ಕೃಷಿಯಿಂದ ಮಾತ್ರ ಮತ್ತೆ ಭಾರತ ವಿಶ್ವಗುರು ಸಾಂಪ್ರದಾಯ ವ್ಯವಸಾಯದಿಂದ ಆತ್ಮ ನಿರ್ಭಾರ ಭಾರತ ನಿರ್ಮಾಣ- ಚಂದನ್ ಗೌಡ

ನಂದಿನಿ ಮನುಪ್ರಸಾದ್ ನಾಯಕ್

ಕೃಷಿಯಿಂದ ಮಾತ್ರ ಮತ್ತೆ ಭಾರತ ವಿಶ್ವಗುರು


ಸಾಂಪ್ರದಾಯ ವ್ಯವಸಾಯದಿಂದ ಆತ್ಮ ನಿರ್ಭಾರ ಭಾರತ ನಿರ್ಮಾಣ- ಚಂದನ್ ಗೌಡ

ಮೈಸೂರು: ಕೃಷಿ ಕ್ಷೇತ್ರವು ಭಾರತದ ಆರ್ಥಿಕತೆಯ ಬೆನ್ನೆಲುಬು ಮಾತ್ರವಲ್ಲ, ಆರ್ಥಿಕತೆಯ ತಾಯಿ ನಾಗರಿಕತೆಯ ಮೂಲ ಕೃಷಿ ನಾಗರಿಕತೆಯ ಅಡಿಪಾಯವಾಗಿದ್ದು,ಋಗ್ವೇದ ಕಾಲದಿಂದಲೂ ಕೃಷಿ ಮನುಕುಲವನ್ನು ಉಳಿಸಿ ಬೆಳೆಸಿ ಕಾಪಾಡಿದ ಮುಖ್ಯ ಕ್ಷೇತ್ರವಾಗಿದೆ ಎಂದು ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಅಭಿಪ್ರಾಯಪಟ್ಟರು.

ಸರಗೂರು ತಾಲ್ಲೂಕು ಇಟ್ನಾ ಗ್ರಾಮದ ರೈತಬಾಂಧವರೆಲ್ಲ ಸೇರಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತಕಲ್ಯಾಣ ಸಂಘದ ನಾಮಫಲಕ ಹಾಗೂ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಪಂಚಕ್ಕೆ ಕೃಷಿ ಹೇಳಿ ಕೊಟ್ಟಿರುವ ದೇಶ ಪ್ರಪಂಚದ ಹಸಿವನ್ನ ನೀಗಿಸುವ ಕ್ಷೇತ್ರ ಇಂದಿಗೂ ಕೃಷಿ ಕ್ಷೇತ್ರದಿಂದಲೇ ಎಲ್ಲಾ ಉದ್ದಿಮೆ ಕ್ಷೇತ್ರಗಳು ನಡೆಯುತ್ತಾ ಬಂದಿರುವ ಈ ಕಾಲಮಾನದಲ್ಲಿ ಮತ್ತೊಮ್ಮೆ ಈ ದೇಶವನ್ನು ವಿಶ್ವ ಗುರುವನ್ನಾಗಿಸುವ ಹಾಗೂ ಭವ್ಯ ಭಾರತ ನಿರ್ಮಾಣ ಮಾಡುವ ಪ್ರಮುಖ ಶಕ್ತಿ ಕೇಂದ್ರವಾಗಿದೆ ಎಂದರು.
ಇಡೀ ಜಗತ್ತನ್ನೇ ನಮ್ಮ ದೇಶದತ್ತ ಬರಮಾಡಿಕೊಂಡಂತ ಕ್ಷೇತ್ರ ಇದ್ದರೆ ಅದುವೇ ಕೃಷಿ ಕ್ಷೇತ್ರ. ಒಂದು ಕಾಲದಲ್ಲಿ 33% ಜಿಡಿಪಿಯನ್ನ ಕೊಟ್ಟ ಕೃಷಿ ಕ್ಷೇತ್ರ ಜಗತ್ತಿನಲ್ಲಿ ಅತ್ಯಂತ ಶ್ರೀಮಂತವಾಗಿದ್ದ ಈ ನಮ್ಮ ದೇಶದಲ್ಲಿ ವಸಾಹಾತುಶಾಹಿಗಳು ಭಾರತದ ಮೇಲೆ ಅಕ್ರಮಣ ಮಾಡಿ ಅಪಾರ ಪ್ರಮಾಣದ ಸಾಂಬಾರ ಪದಾರ್ಥಗಳು ಕಚ್ಚ ಪದಾರ್ಥಗಳು ಚಿನ್ನ, ವೈಡೂರ್ಯಗಳನ್ನೆಲ್ಲ ಲೂಟಿ ಮಾಡಿ ಶ್ರೀಮಂತವಾಗಿದ್ದ ಈ ನಮ್ಮ ದೇಶವನ್ನ ಬಡ ದೇಶವನ್ನಾಗಿ ಮಾಡಿರುವ ಕಹಿ ಘಟನೆಯನ್ನು ಇಂದಿಗೂ ನಾವು ಮರೆಯಬಾರದು ಎಂದ ಚಂದನ್ ಗೌಡ, ಇದಕ್ಕೆಲ್ಲ ಕಾರಣ ಈ ಭೂಮಿ ತಾಯಿಯ ಮಡಿಲಿನ ಮಣ್ಣು. ಈ ನಮ್ಮ ದಖನ್ ಪ್ರಸ್ಥಭೂಮಿಯ ಮಣ್ಣಿಗೆ ಬರಗಾಲ ಎಂಬುದೇ ಗೊತ್ತಿರಲಿಲ್ಲ. ಇದೇ ಮಣ್ಣಿನಲ್ಲಿ ಚಿನ್ನವನ್ನ ಉತ್ಪಾದಿಸಿರುವ ನಾವು ಇವತ್ತು ಕೇವಲ ಬೆಳೆ ಬೆಳೆಯುವುದರಲ್ಲಿ ಸೋಲುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ಏನು ಎಂಬ ಸತ್ಯವನ್ನ ನಮ್ಮ ರೈತರು ಆತ್ಮಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಹಸಿರು ಕ್ರಾಂತಿ ಎಂಬ ಭ್ರಮೆಯಿಂದ ಅತಿ ಹೆಚ್ಚು ರಾಸಾಯನಿಕ ಬಳಕೆ, ಕೀಟನಾಶಕ, ಕಳೆನಾಶಕ ಬಳಕೆಯಿಂದ ಹಾಗೂ ಕುಲಾಂತರಿ ಎಂಬ ಬೀಜಗಳ ಅವಾಂತರದ ಫಲದಿಂದ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ರಾಜಧಾನಿಯಾಗಿ ಮಾರ್ಪಾಡಾಗುತ್ತಿದೆ.ಇದರಿಂಂದಾಗಿ ಅತಿ ಹೆಚ್ಚು ರೋಗ ರುಜಿನಗಳಿಂದ ನರಳಾಡುವ ಪರಿಸ್ಥಿತಿಗೆ ಮನುಕುಲ ಬಂದು ನಿಂತಿದೆ.
ತಾವು ಸಂಪಾದಿಸುವ ಹಣದಲ್ಲಿ ಬರೆ ಮಾತ್ರೆ ಆಸ್ಪತ್ರೆಗಳಿಗೆ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಇಂದಿನ ಜನಸಾಮಾನ್ಯರು ಬದುಕುತ್ತಿದ್ದಾರೆ. ಹೀಗೆ ಮುಂದುವರೆದರೆ ಕೇವಲ ಆಸ್ಪತ್ರೆಗಳನ್ನ ಮಾತ್ರ ನಾವು ನೋಡಲು ಸಾಧ್ಯವಾಗುತ್ತದೆ ಎಂಬ ನೋವು ನಮ್ಮನ್ನು ಕಾಡುತ್ತಿದೆ.ಇದಕ್ಕೆಲ್ಲಾ ಕಾರಣವಾದ ಪ್ರಕೃತಿ ವಿರುದ್ಧವಾಗಿ ರಾಸಾಯನಿಕ ಬಳಸಿ ಕೃಷಿ ಮಾಡುವ ಪದ್ಧತಿ ತ್ಯಜಿಸಿ, ಸಾಂಪ್ರದಾಯಕ ಕೃಷಿಗೆ ಹೆಚ್ಚಿನ ಒತ್ತುಕೊಟ್ಟು ನಿಮ್ಮ ಹಾಗೂ ಈ ಸಮಾಜದ ಆರೋಗ್ಯವನ್ನ ಕಾಪಾಡುವ ಜವಾಬ್ದಾರಿ ನಮ್ಮ ರೈತರ ರೈತರ ಮೇಲಿದೆ ಎಂದು ಸಲಹೆ ನೀಡಿದರು.
ಈ ವೇಳೆ ರಾಜ್ಯ, ಜಿಲ್ಲಾ, ತಾಲೂಕು‌ ಘಟಕದ ಪದಾಧಿಕಾರಿಗಳು,ರೈತರು,
ಗ್ರಾಮದ ಯಜಮಾನರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್..

ಕುಲಾಂತರಿ ಮುಕ್ತ ಕೃಷಿ ನಿರ್ಮಾಣವಾಗಲಿ

ಮೈಸೂರು: ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಚಿನ್ನದ ನಾಡು, ಗಂಧದ ಬೀಡು ಎಂದೇ ಪ್ರಖ್ಯಾತಿಯಾಗಿದ್ದ ಹಳೆ ಮೈಸೂರು ಪ್ರಾಂತ್ಯ ಕುಲಾಂತರಿ ಮುಕ್ತ ಪ್ರಾಂತ್ಯವಾಗಲಿ ಎಂದು ಇದೇ ವೇಳೆ ಚಂದನ್ ಗೌಡ ಆಗ್ರಹಿಸಿದರು.
ಅರಮನೆಗಳ ನಗರಿಯ ಬದನೆ, ವೀಳ್ಯದೆಲೆ ಅವರೆಕಾಯಿ, ಮಲ್ಲಿಗೆ ಮುಂತಾದ ಬೆಳೆಗಳ ಅನನ್ಯ ರುಚಿ ಸುವಾಸನೆ ಸ್ವಾದಿಷ್ಟತೆ ಮರೆಯಾಗಿ ಇಂದು ಹತ್ತಿ, ಸೋಯಾ ಜೋಳ ಅಡುಗೆ ಎಣ್ಣೆ, ಬದನೆ ಈರುಳ್ಳಿ ಟೊಮೊಟೊ ಕ್ಯಾರೆಟ್ ಪಪ್ಪಾಯಿ ಕಲ್ಲಂಗಡಿ ಅನಾನಸ್ ಸೇಬು ಇತ್ಯಾದಿ ಬೆಳೆಗಳನ್ನ ಕುಲಾಂತರಿಯಾಗಿ ಬೆಳೆಯಲು ಸಂಶೋಧನೆಗಳು ನಡೆಯುತ್ತಿದೆ. ಈ ಸಂಶೋಧನೆಗಳು ನಿಲ್ಲಲಿ ಎಂದ ಅವರು, ನೈಸರ್ಗಿಕ ಸ್ಥಳೀಯ ತಳಿಗಳ ಸಂರಕ್ಷಣೆ ನಿರ್ಮಾಣ ಆಗಲಿ ಎಂದರು.
ಕುಲಾಂತರಿ ಸೃಷ್ಟಿ ಮಾಡಿದ ಫ್ರಾನ್ಸ್. ಯುಎಸ್ಎ ಹಾಗೂ ನೂರಾರು ದೇಶಗಳಲ್ಲಿ ದೇಶಗಳಲ್ಲಿ ತಿರಸ್ಕಾರ ಹಾಗೂ ನಿಷೇಧವಾಗಿರುವ ಈ ಅವಾಂತರ ಕುಲಾಂತರಿಯನ್ನ ದೇಶಿಯ ಬೀಜಗಳ ಬ್ಯಾಂಕ್ ಎಂದೇ ಪ್ರಖ್ಯಾತಿಯಾಗಿರುವ ದಖ್ಖನ್ ಪ್ರಸ್ಥಭೂಮಿಯಲ್ಲಿ ಅತ್ಯಂತ ಫಲವತ್ತತೆ ಆಗಿರುವ ಕೃಷಿಗೆ ಪೂರಕವಾದ ವಾತಾವರಣ ಇರುವ ಈ ನಮ್ಮ ದೇಶಕ್ಕೆ ಯಾಕೆ ಬೇಕು? ಎಂದು ಪ್ರಶ್ನಿಸಿದರು.

ಕೋಟ್..
ಕುಲಾಂತರಿ ಎಂಬ ಬೀಜಗಳ ಅವಾಂತರದ ಫಲದಿಂದ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ರಾಜಧಾನಿಯಾಗಿ ಮಾರ್ಪಾಡಾಗುತ್ತಿದೆ.ಇದರಿಂಂದಾಗಿ ಅತಿ ಹೆಚ್ಚು ರೋಗ ರುಜಿನಗಳಿಂದ ನರಳಾಡುವ ಪರಿಸ್ಥಿತಿಗೆ ಮನುಕುಲ ಬಂದು ನಿಂತಿದೆ.
ತಾವು ಸಂಪಾದಿಸುವ ಹಣದಲ್ಲಿ ಬರೆ ಮಾತ್ರೆ ಆಸ್ಪತ್ರೆಗಳಿಗೆ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಇಂದಿನ ಜನಸಾಮಾನ್ಯರು ಬದುಕುತ್ತಿದ್ದಾರೆ.

ಭೂಮಿಪುತ್ರ ಸಿ.ಚಂದನ್ ಗೌಡ
ರಾಜ್ಯಾಧ್ಯಕ್ಷರು,.ರೈತ ಕಲ್ಯಾಣ ಸಂಘ

Leave a Reply

Your email address will not be published. Required fields are marked *