ಮೈಸೂರು:17 ನವೆಂಬರ್ 2021
ನಂದಿನಿ
ಮಾನಂದವಾಡಿ ರಸ್ತೆಯ NIE ಕಾಲೇಜು ಬಾಯ್ಸ್ ಹಾಸ್ಟೆಲ್ ಹತ್ತಿರ ಮಳೆಯಿಂದಾಗಿ ರಸ್ತೆಯಲ್ಲಿ ಮ್ಯಾನ್ ಹೋಲ್ ಮುಚ್ಚಳ ತೆರೆದಿತ್ತು , ಮುಂದಾಗುವ ಅನಾಹುತವನ್ನು ಕಂಡ ವಾಹನ ಸವಾರರಾದ ಕಿರಣ್, ಸಂದೇಶ್, ಶಿವಕುಮಾರ್ ರವರು ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. , ತಮ್ಮ ವಾರ್ಡ್ ಅಲ್ಲದಿದ್ದರೂ ತಕ್ಷಣ ಸ್ಪಂದಿಸಿ ಸ್ಥಳಕ್ಕಾಗಮಿಸಿದ ಮ ವಿ ರಾಮಪ್ರಸಾದ್ ನಗರಪಾಲಿಕೆಗೆ ದೂರನ್ನು ನೀಡಿದರು.
ಪಾಲಿಕೆ ಸಿಬ್ಬಂದಿ ಬರುವದರೊಳಗಾಗಿ ತಾವೇ ನಿಂತು ಮ್ಯಾನ್ ಹೋಲ್ ಮುಚ್ಚಳವನ್ನು ಮುಚ್ಚಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.