಗರಕ್ಷಕನಾಗುತ್ತಿದ್ದ. ಕೆಲವೊಮ್ಮೆ, ರಣಧೀರ ಕಂಠೀರವನಂಥ ಮಹಾರಾಜರೂ ಕಾಳಗಕ್ಕೆ ಇಳಿದ ನಿದರ್ಶನಗಳಿವೆ.

ಈಗಲೂ, ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣದಿಂದ ಉಸ್ತಾದರು ಆಯ್ಕೆ ಮಾಡಿ ಕರೆ ತರುವ ನಾಲ್ವರು ಜಟ್ಟಿಗಳು ಮಸಂಪ್ರದಾಯದಂತೆ ಔಪಚಾರಿಕವಾಗಿ ಕಾಳಗ ನಡೆಸುತ್ತಾರೆ. ವಜ್ರಮುಷ್ಠಿಯ ಏಟು ಈಗಲೂ ಎದುರಾಳಿ ನೆತ್ತಿಯಲ್ಲಿ ನೆತ್ತರು ಚಿಮ್ಮಿಸುತ್ತದೆ. ಮೊದಲು ಯಾರ ನೆತ್ತಿಯಲ್ಲಿ ರಕ್ತ ಸುರಿಯುತ್ತದೋ ಆತ ಸೋತಂತೆ. ರಾಜಮನೆತದಿಂದ ಭಕ್ಷೀಸೂ ದೊರೆಯುತ್ತದೆ.
ಸುಣ್ಣದಕೇರಿಯಲ್ಲಿ ತಂದೆಯಿಂದ ಕಠಿಣ ತರಬೇತಿ,ಪ್ರೇರಣೆ ಪಡೆದ ಬಾಲಾಜಿ, 1978ರಲ್ಲಿ ಕುಸ್ತಿ ಅಖಾಡ ಪ್ರವೇಶಿಸಿದರು. ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಗೆದ್ದು ಬೀಗಿದರು.350ಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಬಾಲಾಜಿ ಹಲವರನ್ನು ನೆಲಕ್ಕೊರಗಿಸಿದರು. ಮಾತಿನಲ್ಲಿ ಸಾಧು. ಮೈ ಕೊಡವಿ,ಮಟ್ಟಿಯನ್ನು ಮೈಗೆರಚಿಕೊಂಡು ಅಖಾಡಕ್ಕಿಳಿದರೆ ಬಲಾಢ್ಯ ಗೂಳಿಯಂತೆ ಹೋರಾಡಿ ಜಯಿಸುವ ಬಾಲಾಜಿ ‘ಟೈಗರ್ ಬಾಲಾಜಿ’ ಎಂದೇ ಫೇಮಸ್.ಮೈಸೂರಿನ ಖ್ಯಾತ ಕುಸ್ತಿಪಟು ಹಾಗೂ ದಸರಾ ವಜ್ರಮುಷ್ಠಿ ಕಾಳಗದ ಪ್ರಮುಖ ರೂವಾರಿ ಟೈಗರ್ ಬಾಲಾಜಿ ಅವರು ಜನವರಿ 30, 2026 ರಂದು ತಮ್ಮ 67 ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಹಿಂದೆ ಮಹಾರಾಜರು ಜಟ್ಟಿಗಳನ್ನ ತಮ್ಮ ಆಸ್ಥಾನದಲ್ಲಿ ನೋಡಿಕೊಳ್ಳುತ್ತಿದ್ದರು.
ರಾಜರು ಹತ್ತು ಆನೆಗಳನ್ನ ಸಾಕಬಹುದು.ಆದರೆ ಎರಡು ಕಾಲಿನ ಜಟ್ಟಿಗಳನ್ನ ಸಾಕೋಕಾಗುತ್ತಿರಲಿಲ್ಲವಂತೆ.

ವಜ್ರಮುಷ್ಠಿ ಕಾಳಗ ತರಬೇತಿಯು ಹಬ್ಬ ಆರಂಭವಾಗಲು ಎರಡು ತಿಂಗಳು ಇರುವಾಗ ಮೈಸೂರು ನಗರದ ಜಟ್ಟಿ ಸಮುದಾಯದ ಪೈಲ್ವಾನರಿಗೆ ಸಾಂಪ್ರದಾಯಿಕವಾಗಿ ನೀಡಲಾಗುತ್ತದೆ.

