ಅಠಾತ್ ಹೃದಯಾಘಾತದಿಂದ ಉಸಿರು ಚಲ್ಲಿದ ಸಂಜೆವಾಣಿ ಪತ್ರಿಕೆ ಹರೀಶ್ ಕುಮಾರ್ ಸಿಂಗ್

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರು: ಏ.28
ಹರೀಶ್ ಕುಮಾರ್ ಸಿಂಗ್ ( 49 ) ವರ್ಷ ಸೋಮವಾರ ರಾತ್ರಿ 11:30 ಗಂಟೆಗೆ ಅಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರಿನ ಮಾಗಡಿಯಲ್ಲಿರುವ ತಮ್ಮ ಮನೆಯಲ್ಲಿ ಉಸಿರು ಚಲ್ಲಿದ್ದಾರೆ.ಮೈಸೂರಿನ
ಸಂಜೆವಾಣಿ ವಾಣಿ ಸಂಜೆ ದಿನಪತ್ರಿಕೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಜಾಹೀರಾತು ವಿಭಾಗದಲ್ಲಿ ಎರಡು ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಾರೆ. ಇವರು
ಪತ್ನಿ,ಓರ್ವ ಪುತ್ರ ಹಾಗೂ ಅಪರ ಬಂಧು ಮಿತ್ರರನ್ನು ಅಗಲಿ ಹೋಗಿದ್ದಾರೆ.
ಹರೀಶ್ ಕುಮಾರ್ ಸಿಂಗ್ ಅವರ ಅಕಾಲಿಕ ನಿಧನಕ್ಕೆ ಸಂಜೆವಾಣಿ ಸಂಪಾದಕ ಮಂಡಳಿ, ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹಾಗೂ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಅವರ ನಿಧನ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂಜೆವಾಣಿ ಪ್ರಧಾನ ಸಂಪಾದಕರು ಕಂಬನಿ ಮಿಡಿದಿದ್ದಾರೆ.
ಇವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಇಂದು ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


Leave a Reply

Your email address will not be published. Required fields are marked *