ದೊಡ್ಡಹರವೆ ಆನೆ ಶಿಬಿರದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ “ಚುಯ್ಯ” ಹೆಣ್ಣಾನೆ

 

ಹುಣಸೂರು:25 ಸೆಪ್ಟೆಂಬರ್ 2021

ನ@ದಿನಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯದ ದೊಡ್ಡ ಹರವೆ ಸಾಕಾನೆ ಶಿಬಿರದಲ್ಲಿದ್ದ ಚುಯ್ಯ ಎಂಬ 66 ವರ್ಷ ಪ್ರಾಯದ ಹೆಣ್ಣಾನೆ ಸಾವನ್ನಪ್ಪಿದೆ.

                 2015 ರಲ್ಲಿ ಜೈಮಿನಿ ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡ 4 ಆನೆಗಳಲ್ಲಿ ಒಂದಾದ ಚುಯ್ಯ ಎಂಬ 66 ವರ್ಷ ಪ್ರಾಯದ ಹೆಣ್ಣಾನೆಯನ್ನು ಪುನರ್ವಸತಿಗೊಂಡ ದೊಡ್ಡ ಹರವೆ ಸಾಕಾನೆ ಶಿಬಿರದಲ್ಲಿ ಅರಣ್ಯ ರಕ್ಷಣಾ ಕಾರ್ಯಕ್ಕೆ ಬಳಸಿಕೊಂಡು ಪಾಲನೆ ಮಾಡಲಾಗುತ್ತಿತ್ತು .

                     ಸದರಿ ಆನೆಯು ವಯೋವೃದ್ದವಾಗಿದ್ದು ಕಳೆದ 2 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 25-09-2021ರಂದು ಬೆಳಿಗ್ಗೆ ಮರಣಹೊಂದಿರುತ್ತದೆ .  ಸ್ಥಳಕ್ಕೆ ಹಿರಿಯ ಅಧಿಕಾರಿಗಳಾದ  ಐ.ಎಫ್.ಎಸ್ , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು , ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ , ಹುಲಸೂರು .ಡಿ.ಮಹೇಶ್ ಕುಮಾರ್, , ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿಗಳು , ವನ್ಯಜೀವಿ ಉದ ವಿಭಾಗ , ಹುಣಸೂರು ಎ.ವಿ.ಸತೀಶ್, , ವನ್ಯಜೀವಿ ವಲಯ ಹುಣಸೂರು ವಲಯ ಅರಣ್ಯಾಧಿಕಾರಿಗಳು Be ಹನುಮಂತರಾಜು ಎಸ್  ರವರು ಸ್ಥಳಕ್ಕೆ ಭೇಟಿ ನೀಡಿದ್ದು ಇಲಾಖಾ ಪಶುವೈದ್ಯಾಧಿಕಾರಿಗಳಾದ  ವಾಸಿಂ ಮಿರ್ಜಾ ರವರು ಆನೆಯ ಮರಣೋತ್ತರ ಪರೀಕ್ಷೆ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ.

 

    

Leave a Reply

Your email address will not be published. Required fields are marked *