ಮೈಸೂರು:26 ಜನವರಿ 2022
https://m.facebook.com/story.php?story_fbid=142883718175550&id=100073617661648
ನಂದಿನಿ ಮೈಸೂರು
ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಆರಂಭವಾಗಿರುವ ರುಚಿ ಶುಚಿಯಾದ ದೊನ್ನೆ ಬಿರಿಯಾನಿ ಪ್ಯಾಲೇಸ್ ಮಾಂಸ ಪ್ರೀಯರನ್ನ ಕೈ ಬೀಸಿ ಕರೆಯುತ್ತಿದೆ.
ಮೈಸೂರಿನ ಕಾಳಿದಾಸ ರಸ್ತೆ ವಿಜಯನಗರ ಮೊದಲ ಹಂತದಲ್ಲಿರುವ ದೊನ್ನೆ ಬಿರಿಯಾನಿ ಪ್ಯಾಲೇಸ್ ಗೆ ನಟ ಶಿವರಾಮ್ ಕುಮಾರ್ ಭೇಟಿ ನೀಡಿದ ಮೊದಲು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದರು.
ಸಚಿನ್ ವರುಣ್ ಗೌಡರವರಿಗೆ ಬಿರಿಯಾನಿ ತಿನ್ನಿಸಿ
ಶುಭ ಕೋರಿದ ನಟ ಶಿವರಾಜ್ ಕುಮಾರ್
ನಂತರ ಮಾತನಾಡಿದ ಅವರು ಸಚಿನ್,ವರುಣ್ ನಮ್ಮ ಆಪ್ತರು ಅವರು ದೊನ್ನೆ ಬಿರಿಯಾನಿ ಹೋಟೆಲ್ ಆರಂಭಿಸಿದ್ದಾರೆ.ಇಮಧ್ಯಾಹ್ನ ಊಟ ಇಲ್ಲಿಂದಲೇ ಪಾರ್ಸಲ್ ಬಂದಿತ್ತು.ಲ್ಲಿ ಊಟ ಚನ್ನಾಗಿರುತ್ತೆ.ಗ್ರಾಹಕರು ಇಲ್ಲಿನ ರುಚಿ ಸವಿಯಬೇಕು ಎಂದರು.
ನನ್ನ ತಮ್ಮನನ್ನ ಕಲ್ಲಾಗಿ ನೋಡೋಕೆ ಇಷ್ಟ ಪಡೋದಿಲ್ಲ:ಶಿವಣ್ಣ
ಶಕ್ತಿಧಾಮ ಆರಂಭಿಸಿದ್ದು ನನ್ನ ತಾಯಿ ತಂದೆ.ಈಗ ಆದರ ಜವಾಬ್ದಾರಿ ಗೀತಾಳಿಗೆ ಕೊಡಲಾಗಿದೆ.ಮೈಸೂರಿನಲ್ಲಿ ಚಿತ್ರೀಕರಣ ಮಾಡೋದು ತುಂಬ ಖುಷಿಕೊಡುತ್ತದೆ.
ನಮ್ಮ ಅದೃಷ್ಟದ ಸ್ಥಳ ಮೈಸೂರು. ರಥಸಪ್ತಮಿಯಿಂದ ಹಿಡಿದು ಮನಮೆಚ್ಚಿದ ಹುಡುಗಿ,ಸಿಂಹದ ಮರಿ ಸಾಕಷ್ಟು ಸಿನಿಮಾ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ.ಪುನೀತ್ ರಾಜ್ ಕುಮಾರ್ ಇಲ್ಲ ಅಂತ ಹೇಳೋಕೆ ಮನಸ್ಸಿಗೆ ನೋವಾಗುತ್ತದೆ.ಪಡುವಾರಹಳ್ಳಿಯಲ್ಲಿ ಪುನೀತ್ ಪ್ರತಿಮೆ ನಿರ್ಮಿಸುತ್ತಿದ್ದೇವೆ ಅಂತ ಅಭಿಮಾನಿಗಳು ಹೇಳಿದ್ರು.ನಾನು ಹೇಳಿದೆ ಪ್ರತಿಮೆ ನೋಡೋಕೆ ನನಗೆ ಇಷ್ಟ ಇಲ್ಲ ಅಂತ.ಯಾಕಂದ್ರೇ ನಾನು ನನ್ನ ತಮ್ಮನನ್ನ ಕಲ್ಲಾಗಿ ನೋಡೋಕೆ ಇಷ್ಟ ಪಡೋದಿಲ್ಲ.ಆತ ಜೀವಂತವಾಗಿ ನಮ್ಮಲ್ಲೇ ಇದ್ದಾನೆ.ಇಷ್ಟು ಬೇಗ ಕಲ್ಲು ಮಾಡೋಕೆ ಇಷ್ಟ ಇಲ್ಲ.
