ಹೆಚ್.ಡಿ. ಕೋಟೆ/ಸರಗೂರು ತಾಲೂಕಿನ ವಿವಿಧೆಡೆ ನಿರ್ಮಾಣವಾಗಿರುವ ಫಿಶ್ ಟ್ಯಾಂಕ್ ಉದ್ಘಾಟನೆ

94 Views

ಸರಗೂರು:2 ಜೂನ್ 2022

ನಂದಿನಿ ಮೈಸೂರು

ಹೆಚ್.ಡಿ. ಕೋಟೆ/ಸರಗೂರು ತಾಲೂಕಿನ ವಿವಿಧೆಡೆ ನಿರ್ಮಾಣವಾಗಿರುವ ಫಿಶ್ ಟ್ಯಾಂಕ್ ಗಳನ್ನೂ ಉದ್ಘಾಟಿಸಲಾಯಿತು.

ಸಾಂಕೇತಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಿ ಪುರಕ್ಕೆ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಗಳಾದ ಡಾ” ಕೆ.ಹೆಚ್ .ಪ್ರಸಾದ್,ಬೇಟಿ ನೀಡಿ ಉದ್ಘಾಟಿಸಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಚಿದಂಬರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ.ರವಿಕುಮಾರ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ” ಶಿವಪ್ರಸಾದ್,ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ” ಜಯಂತ್ ರವರು, ಹಾಜರಿದ್ದರು. H.D ಕೋಟೆ ಮತ್ತು ಸರಗೂರು ತಾಲೂಕಿನ ಚಿಕ್ಕನಂದಿ, ಹಂಪಾಪುರ, ಮಾದಾಪುರ, ಕೆ. ಬೇಳ್ತೂರ್, ಹೆಬ್ಬಲಗುಪ್ಪೆ, ಸರಗೂರು, ಸಾಗರೆ,ಮುಳ್ಳೂರು,ಬಡಗಲ ಪುರ,B. ಮಟ್ಟಕೆರೆ,ದಡದಹಳ್ಳಿ ಒಟ್ಟು12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಫಿಶ್ ಟ್ಯಾಂಕ್ ಗಳನ್ನು ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಮಾತನಾಡಿ ಈ ಫಿಶ್ ಟ್ಯಾಂಕ್ ಗಳಿಗೆ ಗಂಬೂಸಿಯ ಮೀನುಗಳನ್ನು ಬಿಡಲಾಗಿದೆ ಇವು ಲಾರ್ವ ಗಳನ್ನು ತಿನ್ನುತ್ತವೆ,ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟುತ್ತದೆ, ಮತ್ತು ಡೆಂಗ್ಯೂ ಮತ್ತು ಚಿಕುಂಗೂನ್ಯ ರೋಗವನ್ನು ತಡೆಗಟ್ಟಬಹುದು, ಹಾಗೂ ಗ್ರಾಮಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಿ ಲಾರ್ವಾಗಳನ್ನು ಸಂಗ್ರಹಿಸಿ ತೊಟ್ಟಿಗೆ ಬಿಡುವುದರಿಂದ ಮೀನುಗಳಿಗೆ ಆಹಾರವಾಗುತ್ತದೆ ಹಾಗೂ ಪ್ರತಿದಿನ ಲಾರ್ವ ಸಮೀಕ್ಷೆ ಮಾಡಲು ಪ್ರೇರೇಪಿಸುತ್ತದೆ, ಮತ್ತು ಈ ಮೀನುಗಳು ಲಾರ್ವಾಗಳನ್ನು ತಿಂದು ಹೆಚ್ಚು ಹೆಚ್ಚು ತನ್ನ ಸಂತಾನೋತ್ಪತ್ತಿಯನ್ನು ಮಾಡುತ್ತವೆ, ಮತ್ತೆ ಹೆಚ್ಚು ಉತ್ಪತ್ತಿಯಾದ ಮೀನುಗಳನ್ನು ಗ್ರಾಮದ ಕೆರೆ, ಕಟ್ಟೆಗಳು, ಬಾವಿ,ಗಳಿಗೆ, ಬಿಡಲಾಗುತ್ತದೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಪ್ರತಿದಿನ ಕಡ್ಡಾಯವಾಗಿ ಲಾರ್ವಾ ಸಮೀಕ್ಷೆ ಮಾಡಬೇಕು ಹಾಗೂ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ವೈದ್ಯಾಧಿಕಾರಿಗಳು, ಜಿಲ್ಲಾಮಟ್ಟದ ಕೀಟ ಶಾಸ್ತ್ರಜ್ಞರಾದ , ರತ್ನ ಕುಮಾರಿ, ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿಗಳಾದ ಮಂಜುನಾಥ್, ನಾಗೇಂದ್ರ ,ರವಿರಾಜ್, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು,ಆಶಾ ಕಾರ್ಯ ಕರ್ತೆಯರು ಹಾಜರಾಗಿದ್ದರು.

Leave a Reply

Your email address will not be published.