ಹುಣಸೂರು ಕ್ರೈಂ ಪೊಲೀಸರ ಮಿಂಚಿನ ಕಾರ್ಯಾಚರಣೆ ದರೋಡೆ , ಬೈಕ್ & ದನ ಕಳ್ಳರ ಬಂಧಿಸುವಲ್ಲಿ ಯಶಸ್ವಿ

ಹುಣಸೂರು:17 ಜನವರಿ 2022

ನಂದಿನಿ ಮೈಸೂರು

ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಕ್ರೈಂ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ದರೋಡೆ , ಬೈಕ್ & ದನ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕಿನ ರತ್ನಪುರಿ ( ದರ್ಗಾ ) ಗ್ರಾಮದ ರಫೀಕ್ , ನಿಶಾದ್ , ರೋಹನ್ ಹಾಗೂ ಫಯಾಜ್ ಎಂಬ 04 ಜನ ಆರೋಪಿಗಳನ್ನು ಬಂಧಿಸಿದ್ದು , ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯಲಿ .. ನಡೆದಿದ 01 ದರೋಡೆ , 01 ಮೋಟಾರ್ ಬೈಕ್ ಕಳವು , 02 ದನ ಕಳ್ಳತನ ಮತ್ತು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 03 ದನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 07 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ .

ಘಟನೆ ವಿವರ :

ಆರೋಪಿಗಳು ದಿನಾಂಕ – 26-12-2021 ರ ಸಂಜೆ ಪಟ್ಟಣ ವ್ಯಾಪ್ತಿಯ ಹಾಲಗೆರೆ ಜಂಕ್ಷನ್ ಬಳಿ ಮೈಸೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರೊಂದಕ್ಕೆ ತಮ್ಮ ಮೋಟಾರ್ ಬೈಕಿನಿಂದ ಡಿಕ್ಕಿ , ಹೊಡೆದು ಕಾರನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿ ಪಟ್ಟಣದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಕಾರಿನ ಚಾಲಕನನ್ನು ಅಪಹರಣ ಮಾಡಿ ಚಾಲಕನಿಂದ ಹಣ ಮತ್ತು ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು .

ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್ ಆರ್ , ಅಪರ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಹಾಗೂ ಹುಣಸೂರು ಉಪ – ವಿಭಾಗದ ಡಿವೈಎಸ್ಪಿ ರವರ ಮಾರ್ಗದರ್ಶನದಲ್ಲಿ ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಕ್ಟರ್‌ ಸಿ.ವಿ.ರವಿ ರವರ ನೇತೃತ್ವದ ಕ್ರೈಂ ಪೊಲೀಸರ ತಂಡ 04 ಜನ ಆರೋಪಿಗಳನ್ನು ಬಂಧಿಸಿ , ದರೋಡೆ ಪ್ರಕರಣದ ಜೊತೆಗೆ ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ 01 ಮೋಟಾರ್ ಬೈಕ್ ಕಳವು , 02 ದನ ಕಳ್ಳತನ ಮತ್ತು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ 03 ದನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 07 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ .

ಈ ಪತ್ತೆ ಕಾರ್ಯದಲ್ಲಿ , ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಕರ್‌ ಸಿ.ವಿ , ರವಿ , ಅಪರಾಧ ಸಿಬ್ಬಂದಿಯವರಾದ ಪುಟ ನಾಯಕ , ಪ್ರಭಾಕರ , ಆರ್ , ಭರತೇಶ , ಪ್ರಸಾದ್ , ಇರ್ಫಾನ್ ಹಾಗೂ ಜೀಪ್ ಚಾಲಕ ಅಲೀಂಪಾಷ ರವರುಗಳು ಭಾಗವಹಿಸಿದ್ದರು . ಹುಣಸೂರು ಪಟ್ಟಣ ಠಾಣೆಯ ಕ್ರೈಂ ಪೊಲೀಸರ ಈ ಪತ್ತೆ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು , ಅಪರ ಪೊಲೀಸ್ ಅಧೀಕ್ಷಕರು ಹಾಗೂ ಹುಣಸೂರು ಉಪ – ವಿಭಾಗದ ಡಿವೈಎಸ್ಪಿ ರವರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *