ನಂದಿನಿ ಮನುಪ್ರಸಾದ್ ನಾಯಕ್
ದಸರಾ ಮಹೋತ್ಸವದಲ್ಲಿ ಬಲೂನ್ ವ್ಯಾಪಾರಕ್ಕಾಗಿ
ಗುಲ್ಬರ್ಗ ದಿಂದ ಮೈಸೂರಿಗೆ ಬಂದಿದ್ದ 9 ವರ್ಷದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಅರೋಪಿ ಕಾರ್ತೀಕ್ ನನ್ನ ಪ್ರಕರಣ ದಾಖಲಾಗಿ 24 ಗಂಟೆ ಒಳಗೆ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ
ಮೈಸೂರು ನಗರ ಪೋಲೀಸರ ಕಾರ್ಯವೈಖರಿಗೆ ಕೆಪಿಸಿಸಿ ರಾಜ್ಯ ಅಸಂಘಟಿತ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದ ಸುನೀಲ್ ನಾರಾಯಣ್ ಶ್ಲಾಘಿಸಿದರು.

ಭಾರತ್ ನ್ಯೂಸ್ ಟಿವಿಯೊಂದಿಗೆ ಮಾತನಾಡಿದ ಸುನೀಲ್ ನಾರಾಯಣ್
ಮೈಸೂರು ಕಮೀಷನರ್ ಸೀಮಾ ಲಾಟ್ಕರ್,ಡಿಸಿಪಿಗಳಾದ ಬಿಂದುಮಣಿ,ಸುಂದರ್ ರಾಜ್,ಇನ್ಸ್ಪೆಕ್ಟರ್ ಜೈಕೀರ್ತೀ,ದೇವರಾಜ ವಿಭಾಗದ ಪೋಲೀಸ್ ಉಪ ಆಯುಕ್ತರಾದ ರಾಜೇಂದ್ರ ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಬಾಲಕಿ ಅತ್ಯಾಚಾರ ಕೊಲೆ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅರೋಪಿ ಕಾರ್ತಿಕ್ ನಿಗೆ ನ್ಯಾಯಾಲಯ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಮತ್ತೆ ಇಂಥಹ ಹೀನ ಕೃತ್ಯಗಳು ಮರುಕಳಿಸದಂತೆ ಪೋಲಿಸ್ ಇಲಾಖೆ ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ದೇವರಾಜ್ ವಿಭಾಗದ ಪೊಲೀಸ್ ಉಪ ಆಯುಕ್ತರಾದ ರಾಜೇಂದ್ರ ಅವರನ್ನು ಸುನೀಲ್ ನಾರಾಯಣ್,ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್.ಪ್ರಮೋದ್, ಮಾನವ ಹಕ್ಕು ರಕ್ಷಣೆ ಅಧ್ಯಕ್ಷರಾದ ಬಾಬು,ಸೈಯದ್ ತೌಸಿಫ್ ಸೈಬರ್ ಉದಯಗಿರಿ,ಇಬ್ರಾಹಿಂ ಎಲ್ಲರೂ ಜೊತೆಗೂಡಿ ಸನ್ಮಾನಿಸಿದರು.