ಇಂದು ವಿಶ್ವ ಅವಧಿ ಪೂರ್ವ ಜನನ ದಿನ,ಪ್ರತಿ 10 ಮಗುವಿಗೆ 1 ಮಗು ಅವಧಿ ಪೂರ್ವವಾಗಿ ಜನಿಸುತ್ತದೆ: ಡಾ.ನಂದಿತಾ

ಮೈಸೂರು:17 ನವೆಂಬರ್ 2021

ನಂದಿನಿ

ಅವಧಿ ಪೂರ್ವವಾಗಿ ಜನಿಸಿದ ಮಗುವಿನಿಂದ ಉಂಟಾಗಬಹುದಾದ ಜಾಗತಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ವಿಶ್ವ ಅವಧಿ ಪೂರ್ವ ಜನನ ದಿನಾಚರಣೆಯಾಗಿದೆ ಎಂದು ಕಾಂಗರೂ ಕೇರ್ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆ ಶಿಶು ತಜ್ಞರಾದ ಡಾ . ನಂದಿತಾ ಎನ್ ತಿಳಿಸಿದರು.

ಪ್ರತಿ ವರ್ಷ ನವೆಂಬರ್ 17 ರಂದು ವಿಶ್ವ ಅವಧಿ ಪೂರ್ವ ಜನನ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.ಅಂಕಿ ಅಂಶಗಳ ಪ್ರಕಾರ ಪ್ರತಿ 10 ಮಗುವಿಗೆ 1 ಮಗು ಅವಧಿ ಪೂರ್ವವಾಗಿ ಜನಿಸುತ್ತಿದ್ದು ಇದು 5 ವರ್ಷಗಳ ಒಳಗಿನ ಮಕ್ಕಳ ಮರಣ ಪ್ರಮಾಣ ಹೆಚ್ಚಲು ಕಾರಣವಾಗಿದೆ . ಅವಧಿ ಪೂರ್ವ ಜನನದಿಂದಾಗುವ ಹೊರೆ ( ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಾಗೂ ಅದರಿಂದಾಗುವ ದುಷ್ಪರಿಣಾಮಗಳಾದ ಅಂಗ ನ್ಯೂನತೆ , ಪೋಷಕರಿಗೆ ಹಾಗೂ ಸಮಾಜಕ್ಕೆ ಕಳವಳ ಉಂಟು ಮಾಡಿದೆ ಎಂದು ಅಭಿಪ್ರಾಯ ಪಟ್ಟರು. 

 ನ.17 ರ ಈ ದಿನವನ್ನು ಅಕಾಲಿಕವಾಗಿ ಜನಿಸಿದ 37 ವಾರಗಳಿಗಿಂತ ಮುನ್ನ ಗರ್ಭ ಧರಿಸಿದ ಮಕ್ಕಳಿಗಾಗಿ ಸಮರ್ಪಿಸಲಾಗಿದೆ.ಅವಧಿ ಪೂರ್ವ ಹುಟ್ಟುವ ಮಗು ವಿಶೇಷವಾದ ವೈದ್ಯಕೀಯ ಚಿಕಿತ್ಸೆ ಅವಶ್ಯಕವಾಗಿರುತ್ತದೆ ಈ ಮಕ್ಕಳನ್ನು ನವಜಾತ ಶಿಶುಗಳ ತೀವ್ರ ಆರೋಗ್ಯ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ . ಕಡಿಮೆ ತೂಕ , ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ , ಜಾಂಡೀಸ್ , ಆರಂಭಿಕ ಸೋಂಕು ಮತ್ತು ಉಸಿರಾಟದ ತೊಂದರೆ ಇರುತ್ತದೆ . ಇದರೊಂದಿಗೆ ಕೆಲವೊಮ್ಮೆ ಜನ್ಮಜಾತ ವೈಪರಿತ್ಯಗಳಾದ ಹೃದಯ ತೊಂದರೆ , ಮೆದುಳು / ಬೆನ್ನು ಹುರಿ , ಶ್ವಾಸಕೋಶದ ತೊಂದರೆಗಳು , ಕಿಬ್ಬೊಟ್ಟೆಯ ತೊಂದರೆ ಇರುವ ಅಕಾಲಿಕ ಮಗುವಿಗೆ ಜನಿಸಿದ ಕೂಡಲೇ ಎನ್‌ಐಸಿಯುನಲ್ಲಿ ತುರ್ತುಚಿಕಿತ್ಸೆ ಅಗತ್ಯವಿರುತ್ತದೆ . ಈ ವಿಭಾಗದಲ್ಲಿ ಆರೈಕೆ ನೀಡುವ ವೈದ್ಯರನ್ನು ನವಜಾತ ಶಿಶು ಶಾಸಜ್ಞರೆನ್ನುತ್ತಾರೆ ಎಂದು ಮಾಹಿತಿ ನೀಡಿದರು.

