ಕಾಂಗ್ರೇಸ್ ಮುಖಂಡ ಸರ್ವೇಶ್, ನಂಜುಂಡನಾಯಕರವರನ್ನು ಕೂಡಲೇ ಬಂಧಿಸಿ, ನಮಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಕಣ್ಣೀರು ಹಾಕಿದ ಕುಟುಂಬಸ್ಥರು

 

ಮೈಸೂರು:27 ಜನವರಿ 2022

ನಂದಿನಿ ಮೈಸೂರು

ಕಾಂಗ್ರೇಸ್ ಮುಖಂಡ ಆರ್. ಸರ್ವೇಶ್, ನಂಜುಂಡನಾಯಕ ಅವರ ಮಕ್ಕಳು ಕ್ಷುಲ್ಲಕ ಕಾರಣಕ್ಕೆ ಮಹದೇವಸ್ವಾಮಿ ಎಂಬುವವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ರು.ಅವರನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಘಟನೆ ನಡೆದು ತಿಂಗಳು ಕಳೆದರೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮಹದೇವಸ್ವಾಮಿ ಅವರ ಸೋದರ ನಾಗೇಶ್ ದೂರಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದ ಮಹದೇವಸ್ವಾಮಿ ಎಂಬುವವರ ಮೇಲೆ ಡಿಸೆಂಬರ್ 31 ರಂದು ನಂಜುಂಡನಾಯಕ ಹಾಗೂ ಅವರ ಮಕ್ಕಳಾದ ಪ್ರಕಾಶ,ಸುರೇಶ,ಶಿವು ಹಾಗೂ ನಂಜುಂಡನಾಯಕನ ತಮ್ಮನ ಮಗ ಕಾಂಗ್ರೆಸ್ ಮುಖಂಡ ಸರ್ವೇಶ್ ನನ್ನ ಸಹೋದರನಿಗೆ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ.ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಕುಸಿದುಬಿದ್ದಿದ್ದ ಮಹದೇವನಾಯಕರನ್ನ ಕೆ.ಆರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೇವು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಜನವರಿ 2 ರಂದು ಸಾವನ್ನಪ್ಪಿದರು.ಹಲ್ಲೆ ಹಾಗೂ ಕೊಲೆ ಮಾಡಿರುವುದಾಗಿ ಬಿಳಿಗೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ.ಪ್ರಮುಖ ಆರೋಪಿಗಳಾದ ಸರ್ವೇಶ್ ಮತ್ತು ನಂಜುಂಡನಾಯಕ ಅವರನ್ನು ಕೂಡಲೇ ಬಂಧಿಸಿ, ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಆರೋಪಿಗಳು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು. ಇದರಿಂದ ಗ್ರಾಮದಲ್ಲಿ ಯಾರೊಬ್ಬರೂ ನಮ್ಮ ನೆರವಿಗೆ ಬರುತ್ತಿಲ್ಲ. ದೌರ್ಜನ್ಯಕ್ಕೊಳಗಿರುವ ನಮಗೆ ಸಿದ್ದರಾಮಯ್ಯ ನವರು ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮದಲ್ಲಿರುವ 15 ಎಕರೆ ಸರ್ಕಾರಿ ಗೋಮಾಳವನ್ನು ಉಳಿಸಬೇಕು. ಆರೋಪಿಗಳು ಜಾಮೀನಿನ ಮೇಲೆ ಸುಲಭವಾಗಿ ಹೊರಬಾರದಂತೆ ಎಚ್ಚರ ವಹಿಸಬೇಕು.ನಮಗೆ ನ್ಯಾಯ ಸಿಗದಿದ್ದರೇ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣೆ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು.

ಕೊಲೆಯಾದ ಮಹದೇವಸ್ವಾಮಿ ಅವರ ತಂದೆ ಮಹಾದೇವನಾಯಕ, ಅವರ ಸಂಬಂಧಿಗಳಾದ ರಾಧಿಕಾ, ರಕ್ಷಿತ್‌ ಕುಮಾರ್ ಕರ್ನಾಟಕ ವಾಲ್ಮೀಕಿ ಪ್ರಜಾ ಮಹಿಳಾ ಸೇನೆಯ ಅಧ್ಯಕ್ಷರಾದ ಪ್ರೀತಿ ನಾಯಕ ಇದ್ದರು.

Leave a Reply

Your email address will not be published. Required fields are marked *