ಮೈಸೂರು:27 ಜನವರಿ 2022
ನಂದಿನಿ ಮೈಸೂರು
ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಖಂಡಿಸಿ ಮೈಸೂರು ವಕೀಲ ಸಂಘ ಪ್ರತಿಭಟನೆ ನಡೆಸಿದರು.
ಮೈಸೂರಿನ ನ್ಯಾಯಾಲಯದ ಮುಂಭಾಗ ನ್ಯಾಯಾಲಯದ ಕಲಾಪ ಬಂದ್ ಮಾಡಿ
ಮಾನವ ಸರಪಳಿ ನಿರ್ಮಿಸಿದ ವಕೀಲರು ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಇರಿಸಲಾಗಿತ್ತು. ಪುಷ್ಪಾರ್ಚನೆ ಮಾಡಲು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹಿಂದೆಟು ಹಾಕಿದ್ದಾರೆ. ಡಾ.ಬಿ.ಅರ್ ಅಂಬೇಡ್ಕರ್ ಫೋಟೋ ತೆಗೆಯಲು ಪಟ್ಟು ಹಿಡಿದ್ದಾರೆ.ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಅವರು ಈ ರೀತಿ ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿರುವುದು ಸರಿಯಲ್ಲ.
ವರ ನಡೆಗೆ ಮೈಸೂರು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ.ಮಲ್ಲಿಕಾರ್ಜುನ ಗೌಡ ವಿರುದ್ದ ದೇಶದ್ರೋಹ ಕೇಸ್ ದಾಖಲಿಸಬೇಕು.ಅವರನ್ನ
ಹುದ್ದೆಯಿಂದ ವಜಾಗೊಳಿಸುವಂತೆ
ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು .
ಪ್ರತಿಭಟನೆಯಲ್ಲಿ ಮೈಸೂರಿನ ನೂರಾರು ವಕೀಲರು ಭಾಗಿಯಾಗಿದ್ದರು.