ಜಟ್ಟಿ ಸಮುದಾಯಕ್ಕೆ ಸೇರಿದ ಆಯ್ದ ಅನುಭವಿ ಕುಸ್ತಿಪಟುಗಳಿಗೆ ಮಾತ್ರ ಈ ತರಬೇತಿ ಸಿಗುತ್ತದೆ.
ದಸರಾ ಮಹೋತ್ಸವ ಆರಂಭವಾಗುವುದಕ್ಕೆ ಎರಡು ತಿಂಗಳು ಮುಂಚಿತವಾಗಿ ಈ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಆರಂಭವಾಗುತ್ತದೆ. ಸಾಂಪ್ರದಾಯಿಕ ಕುಸ್ತಿ ಪಟ್ಟುಗಳು, ಮೈಕಟ್ಟು ಕಾಪಾಡಿಕೊಳ್ಳುವುದು ಮತ್ತು ವಜ್ರಮುಷ್ಠಿ (ಬಾಳೆ ಅಥವಾ ಪ್ರಾಣಿಯ ಕೊಂಬಿನಿಂದ ಮಾಡಿರುವ ವಿಶೇಷ ಆಯುಧ) ಬಳಸಿ ಎದುರಾಳಿಯ ತಲೆಗೆ ಹೊಡೆಯುವ ತಂತ್ರಗಳನ್ನು ಕಲಿಸಲಾಗುತ್ತದೆ.

ಈ ಕಾಳಗವು ಅತ್ಯಂತ ಕಡಿಮೆ ಅಂದರೆ ಸುಮಾರು 30 ಸೆಕೆಂಡ್‌ಗಳಿಂದ 1 ನಿಮಿಷದವರೆಗೆ ಮಾತ್ರ ನಡೆಯುತ್ತದೆ. ಇಲ್ಲಿ ಸೋಲು-ಗೆಲುವಿನ ಪ್ರಶ್ನೆ ಇರುವುದಿಲ್ಲ, ಪರಂಪರೆಯ ರಕ್ಷಣೆಯೇ ಮುಖ್ಯವಾಗಿರುತ್ತದೆ

ಗೆಲುವಿನ ಸೂತ್ರ: ಪಂದ್ಯದ ವೇಳೆ ಎದುರಾಳಿಯ ತಲೆಗೆ ವಜ್ರಮುಷ್ಠಿಯಿಂದ ಹೊಡೆದು ರಕ್ತ ಬರಿಸಿದರೆ ಆ ಪೈಲ್ವಾನರನ್ನು ವಿಜೇತರೆಂದು ಘೋಷಿಸಲಾಗುತ್ತದೆ.

• ಬಕ್ಷೀಸ್ ಮತ್ತು ಗೌರವ: ಪಂದ್ಯ ಮುಗಿದ ನಂತರ ರಾಜವಂಶಸ್ಥರು (ಪ್ರಸ್ತುತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್) ಕಣದಲ್ಲಿದ್ದ ಜಟ್ಟಿಗಳಿಗೆ ರಾಜಮನೆತನದ ಸಂಪ್ರದಾಯದಂತೆ ನಗದು ಬಹುಮಾನ ಹಾಗೂ ಗೌರವಧನವನ್ನು ವಿತರಿಸುತ್ತಾರೆ.
ಒಂದು ವೇಳೆ ಪಂದ್ಯವು ಡ್ರಾ ಆದಲ್ಲಿ ಬಹುಮಾನವನ್ನು ಸಮನಾಗಿ ಹಂಚಲಾಗುತ್ತದೆ.

ವಿಜಯದಶಮಿಯ ದಿನದಂದು ಚಿನ್ನದ ಅಂಬಾರಿ ಅರಮನೆಯಿಂದ ಹೊರಡುವ ಮೊದಲು ಈ ಕಾಳಗ ನಡೆಯುತ್ತದೆ.

Leave a Reply

Your email address will not be published. Required fields are marked *