ಕಾಲುವೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

 

ವರುಣ:25 ಸೆಪ್ಟೆಂಬರ್ 2021

*ನ@ದಿನಿ*

ಬಡಗಲಹುಂಡಿ ಕೆಂಪಯ್ಯನಹುಂಡಿಗೆ ಸಾಗುವ ಕಾಲುವೆಯಲ್ಲಿ ಅಪರಿಚಿತ ಯುವಕನ ಶವ ತೇಲಿಬಂದಿದೆ.

ಸುಮಾರು16- 18 ವರ್ಷ ಅಂದಾಜು ವಯಸ್ಸಿನ ಯುವಕನಾಗಿದ್ದಾನೆ.ಬಲಗೈ ಮುಂಗೈನಲ್ಲಿ ಸುಮಾ ಎಂಬ ಅಚ್ಚೆ ಇದೆ.ಸಿಂಹದ ಮುಖವಿರುವ ಉಂಗುರ ಧರಿಸಿದ್ದಾನೆ.ಎರಡು ದಿನದ ಹಿಂದೆ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವರುಣಾ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ ಐ ಲಕ್ಷ್ಮೀರವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಯಾರಿಗಾದರೂ ಯುವಕನ ಬಗ್ಗೆ ತಿಳಿದಿದ್ದಲ್ಲಿ ವರುಣಾ ಠಾಣೆಗೆ ಅಥವಾ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

 

Leave a Reply

Your email address will not be published. Required fields are marked *