ನಂದಿನಿ ಮನುಪ್ರಸಾದ್ ನಾಯಕ್
ಜೆಇಇ ಮೇನ್ 2026: ಕರ್ನಾಟಕದಲ್ಲಿ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳ ಜಯಭೇರಿ, ಆದರ್ಶ್ ಕುಮಾರ್ ಬೆಹೆರಾಗೆ ಎಐಆರ್ (AIR) 43ನೇ ರ್ಯಾಂಕ್

ನಿರಂತರ ಅಭ್ಯಾಸ, ಶಿಸ್ತುಬದ್ಧ ಸಿದ್ಧತೆ ಹಾಗೂ ಸಮರ್ಪಕ ಮಾರ್ಗದರ್ಶನದಿಂದ ರಾಜ್ಯದ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
ಮೈಸೂರು: ಜೆಇಇ ಮೇನ್ 2026ರ ಫಲಿತಾಂಶದಲ್ಲಿ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಸಂಸ್ಥೆಯ ಕರ್ನಾಟಕದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ರಾಜ್ಯದ ವಿವಿಧ ಕೇಂದ್ರಗಳಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅತ್ಯುನ್ನತ ರ್ಯಾಂಕ್‌ಗಳನ್ನು ಗಳಿಸಿದ್ದು ಆಕಾಶ್ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಈ ಸಾಧಕರ ಪೈಕಿ ಆದರ್ಶ್ ಕುಮಾರ್ ಬೆಹರಾ ಮುಂಚೂಣಿಯಲ್ಲಿದ್ದಾರೆ. ಇವರು ಆಲ್ ಇಂಡಿಯಾ ರ್ಯಾಂಕಿಂಗ್‌ನಲ್ಲಿ (AIR) 43ನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 2ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪ್ ಸಾಧಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಗಣಿತ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಶೇ. 100ರಷ್ಟು ಅಂಕ ಗಳಿಸಿರುವುದು ವಿಷಯದ ಮೇಲಿನ ಅವರ ಪ್ರಭುತ್ವವನ್ನು ಎತ್ತಿತೋರಿಸುತ್ತದೆ.
ಜೆಇಇ ಮೇನ್ 2026ರ ಸೆಷನ್ 2 ಪರೀಕ್ಷೆಯಲ್ಲಿ ಕರ್ನಾಟಕದ ಆಕಾಶ್ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ ಪುಣಿಲ್ ಸಿಂಗ್ಲಾ (AIR 211), ಆಯುಷ್ ಎಸ್. ಕೋಲೇಕರ್ (AIR 276) ಹಾಗೂ ನಮನ್ ಅಗರ್ವಾಲ್ (AIR 785) ಅತ್ಯುನ್ನತ ರ್ಯಾಂಕ್ ಪಡೆಯುವ ಮೂಲಕ ರಾಷ್ಟ್ರ ಮಟ್ಟದ ಟಾಪ್ 1000 ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇವರೊಂದಿಗೆ ಆದಿತ್ಯ. ಟಿ.ಆರ್.ಎಸ್. ಸಂಜೀತ್, ಜೋಹಾನ್ ಜಾಬ್, ಗುಡಾಲ ಸತ್ಯ ಯಶಸ್ಸ, ಪ್ರಚೇತ್ ಜಲಶಂಕರ್ ಎಂ. ಸೇರಿದಂತೆ ಹಲವು ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇದು ಕರ್ನಾಟಕದಾದ್ಯಂತ ಇರುವ ಆಕಾಶ್ ವಿದ್ಯಾರ್ಥಿಗಳು ಎಷ್ಟೊಂದು ಅಚ್ಚುಕಟ್ಟಾದ ತಯಾರಿಯೊಂದಿಗೆ ಪರೀಕ್ಷೆಯನ್ನು ಎದುರಿಸಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು (NTA) ಏಪ್ರಿಲ್ 20, 2026ರಂದು ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಕರ್ನಾಟಕದ ಆಕಾಶ್ ಇನ್‌ಸ್ಟಿಟ್ಯೂಟ್ 15 ವಿದ್ಯಾರ್ಥಿಗಳು ಜೆಇಇ ಮೇನ್ 2026ರ ಸೆಷನ್ 2ರಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ AESL ನ ಮುಖ್ಯ ಅಕಾಡೆಮಿಕ್ ಹಾಗೂ ಬಿಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ, “ದೇಶದಾದ್ಯಂತ ನಮ್ಮ ವಿದ್ಯಾರ್ಥಿಗಳು ತೋರಿರುವ ಸಾಧನೆಯು ಅವರ ಕಠಿಣ ಪರಿಶ್ರಮ, ಶಿಸ್ತು ಹಾಗೂ ಆಕಾಶ್ ಶಿಕ್ಷಣ ವ್ಯವಸ್ಥೆಯ ಬದ್ಧತೆಗೆ ಕನ್ನಡಿಯಾಗಿದೆ. ಅಚ್ಚುಕಟ್ಟಾದ ಶೈಕ್ಷಣಿಕ ಯೋಜನೆ, ಪರಿಣತರ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸದಿಂದಾಗಿ ವಿದ್ಯಾರ್ಥಿಗಳು ಈ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು,” ಎಂದು ತಿಳಿಸಿದರು.
ಜೆಇಇ ಮೇನ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (NTA) ನಡೆಸುತ್ತದೆ. ಈ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಎನ್‌ಐಟಿ (NIT), ಐಐಐಟಿ (IIIT) ಹಾಗೂ ಇತರ ಕೇಂದ್ರ ಸರ್ಕಾರದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಜತೆಗೆ, ಪ್ರತಿಷ್ಠಿತ ಐಐಟಿ (IIT) ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ‘ಜೆಇಇ ಅಡ್ವಾನ್ಸ್’ ಪರೀಕ್ಷೆಗೆ ಅರ್ಹತೆ ಗಳಿಸಲು ಇದು ಪ್ರಮುಖ ಮೆಟ್ಟಿಲಾಗಿದೆ.