ಭರತನಾಟ್ಯ ಕರ್ನಾಟಕ ಸಂಗೀತದ ಆಧಾರದ ಮೇಲೆ ಪ್ರದರ್ಶನ-ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ

ನಂದಿನಿ ಮನುಪ್ರಸಾದ್ ನಾಯಕ್

*ಚಿದಂಬರನಟೇಶ ನಾಟ್ಯ ಶಾಲೆಯ ನೃತ್ಯ ಆರಾಧನಾ 2025-2026 ಕಾರ್ಯಕ್ರಮ ಯಶಸ್ವಿ*

*ಭರತನಾಟ್ಯ ಕರ್ನಾಟಕ ಸಂಗೀತದ ಆಧಾರದ ಮೇಲೆ ಪ್ರದರ್ಶನ-ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ*

ಮೈಸೂರು : ಪ್ರಾಚೀನ ಭರತನಾಟ್ಯವನ್ನು ಕರ್ನಾಟಕ ಸಂಗೀತದ ಆಧಾರದ ಮೇಲೆ ಪ್ರದರ್ಶಿಸಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದಲ್ಲಿರುವ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಚಿದಂಬರನಟೇಶ ನಾಟ್ಯ ಶಾಲೆ ಟ್ರಸ್ಟ್ ಆಯೋಜಿಸಿದ್ದ ನೃತ್ಯ ಆರಾಧನಾ 2025-26 ಶಾಸ್ತ್ರೀಯ ಭರತನಾಟ್ಯ ಮತ್ತು ಹಿರಿಯ ಕಲಾವಿದರಿಗೆ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭರತ ಎಂಬ ಪದವು ಭಾವ,ರಾಗ,ತಾಳ ಎಂಬ ಮೂರು ಅಂಶಗಳನ್ನು ಸೂಚಿಸುತ್ತದೆ. ನಾಟ್ಯದ ಮೂಲಕ ಅನಾರವಣಗೊಳ್ಳುತ್ತಿದೆ, ಕರ್ನಾಟಕ ಸಂಗೀತದ ಮೇಲೆ ಭರತನಾಟ್ಯ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.

ಭರತನಾಟ್ಯ ಕೇವಲ ನೃತ್ಯವಲ್ಲ, ಅದು ಭಕ್ತಿ, ಕಲಾತ್ಮಕ ಕೌಸಲ್ಯ, ಧ್ಯಾನದ ಒಂದು ರೂಪ, ಆಂಗೀಕ ಅಭಿನಯ. ಪ್ರಾಚೀನ ಕಾಲದಲ್ಲಿ ದೇವಾಲಯಗಳಲ್ಲಿ ದೇವರ ಸೇವೆಯಾಗಿ ಪ್ರಾರಂಭವಾದ ಇದು ಇಂದಿಗೂ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದೆ, ಮುಸ್ಲೀಂ ರಾಷ್ಟ್ರಗಳಲ್ಲೂ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ತಿಳಿಸಿದರು.

*ಧಾರ್ಮಿಕ ಸ್ಥಳಗಳ ಭಾವನಾತ್ಮಕ ಭಕ್ತಿಗೆ ಧಕ್ಕೆ ಆಗುವುದು ನಿಲ್ಲಲಿ* – ಡಾ.ಈ.ಸಿ.ನಿಂಗರಾಜ್ ಗೌಡ

ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ, ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ, ಇತ್ತೀಚಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಮತ್ತು ಹಿಂದೂ ಧಾರ್ಮಿಕ ಆಚರಣೆಯ ಭಾವನೆಗಳ ಮೇಲೆ ಕಿಡಿಕೇಡಿಗಳು ಷಡ್ಯಂತ್ರ ರೂಪಿಸಿವುದು ಹೆಚ್ಚಾಗುತ್ತಿದೆ, ಧರ್ಮಸ್ಥಳ, ಚಾಮುಂಡಿ ಬೆಟ್ಟ, ಮೈಸೂರು ದಸರಾ ಮತ್ತು ಕೇರಳದ ಅಯ್ಯಪ್ಪಸ್ವಾಮಿ ದೇವಾಲಯಗಳ ಮೇಲೆ ಅಪಪ್ರಚಾರದ ಪ್ರಭಾವ ಬೀರುವಂತೆ ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.

ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ಜನತೆಗೆ ಒಂದು ಸುಳ್ಳನ್ನು ನೂರುಬಾರಿ ಹೇಳಿ ಸತ್ಯಮಾಡುವ ನಿಟ್ಟಿನಲ್ಲಿ ಹೊರಟಿರುವ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ, ಜನತೆ ಉಗ್ರವಾಗಿ ಖಂಡಿಸುವ ನೈತಿಕತೆ ಬೆಳಸಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೋಡುಗರ ಮನ ಸೊರೆಗೊಂಡಿತು.

ಮಾಜಿ ಶಾಸಕರಾದ ಎಲ್.ನಾಗೇಂದ್ರರವರು ಶ್ರೀನಟರಾಜ ವಿಗ್ರಹಕ್ಕೆ ಪುಷ್ಫಾರ್ಚನೆ ಮಾಡಿದರು.
ಕಾರ್ಯಕ್ರಮವನ್ನೂ BJP ಯ ರಾಜ್ಯ ಮಾದ್ಯಮ ವಕ್ತಾರರಾದ ಎಂ.ಜಿ. ಮಹೇಶ್ ರವರು ಉಧ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಡಾ.ಅನಿಲ್ ಧಾಮಸ್, ವಕೀಲರಾದ ವಿನಯಬಾಬು, ಮೈಸೂರು ಪಿಟೀಲು ವಾದಕರಾದ ಆರ್.ಶ್ರೀಕಾಂತ್ ರವರು ಗೌರವ ಸನ್ಮಾನವನ್ನೂ ಸ್ವೀಕರಿಸಿದರು. ನಾಟ್ಯ ವಿದುಷಿ ಸುನೀತಾ ನಂದಕುಮಾರ್ , ವ್ಯವಸ್ಥಾಪಕ ನಿರ್ದೇಶಕ ಎಸ್.ನಂದಕುಮಾರ್, ಕಾರ್ಯಕ್ರಮದ ನಿರೂಪಣೆಯನ್ನೂ ಶ್ರೀಮತಿ ಭವಾನಿ ಲೋಕೇಶ್ ಮಂಡ್ಯ ರವರು ಮಾಡಿದರು. ಬಿ.ಕೆ.ಸುಪ್ರೀತ್, ವಕೀಲರಾದ ಭರತ್ ಮತ್ತು ಮತ್ತೀತರರು ಇದ್ದರು.

Leave a Reply

Your email address will not be published. Required fields are marked *