ಒದೇ ವೇಳೆ  ಕಾಂಗರೂ ಕೇರ್ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಮತ್ತು ಸಿಇಒ ನಿಯೋನಾಟಾಲಜಿಸ್ಟ್ ಆದ ಡಾ ಶೇಖರ್ ಸುಬ್ಬಯ್ಯ ಮಾತನಾಡಿ ಕಾಂಗರೂ ಕೇರ್ ಆಸ್ಪತ್ರೆಯು 3 ಬಿ ನವಜಾತ ಶಿಶು ತೀವ್ರ ಆರೋಗ್ಯ ನಿಗಾ ಘಟಕ ಹೊಂದಿದ್ದು 2020 ರಲ್ಲಿ ಆಸ್ಪತ್ರೆ ಪ್ರಾರಂಭಿಸಿದ ಮೇಲೆ ಹಲವಾರು ಅವಧಿ ಪೂರ್ವ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ . ಕಾಂಗರೂ ಕೇರ್ ಹೊರ ಹಾಗೂ ಒಳ ಐಸೋಲೇಶನ್ ಯುನಿಟ್ ಗಳನ್ನು ಹೊಂದಿದೆ ಅತ್ಯಾಧುನಿಕ ಸುಸಜ್ಜಿತ ವೆಂಟಿಲೇಟರ್ ಗಳು , ಇನ್ನೂಬೇಟರ್‌ಗಳು , ಕಾರ್ಡಿಯಾಕ್ ಮಾನಿಟರ್ ಗಳನ್ನು ಹೊಂದಿದ್ದು ಶಿಶುಗಳ ಆರೋಗ್ಯ ರಕ್ಷಣೆಗೆ ಸಹಾಯಕವಾಗಿವೆ . ನಮ್ಮ ಆಸ್ಪತ್ರೆಯಲ್ಲಿ ಜನಿಸಿದ ಇತರ ಸುತ್ತಮುತ್ತಲಿನ ಆಸ್ಪತ್ರೆಗಳಿಂದ ಹಾಗೂ ಮಡಿಕೇರಿ , ಚಾಮರಾಜನಗರ , ಮಂಡ್ಯ ಜಿಲ್ಲೆಗಳಿಂದ ದಾಖಲಾದ ಆಕಾಲಿಕ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇಂತಹ ಹಲವು ಯಶಸ್ವಿ ಚಿಕಿತ್ಸೆಯಲ್ಲಿ 32 ವಾರಕ್ಕೆ ಜನಿಸಿದ ಮಗುವಿನ ಚಿಕಿತ್ಸೆಯೂ ಒಂದು. ಈ ಮಗು ಬಹು ಶಸ್ತ್ರಚಿಕಿತ್ಸೆ ಸಮಸ್ಯೆಗಳಿಂದ ಬಳಲುತ್ತಿದ್ದು ಒಂದು ವಾರದಲ್ಲಿ 2 ಶಸ್ತ್ರಚಿಕಿತ್ಸೆ ನಡೆಸಿ ತಿಂಗಳ ಆರೈಕೆಯ ನಂತರ ಆಸ್ಪತ್ರೆಯಿಂದ ಕಳುಹಿಸಿ ಕೊಡಲಾಯಿತು . ಆ ಮಗುವಿಗೆ ಈಗ 4 ತಿಂಗಳುಗಳಾಗಿದ್ದು ಆರೋಗ್ಯದಿಂದ ಇದೆ ಎಂದರು . ಕಾಂಗರೂ ಕೇರ್ ನಲ್ಲಿ ನವೆಂಬರ್ 17 ರಂದು ವಿಶ್ವ ಅವಧಿ ಪೂರ್ವ ದಿನಾಚರಣೆಯನ್ನು ಆಚರಿಸಲಾಗಿದ್ದು ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಅವಧಿಪೂರ್ವ ಮಕ್ಕಳನ್ನು ಆಹ್ವಾನಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ನಾವು 89 ಕ್ಕೂ ಹೆಚ್ಚು ಶಿಶುಗಳನ್ನು ಎನ್‌ಐಸಿಯುನಲ್ಲಿ ಯಶಸ್ವಿಯಾಗಿ ಆರೈಕೆ ಮಾಡುವುದರೊಂದಿಗೆ ಹಲವಾರು ಪೋಷಕರ ಸಂತೋಷದಲ್ಲಿ ಭಾಗಿಯಾಗಿದ್ದೇವೆಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಮಂಜುನಾಥ್,ಸುಪ್ರೀಯ ದತ್ತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *