ಮೈಸೂರು:27 ಜನವರಿ 2022
ನಂದಿನಿ ಮೈಸೂರು
ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ
ಇದೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿ ಆನ್ ಲೈನ್ ನಲ್ಲಿ ಸದಸ್ಯತ್ವ ನೋಂದಣಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಕಾಂಗ್ರೆಸ್ ಅದ್ಯಕ್ಷ ಆರ್.ಮೂರ್ತಿ ತಿಳಿಸಿದರು.
ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ
ಕಾಂಗ್ರೆಸ್ ಪಕ್ಷದ ಆದೇಶ ಮೇರೆಗೆ ಪಕ್ಷದ ಸಂಘಟನಾ ದೃಷ್ಠಿಯಿಂದ ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಆರಂಭಿಸಲಾಗಿದೆ.
ಸುಮಾರು 10 ವರ್ಷಗಳ ನಂತರ ನೋಂದಣಿ ಕಾರ್ಯ ವಾಗುತ್ತಿದೆ.ನ14 ರಿಂದ ಅಧಿಕೃತವಾಗಿ ನೋಂದಣಿ ಕಾರ್ಯಕ್ರಮ ಆರಂಭವಾಗಿದೆ.65
ಪ್ರತಿ ವಾರ್ಡ್ ಗೆ ಮಹಿಳಾ ಹಾಗೂ ಪುರುಷರಿಗೆ ಜವಾಬ್ದಾರಿ ನೀಡುತ್ತಿದ್ದೇವೆ.ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ಮನೆ ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಲಾಗುತ್ತದೆ.ಪ್ರತಿ ಬೂತ್ ಗೆ 100 ಜನರು ಸದಸ್ಯತ್ವ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ.ಮಾರ್ಚ್ 31 ವರಗೆ ಈ ನೋಂದಣಿಗೆ ಅವಕಾಶ ಇದೆ.
ಅಜೀಸ್ ಸೇಠ್ ಬ್ಲಾಕ್ ನಲ್ಲಿ ಅಧ್ಯಕ್ಷರ ಮೇಲೆ ಶಿಸ್ತು ಕ್ರಮ ಕೈಗೊಂಡಿರುವುದರಿಂದ ಅಲ್ಲಿನ ಉಪಾಧ್ಯಕ್ಷರಾದ ಸೈಯದ್ ಇಕ್ ಬಾಲ್ ಜವಾಬ್ದಾರಿ ಹೊತ್ತಿದ್ದಾರೆ ಎಂದರು.