ನ. 8 ಮತ್ತು 9 ತುಂಬಲ ಗ್ರಾಮದ ಮೈದಾನದಲ್ಲಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2

ನಂದಿನಿ ಮನುಪ್ರಸಾದ್ ನಾಯಕ್

ಟಿ.ನರಸೀಪುರ

ಈ ಕ್ರಿಕೆಟ್ ಅಂದರೆ ಹೀಗೆ ನೋಡಿ‌ ಇದು ಕೇವಲ ಒಂದು ಕ್ರೀಡೆಯಾಗಿ ಉಳಿದಿಲ್ಲ ಜನ ಜೀವನದ ಒಂದು ಭಾಗವಾಗಿಯೇ ಹೋಗಿದೆ ಅದಕ್ಕೆ ಒಂದು ಸ್ಪಷ್ಟ ಉದಾಹರಣೆ ಟಿ.ನರಸೀಪುರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2

ಮನುಷ್ಯನಿಗೆ 30 ವರ್ಷ ಕಳೆದಂತೆ ಜವಾಬ್ದಾರಿ ಎಂಬ ಮೂಟೆಗಳ ಬಾರಕ್ಕೆ ಹಲವು ಮನೊರಂಜನೆಗಳನ್ನು ಕಳೆದುಕೊಳ್ಳುತ್ತಾ ಕಾಲಕ್ರಮೇಣ ಅದರಿಂದ ದೂರವೆ ಉಳಿದು ಬಿಡುತ್ತಾರೆ. ವಾರಂತ್ಯಾದ ರಜೆಯಲ್ಲಿ ಸ್ನೇಹಿತರ ಜೊತೆ ಬೈ-ಟು ಟೀ ಸ್ವಾದದಲ್ಲಿ ಬ್ಯಾಟು ಬಾಲ್ ಹಿಡಿದು ಓಡಾಡುವ ಹುಡುಗರ ಕಂಡು ತಮ್ಮ ಆಟಗಳನ್ನು ನೆನಪು ಮಾಡಿಕೊಳ್ಳುತ್ತಾ ಇದೀಗ ಅದೆಲ್ಲವೂ ಸಾಧ್ಯವಾಗೊಲ್ಲ ಅನ್ನೊ ಬೇಸರದ ಮಾತುಗಳನ್ನು ಆಡುವುದುಂಟು.

ವಯಸ್ಸಿನ ಕಾರಣಕ್ಕೊ ಏನೋ ಸಮಯ ಸಿಕ್ಕರೂ ವಯಸ್ಸಿನ ಹುಡುಗರೊಂದಿಗೆ ಆಟಕ್ಕಿಳಿಯದೆ ಮರದ ನೆರಳಿನಲ್ಲಿ ಕೂತು ಆ ಬಾಲ್ ಹೀಗೆ ಆಡಬೇಕಿತ್ತು, ವಿಕೆಟ್ ಕವರ್ ಮಾಡಿ ಲೆಗ್ ಸೈಡ್ ನಲ್ಲಿ ಆಡಬೇಕಿತ್ತು ಎಂದು ಹೇಳುತ್ತಾ ಕೆಲವೊಮ್ಮೆ ನೀ ಬ್ಯಾಟ್ ಹಿಡಿದು ಆಡು ಮಾತನಾಡಿದಷ್ಟು ಸುಲಭವಲ್ಲ ಎಂದು ಕಿರಿಯರ ಎದುರು ಮಾತಿಗೆ ವಾದ ಮಾಡುತ್ತಾ ಭಾನುವಾರ ಮುಗಿಸಿ ಸೋಮವಾರದಿಂದ ಮತ್ತೆದೆ ಜವಾಬ್ದಾರಿಗಳ ಬೆನ್ನೇರಿ ಓಟ ಪ್ರಾರಂಭಿಸುತ್ತಾರೆ.

ಇಂತಹವರಿಗೊಂದು ಅವಕಾಶ ಕಲ್ಪಿಸಿ ಮತ್ತೆ ಅವರ ಕ್ರಿಕೆಟ್ ನೆನಪುಗಳನ್ನು ಆಟದೊಂದಿಗೆ ಅವರಿಗೆ ಹಿಂದಿರುಗಿಸಲು ಟಿ.ನರಸೀಪುರದ ಅಭಿ ಆನಂದ್ ಬ್ಲಾಸ್ಟರ್ಸ್, ಎಂಸಿಸಿ ತಂಡ ವಿಭಿನ್ನ ಪ್ರಯತ್ನಕ್ಕೆ ಎರಡನೇ ಬಾರಿ ಕೈಹಾಕುತ್ತಿದೆ.

ಮೈಸೂರು , ಮಂಡ್ಯ ಚಾಮರಾಜನಗರ ಗ್ರಾಮಾಂತರ ಭಾಗದ 35 ವರ್ಷ ಮೇಲ್ಪಟ್ಟ ಆಟಗಾರಿಗೆಂದೆ ಟಿ.ನರಸೀಪುರ ಲೆಜೆಂಡ್ಸ್ ಲೀಗ್ ಆಯೋಜನೆ ಮಾಡಲಾಗಿದ್ದು ನಂವೆಂಬರ್ 8 ಮತ್ತು 9ರಂದು ಈ ಪಂದ್ಯಾವಳಿಗಳು ತುಂಬಲ ಗ್ರಾಮದ ಮೈದಾನದಲ್ಲಿ ನೆಡೆಯಲಿವೆ.

ಲೀಗ್ ನಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ಮತ್ತು ಟ್ರೋಫಿ ದ್ವಿತೀಯ ಬಹುಮಾನವಾಗಿ 25 ಸಾವಿರ ಬಹುಮಾನದೊಂದಿಗೆ ಟ್ರೋಫಿ ನೀಡಲಾಗುತ್ತಿದ್ದ ಎಂಟ್ರಿ ಫಿ 7ಸಾವಿರ ನಿಗಧಿ ಪಡಿಸಿದ್ದಾರೆ.

35 ವರ್ಷ ಮೆಲ್ಪಟ್ಟ ಕ್ರಿಕೆಟ್ ಆಸಕ್ತರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು ತಮ್ಮ ತಂಡಗಳೊಂಡನೆ ಹಳೆ ಉತ್ಸಾಹವನ್ನು ಮರಳಿತಂದು ಮೈದಾನಕ್ಕೆ ಇಳಿಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಮಹೇಶ್ 9916735968
ಇಮ್ರಾನ್ 9741168477

Leave a Reply

Your email address will not be published. Required fields are marked *