ನಂದಿನಿ
ಕೇರಳದಲ್ಲಿ ಇತ್ತೀಚೆಗೆ ವರದಿಯಾದ ನೋರೋ ವೈರಸ್ ಬಗ್ಗೆ ಮಾಹಿತಿ ನೀಡಲು
ಇಂದು ತಾಲೂಕ್ ಆರೋಗ್ಯಾಧಿಕಾರಿಗಳಾದ ಡಾ.ಟಿ.ರವಿಕುಮಾರ್ ರವರು ಕೇರಳ ಮತ್ತು ಕರ್ನಾಟಕ ಗಡಿ ಭಾಗದ ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೊರೋ ವೈರಸ್ ಬಗ್ಗೆ ಮಾಹಿತಿ ,ತರಬೇತಿ ಯನ್ನೂ ನೀಡಿದರು.
ನೋರೋ ವೈರಸ್ ನಿಂದ ವಾಂತಿ, ಬೇದಿ,ಕಾಣಿಸಿಕೊಳ್ಳುತ್ತದೆ ವಾಂತಿ ,ಬೇದಿ ಕಾಣಿಸಿಕೊಂಡಾಗ ಯಾವುದೇ ಅಂತಕ ಪಡದೇ ಮನೆ ಮನೆ ಸಮೀಕ್ಷೆ ಮಾಡಿ ವರದಿ ನೀಡಲು ತಿಳಿಸಿದರು. ನೋರೋ ವೈರಸ್ ನ ಲಕ್ಷಣಗಳಾದ ವಾಂತಿ,ಬೇದಿ ,ತಲೆ ನೋವು,ಸುಸ್ತು ಕಾಣಿಸಿಕೊಳ್ಳುತ್ತದೆ. ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನೂರೋ ವೈರಸ್ ಇರುವ ವ್ಯಕ್ತಿಯು ವಾಂತಿ,ಬೇದಿ ಮಾಡಿದಾಗ ಆ ರೋಗ ವು ಗಾಳಿಯ ಮೂಲಕ ಹರಡುತ್ತದೆ,ಯಾವ ವ್ಯಕ್ತಿ ಗೆ ವಾಂತಿ ಭೇದಿ ಕಾಣಿಸಿಕೊಂಡರು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯಾಧಿಕಾರಿಗಳನ್ನು ಭೇಟಿಯಾಗುವಂತೆ ತಿಳಿಸಿದರು.