ಊಟ ಬಟ್ಟೆ ಕೊಡಬಹುದು ಆದರೇ ಖುಷಿ ಕೊಡೋಕಾಗಲ್ಲ.ಗಣರಾಜ್ಯೋತ್ಸವ ಆಚರಣೆ ನಂತರ ಶಕ್ತಿಧಾಮದ ಮಕ್ಕಳ ಜೊತೆ ಬಸ್ ರೈಡ್ ಹೋಗಿದ್ದೇ.ಅವರ ಜೊತೆ ಕಳೆದ ಸಮಯ ಅಮೂಲ್ಯವಾದದ್ದು ಎಂದರು.
ಕನಸು ಈಡೇರಲಿಲ್ಲ:ಶಿವಣ್ಣ ಬೇಸರ
ಮೂರು ಮಕ್ಕಳು ಒಂದೇ ಚಿತ್ರದಲ್ಲಿ ನಡೆಸಬೇಕೆಂದು ಪಾರ್ವತಮ್ಮ ಕನಸು ಈಡೇರಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು
ಅಪ್ಪಾಜಿ ಅಮ್ಮ ಯಾವಾಗಲೂ ಹೇಳುತ್ತಿದ್ದರೂ ನಾವು ಅಂದುಕೊಂಡ ಹಾಗೇ ಏನು ಆಗೋದಿಲ್ಲ ಕಂದ ಎನ್ನುತ್ತಿದ್ದರು.ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗುತ್ತದೆ.ಪುನೀತ್ ಜೇಮ್ಸ್ ಚಿತ್ರದಲ್ಲಿ ಡಬ್ಬಿಂಗ್ ಮಾಡುತ್ತಿದ್ದೇವೆ.ಪುನೀತ್ ವಾಯ್ಸ್ ಡಬ್ ಮಾಡೋದು ಕಷ್ಟನೇ ಆಗಿದೆ ಎಂದರ ಅವರು ಭೈರಾಗಿ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕನ್ನಡಿಗ ಎಂದು ಬೋರ್ಡ್ ಹಾಕೋದಲ್ಲ ನಿಜವಾದ ಕನ್ನಡಿಗನಾಗಿರಬೇಕು:ಸಚಿನ್
ಮಾಲೀಕರಾದ
ಸಚಿನ್ ,ವರುಣ್ ಗೌಡ ಮಾತನಾಡಿ ಈ ದೊನ್ನೆ ಬಿರಿಯಾನಿ ಪ್ಯಾಲೇಸ್ ಉದ್ಘಾಟನೆಯನ್ನ ಶಿವಣ್ಣ ಮಾಡಬೇಕಿತ್ತು. ಪುನೀತ್ ರವರು ಸಾವನ್ನಪ್ಪಿದ್ದರಿಂದ ಬಂದಿರಲಿಲ್ಲ.ಇವತ್ತು ಬಂದು ಶುಭ ಹಾರೈಸಿದ್ದಾರೆ.ಪ್ರತಿ ಭಾನುವಾರ ನಮ್ಮ ಹೋಟೆಲ್ ನಿಂದ ಊಟ ಪಾರ್ಸಲ್ ಆಗ್ತಿತ್ತು. ಮೈಸೂರಿನಲ್ಲಿ 1 ಶಾಖೆ ಇದೆ.ಬೆಂಗಳೂರಿನಲ್ಲಿ 8 ಶಾಖೆಗಳಿವೆ.ಚಿಕನ್ ನಲ್ಲಿ 5 ತರ ,ಮಟನ್ ನಲ್ಲಿ 3 ತರ ವೆರೈಟ್ ಊಟ ದೊರೆಯುತ್ತೆ.80 ಜನ ಕೆಲಸಗಾರರಿದ್ದಾರೆ.ಎಲ್ಲಾ ಕನ್ನಡದವರೇ ಆಗಿದ್ದಾರೆ.
ಎಲ್ಲಾ ತರದ ಜನರಿಗೆ ಇಲ್ಲಿ ಕಡಿಮೆ ಬೆಲೆಯಲ್ಲಿ ರುಚಿಯಾಗಿ ಊಟ ಬಡಿಸಲಿದ್ದೇವೆ ಅದಲ್ಲದೇ ಪಾರ್ಸಲ್ ವ್ಯವಸ್ಥೆ ಕೂಡ ಇದೆ ಎಂದರು.