ನಂದಿನಿ ಮನುಪ್ರಸಾದ್ ನಾಯಕ್
ರೋಗಿಗಳ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೀವ ಉಳಿಸಲು ಮುಂದಾಗುವ ಅತ್ಯಂತ ಅಮೂಲ್ಯವಾದದ್ದು ಅಂದ್ರೆ ಅದು ಆ್ಯಂಬುಲೆನ್ಸ್.

ನಂಜನಗೂಡು ತಾಲೂಕು ಸುತ್ತೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಇಲ್ಲಿ ಆಂಬುಲೆನ್ಸ್ ಸೌಲಭ್ಯ ಇಲ್ಲದಿರುವುದನ್ನು ಮನಗಂಡ ಸುತ್ತೂರು ಗ್ರಾಮದ ಕೆ.ರಾಜೇಂದ್ರ ಎಂಬವರು ಜೀವ ಜ್ಯೋತಿ ಎಂಬ ಆಂಬುಲೆನ್ಸ್ ಅನ್ನು ಆರಂಭಿಸಿದ್ದು ಸುತ್ತೂರು ಗ್ರಾಮದ ಮಠದ ಗದ್ದಿಗೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ ಅನ್ನು ಸುತ್ತೂರು ಮಠದ ಶ್ರೀಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಜಿಯವರ ದಿವ್ಯ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.ಸುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಎಂ. ರಮ್ಯಾ ರವರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳವರು ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆ ಎಸ್ ಎಸ್ ಆಡಳಿತಾಧಿಕಾರಿ ಉದಯ , ಸು. ಕು.ಮಹಾದೇವಸ್ವಾಮಿ ದೇಶಿಕರ್, ಜೆ ಎಸ್ಎಸ್ ಶಿಕ್ಷಣ ಸಂಸ್ಥೆಯ ಸಂಯೋಜನಾಧಿಕಾರಿ ತ್ರಿಪುರಾಂತಕ, ಆರೋಗ್ಯ ನಿರೀಕ್ಷಣಾಧಿಕಾರಿ ರೋಹಿತ್, ಗ್ರಾಮದ ನಾಡ ಗೌಡರು ಮಾ ದಪ್ಪ ಮುಖಂಡರಾದ ಚಿನ್ನ ಬುದ್ಧಿ,ಚಿಕ್ಕ ಮಾದಪ್ಪ , ನಾಗರಾಜು,ಪ್ರಕಾಶ್,ಮಹದೇವಸ್ವಾಮಿ, ಕುಮಾರ್, ರಾಚಪ್ಪ,ಜನರೇಟರ್ ರಾಜು,ರಮೇಶ್, ಜಗದೀಶ್, ಮಹೇಶ, ಲಲಿತ ಹಾಗೂ ಜೆಎಸ್ಎಸ್ ಸಿಬ್ಬಂದಿ ವರ್ಗದವರು ಸುತ್ತೂರಿನ ಎಲ್ಲಾ ಕೋಮಿನ ಯಜಮಾನರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು