ಮೈಸೂರು:18 ನವೆಂಬರ್ 2O21
ನಂದಿನಿ
ಹೊಚ್ಚ ಹೊಸ ಪ್ರೀಮಿಯಂ ಮಧ್ಯಮ ಗಾತ್ರ ಸೆಡಾನ್ ಸಾಕಷ್ಟ ಸ್ಥಳಾವಕಾಶ, ಹಲವು ಸುರಕ್ಷತೆ ಸೌಲಭ್ಯಗಳು ಮತ್ತು ಸುಂದರ ವಿನ್ಯಾಸವನ್ನು ಹೊಂದಿದೆ.ದಕ್ಷ ಟಿಎಸ್‌ಐ ಇಂಜಿನ್‌ಗಳು, ಅತ್ಯಂತ ಅನುಕೂಲಕರ ಮತ್ತು ಸುಧಾರಿತ ಇನ್‌ಫೋಟೇನ್‌ಮೆಂಟ್ ಸಿಸ್ಟಮ್‌ಗಳು
ಬ್ರ್ಯಾಂಡ್‌ನ ಪರಂಪರೆಯನ್ನು ನೆನಪಿಸುವ ಮತ್ತು ಹೊಸ ಶಕೆಯನ್ನು ತಿಳಿಸುವ ಮಾಡೆಲ್ ಹೆಸರು ಸ್ಲಾವಿಯಾ ಅದ್ಭುತ ಜಾಗತಿಕ ಸಹಭಾಗಿತ್ವವನ್ನು ಪ್ರತಿಫಲಿಸುತ್ತದೆ; ಭಾರತದ ಪುಣೆಯಲ್ಲಿ ಉತ್ಪಾದನೆಯಾಗುತ್ತಿದೆ.
ಇಂಡಿಯಾ 2.0 ಪ್ರಾಜೆಕ್ಟ್‌ನಲ್ಲಿ ಸ್ಕೋಡಾ ಆಟೋದ ಮುಂದಿನ ಹಂತದ ಆರಂಭವನ್ನು ಸ್ಲಾವಿಯಾ ಮಾಡುತ್ತಿದೆ. ಮಧ್ಯಮ ಗಾತ್ರದ ಎಸ್‌ಯುವಿ ಕುಶಾಕ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ ನಂತರ, ಈ ಹೊಸ ಸೆಡಾನ್ ಝೆಕ್ ಕಾರು ತಯಾರಕ ಸಂಸ್ಥೆಗಳ ಎರಡನೇ, ಭಾರತಕ್ಕೆ ವಿಶೇಷವಾದ ಮಾಡೆಲ್ ಆಗಿದೆ. ಸ್ಲಾವಿಯಾ ಉತ್ಪಾದನೆಯನ್ನು ಶೇ. 95% ರಷ್ಟು ಭಾರತದಲ್ಲೇ ಮಾಡಲಾಗಿದೆ. ಭಾರತಕ್ಕೆಂದೇ ಸ್ಕೋಡಾ ಅಟೋ ಅಳವಡಿಸಿಕೊಂಡಿರುವ ಎಮ್‌ಕ್ಯೂಬಿ ಶ್ರೇಣಿಯಾಗಿರುವ ಎಂಕ್ಯೂಬಿ-ಎಒ-ಇನ್ ಪ್ಲಾಟ್‌ಫಾರಂ ಆಧರಿಸಿ ಸೆಡಾನ್ ತಯಾರಿಸಲಾಗಿದ್ದು, ಹಲವು ಸುರಕ್ಷತೆ ಕ್ರಮಗಳು ಮತ್ತು ಸುಧಾರಿತ ಮನರಂಜನೆ ಸಿಸ್ಟಮ್‌ಗಳನ್ನು ಇದು ಹೊಂದಿದೆ. ಸ್ಲಾವಿಯಾದಲ್ಲಿ ಟಿಎಸ್‌ಐ ಇಂಜಿನ್‌ಗಳ ಪವರ್ ಔಟ್‌ಪುಟ್ 85 ಕಿ.ವ್ಯಾ (115 ಪಿಎಸ್) ಮತ್ತು 110 ಕಿ.ವ್ಯಾ (150 ಪಿಎಸ್) ಆಗಿದೆ. ಇತರ ಸ್ಕೋಡಾಗಳ ಹಾಗೆಯೇ, ಈ ಮಾಡೆಲ್ ಸುಂದರ ವಿನ್ಯಾಸವನ್ನೂ ಹೊಂದಿದೆ. ಕಾರು ತಯಾರಕ ಸಂಸ್ಥೆಯ ಆರಂಭಕ್ಕೆ ಮತ್ತು ಭಾರತದ ಮಾರುಕಟ್ಟೆಯಲ್ಲಿ ಹೊಸ ಶಕೆ ಆರಂಭವನ್ನು ಈ ಮಾಡೆಲ್ ಹೆಸರು ಸೂಚಿಸುತ್ತದೆ.
ಸ್ಕೋಡಾ ಆಟೋದ ಸಿಇಒ ಥಾಮಸ್ ಶಾಫರ್ ಹೇಳುವಂತೆ “ಹೊಸ ಸ್ಲಾವಿಯಾ ಮೂಲಕ ನಾವು ನಮ್ಮ ಇಂಡಿಯಾ 2.0 ಪ್ರಾಡಕ್ಟ್ ಕ್ಯಾಂಪೇನ್‌ನ ಮುಂದಿನ ಹಂತಕ್ಕೆ ಸಾಗುತ್ತಿದ್ದೇವೆ. ಕುಶಾಕ್ ಅನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ ನಾವು ಈಗ ಇನ್ನೊಂದು ಜನಪ್ರಿಯ ಸೆಗ್ಮೆಂಟ್‌ಗೆ ನಮ್ಮ ಹೊಚ್ಚ ಹೊಸ ಪ್ರೀಮಿಯಂ ಮಿಡ್‌ಸೈಜ್ ಸೆಡಾನ್ ಮೂಲಕ ಪ್ರವೇಶಿಸುತ್ತಿದ್ದೇವೆ. ಭಾರತದಲ್ಲಿ ನಮ್ಮ ಗ್ರಾಹಕರ ಅಗತ್ಯಕ್ಕೆ ಸೂಕ್ತವಾಗಿ ಸ್ಲಾವಿಯಾ ಇದೆ ಮತ್ತು 95% ರಷ್ಟು ಸ್ಥಳೀಯವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ. ಕುಶಾಕ್ ಮತ್ತು ಸ್ಲಾವಿಯಾ ಈ ಭರವಸೆಯ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಯ ಅನುಕೂಲವನ್ನು ಪಡೆದುಕೊಳ್ಳಲು ಅನುವು ಮಾಡಲಿದೆ.”
ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಗುರ್‌ಪ್ರತಾಪ್ ಬೋಪರೈ ಮಾತನಾಡಿ “ಭಾರತಲದಲ್ಲಿ ಜಾಗತಿಕ ಸಹಭಾಗಿತ್ವದ ಮೂಲಕ ಸಾಧಿಸಬಹುದಾದ್ದನ್ನು ಇಂಡಿಯಾ 2.0 ಪ್ರಾಜೆಕ್ಟ್ ಅಡಿಯಲ್ಲಿ ಬಿಡುಗಡೆ ಮಾಡಿದ ಕುಶಾಕ್ ತೋರಿಸಿಕೊಟ್ಟಿದೆ. ಅತ್ಯಂತ ಬೇಡಿಕೆ ಇರುವ ಎಸ್‌ಯುವಿಗಳ ಜೊತೆಗೆ, ಪ್ರೀಮಿಯಂ ಸೆಡಾನ್ ಸೆಗ್ಮೆಂಟ್ ಅದ್ಭುತ ಸಾಧ್ಯತೆಯನ್ನು ಹೊಂದಿದೆ ಮತ್ತು ಈ ವಲಯದಲ್ಲಿ ನಾವು ಅಪಾರ ಸಾಧನೆ ಮಾಡಿದ್ದೇವೆ. ಪ್ರತಿಷ್ಠೆ ಮತ್ತು ಸ್ಟೈಲ್ ಅನ್ನು ಸ್ಲಾವಿಯಾ ಹೊಂದಿದೆ. ಸ್ಕೋಡಾ ಆಟೋಗೆ ಹೊಸ ಬೆಳವಣಿಗೆಯ ಅವಕಾಶವನ್ನೂ ಇದು ಪ್ರತಿನಿಧಿಸುತ್ತದೆ. ಅನುಕೂಲ, ಅರ್ಹ ಇಂಜಿನ್‌ಗಳು ಮತ್ತು ಹಲವು ಸಿಂಪ್ಲೀ ಕ್ಲೆವರ್ ವೈಶಿಷ್ಟ್ಯಗಳನ್ನು ಸ್ಲಾವಿಯಾ ಹೊಂದಿದ್ದು, ಭಾರತದ ಗ್ರಾಹಕರಿಗೆ ಪೂರಕವಾಗಿದೆ ಮತ್ತು ವಿಶ್ವಾದ್ಯಂತ ಮಾರುಕಟ್ಟೆಗಳಲ್ಲೂ ಇದು ಮೆಚ್ಚುಗೆ ಪಡೆಯಲಿದೆ. ಒಕ್ಟಾವಿಯಾ ಮತ್ತು ಸೂಪರ್ಬ್ ಹಾಕಿಕೊಟ್ಟ ಮಾನದಂಡವನ್ನು ಸ್ಲಾವಿಯಾ ಮುಂದುವರಿಸಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ ಮತ್ತು ಇದು ಈ ವಲಯದಲ್ಲಿ ನಮ್ಮ ಪ್ರಾಬಲ್ಯವನ್ನು ಹೆಚ್ಚಿಸಲು ಇನ್ನಷ್ಟು ಸಹಾಯ ಮಾಡಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ.”
ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಝಾಕ್ ಹಾಲಿಸ್ ಹೇಳುವಂತೆ “ಕುಶಾಕ್ ಬಿಡುಗಡೆಯ ನಂತರದಲ್ಲಿ ಸ್ಕೋಡಾ ಆಟೋ ಇಂಡಿಯಾಗೆ ಅಪಾರ ಅವಕಾಶ ಇರುವುದನ್ನು ನಾವು ಗುರುತಿಸಿದ್ದೇವೆ. ಆಧುನಿಕ ಭಾರತದ ನಿರೀಕ್ಷೆಗಳಿಗೆ ಪೂರಕವಾಗಿ ಮಧ್ಯಮ ಗಾತ್ರದ ಎಸ್‌ಯುವಿ ಅನ್ನು ಕುಶಾಕ್ ಆವರಿಸಿಕೊಂಡಿದ್ದು, ಭಾರತಕ್ಕೆ ಪ್ರಥಮವಾಗಿ ಪ್ರೀಮಿಯಂ ಸೆಡಾನ್ ಅನ್ನು ಪರಿಚಯಿಸಿದ ಕಾಲವನ್ನು ಸ್ಲಾವಿಯಾ ನಮಗೆ ನೆನಪಿಸುತ್ತದೆ. ಉದ್ಯಮ ಎದುರಿಸಿದ ಸಂಕಷ್ಟಗಳ ಮಧ್ಯೆಯೂ, ನಮ್ಮ ಪ್ರಾಡಕ್ಟ್ ಕ್ಯಾಂಪೇನ್‌ಗಳನ್ನು ನಾವು ಮುಂದುವರಿಸಿದೆವು ಮತ್ತು ನಮ್ಮ ನೆಟ್‌ವರ್ಕ್ ವ್ಯಾಪ್ತಿಯನ್ನು 100 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆವು. ಬ್ರ್ಯಾಂಡ್ ಅರಿವು ಹೆಚ್ಚಿಸಿದೆವು, ಗ್ರಾಹಕ ಕೇಂದ್ರಿತ ಸೇವೆಯ ನಮ್ಮ ಭರವಸೆಯನ್ನು ಪೂರ್ಣಗೊಳಿಸಿದೆವು, ಡೀಲರ್ ನೆಟ್‌ವರ್ಕ್ ಅನ್ನು ವೃತ್ತಿಪರಗೊಳಿಸಿದೆವು ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಪರಿಚಯಿಸಿದೆವು ಮತ್ತು ಮಾರಾಟದ ನಂತರದ ವ್ಯಾಪಾರದಲ್ಲಿ ಹೊಸ ಮಾನದಂಡಗಳನ್ನು ನಿಗದಿಸಿದೆವು. ಸ್ಲಾವಿಯಾ ಸಮಗ್ರವಾಗಿ ಹೊಸತನವನ್ನು ಹೊಂದಿದೆ ಮತ್ತು ಕುಶಾಕ್ ಜೊತೆಗೆ ಇದು ನಮ್ಮ ಎರಡನೇ ವಾಲ್ಯೂಮ್ ಡ್ರೈವರ್ ಆಗಿದೆ. ಹೀಗಾಗಿ, ಭಾರತದಲ್ಲಿ ನಮ್ಮ ವಾಹನಗಳ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇರುತ್ತದೆ.