ನಂದಿನಿ ಮನುಪ್ರಸಾದ್ ನಾಯಕ್
*ಮೈಸೂರು ಭಾಗದ ನಾಯಕ ಸಮುದಾಯಕ್ಕೆ ರಾಜಕೀಯ ಅನ್ಯಾಯ*

ಮೈಸೂರು ಭಾಗದ ನಾಯಕ ಸಮುದಾಯದ ಬಹುಕಾಲದ ನಿರೀಕ್ಷೆಗಳು ಮತ್ತೆ ನಿರಾಶೆಯಾಗಿ ಪರಿಣಮಿಸಿರುವುದು ಬೇಸರದ ಸಂಗತಿಯಾಗಿದೆ. ಹಳೇ ಮೈಸೂರು ಭಾಗದ ಹಿರಿಯ ರಾಜಕೀಯ ನಾಯಕರನ್ನು ಕಡೆಗಣಿಸಿ, ಏಕೈಕ ಶಾಸಕರಿಗೆ ಸಚಿವ ಸ್ಥಾನ ಸಿಗುವ ಭರವಸೆಯೂ ನಾಟಕೀಯವಾಗಿ ಉಳಿದಿರುವುದು ಸಮುದಾಯದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇದು ನಾಯಕ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ ಸಮಯ. ಇನ್ನಾದರೂ ನಾವು ಒಗ್ಗಟ್ಟಿನ ಮಂತ್ರ ಜಪಿಸದಿದ್ದರೆ, ಮೈಸೂರು ಭಾಗದಲ್ಲಿ ನಮ್ಮ ಸಮುದಾಯದ ಪಾಲಿನ ಏಕೈಕ ಶಾಸಕ ಸ್ಥಾನವೂ ಮುಂದಿನ ದಿನಗಳಲ್ಲಿ ಕೈತಪ್ಪುವ ಅಪಾಯವಿದೆ.
ಮೈಸೂರು ಭಾಗದ ಪ್ರಬಲ ಧ್ವನಿಗಳು ಇಂದು ಮೌನವಾಗಿದ್ದರೆ, ನಾಳೆ ನಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಅವಕಾಶವೇ ಕಳೆದುಹೋಗಬಹುದು. ಆದ್ದರಿಂದ ಮೌನದಲ್ಲೇ ಸಂಕಟಪಡುವ ಬದಲು, ಸಮುದಾಯದ ನ್ಯಾಯಯುತ ಹಕ್ಕುಗಳಿಗಾಗಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಸಂಘಟಿತವಾಗಿ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
– ಡಾ. ಕುಮಾರ ಬಂಡಳ್ಳಿ