ಕೆ.ಆರ್.ನಗರ:17 ಜನವರಿ 2022
ನಂದಿನಿ ಮೈಸೂರು
ಕೆ.ಆರ್ . ನಗರ ತಾಲ್ಲೂಕು ಸಾತಿಗ್ರಾಮದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮೆಂಟ್ ಏರ್ಪಡಿಸಲಾಗಿತ್ತು.
ಮೈಸೂರು ಜಿಲ್ಲಾ ಜೆ.ಡಿ.ಎಸ್.ಉಪಾಧ್ಯಕ್ಷರಾದ ಕೆಂಪನಾಯಕರು,ಹಿನಕಲ್ ಗ್ರಾಮಪಂಚಾಯಿತಿ ಸದಸ್ಯರಾದ ಶಿವಕುಮಾರ್ ಸೇರಿದಂತೆ ವೇದಿಕೆಯ ಗಣ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ನಂತರ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ದಿ.ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅಣ್ಣಯ್ಯನಾಯಕರು, ಹಂದನಹಳ್ಳಿ ಚೇತನ್,ರವಿನಾಯಕ ಜೆ.ಡಿ.ಎಸ್.ಯುವಮುಖಂಡರು ಹಾಗೂ ಸುನೀಲ್ ಗ್ರಾಮಪಂಚಾಯಿತಿ ಸದಸ್ಯರು ನಿಂಗಪ್ಪನಾಯಕ ಇನ್ನೂ ಅನೇಕ ಯುವಕರು ಭಾಗಿಯಾಗಿದ್ದರು.