ದಸರಾ ವಿಶೇಷ:ನಂದಿನಿ ಮನುಪ್ರಸಾದ್ ನಾಯಕ್
ದಸರಾ ಗಜಪಡೆಯ ತೂಕ ಪರೀಕ್ಷೆ: 5,850 ಕೆ.ಜಿ. ತೂಗಿದ ಸುಗ್ರೀವ!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಆನೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ಎರಡನೇ ತಂಡದಲ್ಲಿ ಆಗಮಿಸಿರುವ ಸುಗ್ರೀವ ಆನೆ ಬರೋಬ್ಬರಿ 5,850 ಕೆ.ಜಿ. ತೂಕ ಹೊಂದಿರುವುದು ಗಮನ ಸೆಳೆದಿದೆ.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ & ಕೊ. ಧರ್ಮಕಾಂಟಾದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಜಂಬೂಸವಾರಿ ಹಾಗೂ ದಸರಾ ಮಹೋತ್ಸವದ ತಾಲೀಮಿನಲ್ಲಿ ಭಾಗವಹಿಸುವ ಆನೆಗಳ ದೈಹಿಕ ಸಾಮರ್ಥ್ಯ, ಆರೋಗ್ಯ ಮತ್ತು ತೂಕವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ.
ತೂಕ ಪರೀಕ್ಷೆಯಲ್ಲಿ ದಾಖಲಾಗಿರುವ ವಿವರ:
🔹 ಸುಗ್ರೀವ – 5,850 ಕೆ.ಜಿ.
🔹 ಚಿತ್ರಾ – 3,295 ಕೆ.ಜಿ.
🔹 ರೂಪಾ – 3,260 ಕೆ.ಜಿ.
ಈ ಪೈಕಿ ಸುಗ್ರೀವ 5.85 ಟನ್ ತೂಕದೊಂದಿಗೆ ಅತಿ ಭಾರೀ ಆನೆಯಾಗಿ ಗಮನ ಸೆಳೆದಿದೆ. ಜಂಬೂಸವಾರಿಯ ತಾಲೀಮುಗಳು ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ ಗಜಪಡೆಯ ದೈಹಿಕ ಸಾಮರ್ಥ್ಯದ ಪರಿಶೀಲನೆಯೂ ನಡೆಯುತ್ತಿದೆ.ಅರಮನೆ ಆವರಣದಲ್ಲಿ ವಿಧವಿಧವಾದ ಪೌಷ್ಟಿಕಾಂಶ ಆಹಾರ ಸೇವಿಸಿದ ನಂತರ ಇನ್ನಷ್ಟು ತೂಕ ಬರಲಿದೆ ಎಂದು ಕಾದಷ್ಟೇ ನೋಡಬೇಕಿದೆ.