ಮೈಸೂರು ವಿವಿ ಉಷಾ ರಾಣಿ ಎಂ.ಸಿ ಅವರಿಗೆ ಪಿಹೆಚ್.ಡಿ ಪದವಿ ಪ್ರದಾನ

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರು ವಿವಿ ಉಷಾ ರಾಣಿ ಎಂ.ಸಿ ಅವರಿಗೆ ಪಿಹೆಚ್.ಡಿ ಪದವಿ ಪ್ರದಾನ*


*ಉಪಶೀರ್ಷಿಕೆ:* _ಕಾನೂನು ವಿಷಯದಲ್ಲಿ ‘Legal Regime on Right to Maintenance’ ಕುರಿತು ಮಹಾಪ್ರಬಂಧ ಮಂಡನೆ_

ಮೈಸೂರು:ಮೈಸೂರು ವಿಶ್ವವಿದ್ಯಾನಿಲಯವು ಕಾನೂನು ವಿಭಾಗದಲ್ಲಿ ಉಷಾ ರಾಣಿ ಎಂ.ಸಿ ಅವರಿಗೆ ಪಿಹೆಚ್.ಡಿ ಪದವಿ ನೀಡಿ ಗೌರವಿಸಿದೆ.

ಸಿಂಡಿಕೇಟ್‌ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಾನುಸಾರವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ, ಡಾ. ರಮೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಉಷಾ ರಾಣಿ ಎಂ.ಸಿ ಅವರು ಸಾದರಪಡಿಸಿದ _”Legal Regime on Right to Maintenance – a Critical Appraisal”_ ಎಂಬ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ.

ಈ ಮಹಾಪ್ರಬಂಧವನ್ನು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಲಾಗಿದ್ದು, ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಉಷಾ ರಾಣಿ ಎಂ.ಸಿ ಅವರಿಗೆ ಪಿಹೆಚ್.ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಮೌಲ್ಯಮಾಪನ ವಿಭಾಗದ ಕುಲಸಚಿವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *