ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವ: ಎನ್ ಶ್ರೀನಿವಾಸನ್

ನಂದಿನಿ ಮನುಪ್ರಸಾದ್ ನಾಯಕ್

 

ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವ: ಎನ್ ಶ್ರೀನಿವಾಸನ್


ಮೈಸೂರು: ವಿಜಯನಗರದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಪ್ರರಿಂದ ಸಾಮೂಹಿಕ
ಯಜುರುಪಾಕರ್ಮ
ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋ ಪವಿತ್ರಂ ಜನಿವಾರ ಬದಲಾಯಿಸಿಕೊಂಡು, ಸಂಧ್ಯಾವಂದನೆ, ಗಾಯತ್ರಿ ಜಪ, ನೆರೆವೇರಿಸುವ ಮೂಲಕ
ಆಚರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಎನ್ ಶ್ರೀನಿವಾಸನ್
ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ, 8ನೇ ವರ್ಷಕ್ಕೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸಿ ಗುರುಕುಲಕ್ಕೆ ಕಳಿಸುವ ಪಂಪರೆಯಿತ್ತು, ಯಜುರ್ ವೇದ ಋಗ್ವೇದ ಪ್ರಕಾರವಾಗಿ ಶಾಸ್ತ್ರಗಳನ್ನ ಪಾಲಿಸುವ ವೈದೀಕರು ತಮ್ಮ ಋಷಿಗಳಿಗೆ ಪೂಜಿಸಿ ಯಜ್ಞೋಪವೀತ ಜನಿವಾರ ಧಾರಣೆ ಮಾಡುವ ಉಪಾಕರ್ಮ‌ ಧರ್ಮರಕ್ಷಣೆಯ ಪ್ರತೀಕವಾಗಿದೆ, ಸಾವಿರಾರು ವರ್ಷಗಳ ಹಿಂದೆ ಸಂವತ್ಸರಗಳ ಹಬ್ಬಗಳಲ್ಲಿ ಪಂಚಾಂಗ ನಿರ್ಣಯಿಸಿರುವಂತೆ ಮಹೂರ್ತ ಆಚರಣೆ ಪಾಲಿಸುವ ಕ್ರಮಕ್ಕೆ ಮೊದಲೇ ನಿಶ್ಚಯಿಸಿರುತ್ತದೆ ಎಂದರೆ ಸನಾತನ ಧರ್ಮದ ಶಕ್ತಿಯ ಸಂಕೇತವಾಗಿದೆ ಎಂದರು

ಉಪಾಕರ್ಮ ಆಚರಣೆಯಿಂದ ಮನುಷ್ಯನು ತನಗೆ ಅರಿವಿಲ್ಲದೇ ಮಾಡಿದ ಪಾಪ ಕರ್ಮದಿಂದ ಮುಕ್ತಿ ಹೊಂದಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ದೇವ ಹಾಗೂ ಪಿತೃ ಋಣ ತೀರಿಸಲು ದರ್ಪಣ ನೀಡಿ ಋಣಭಾರವನ್ನು ಕಡಿಮೆ ಮಾಡಿಕೊಳ್ಳುವ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕ ಪಡಿಸಿಕೊಳ್ಳುವುದು ಮುಖ್ಯವಾಗಿದೆ. ಪವಿತ್ರವಾದ ವೇದವನ್ನು ಮನುಕುಲಕ್ಕೆ ಕೊಟ್ಟಿರುವ ಋಷಿ ಮುನಿಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.
ಪ್ರತಿಯೊಬ್ಬರೂ ಸಂಧ್ಯಾವಂದನೆ ಹಾಗೂ ಶ್ರೀ ಗಾಯತ್ರಿ ಉಪಾಸನೆ ಮಾಡುವುದು ಅಗತ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಚಕ್ರಪಾಣಿ, ಗಿರೀಶ್, ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *