ಸಾವು ಬದುಕಿನ ನಡುವೆ ಹೋರಾಟ ಮಗನನ್ನ ಉಳಿಸಿಕೊಡಿ ಎಂದು ಸಹಾಯಕ್ಕಾಗಿ ಅಂಗಲಾಚಿದ ಕುಟುಂಬಸ್ಥರು

ಮೈಸೂರು:3 ಜೂನ್ 2022

ನಂದಿನಿ ಮೈಸೂರು 

ಕೂಲಿ ನಾಲಿ ಮಾಡಿ ದುಡಿದ ತಿನ್ನುವ ಬಡವರಿಗೆಯೇ ಆ ದೇವರು ಕಷ್ಟದ ಮೇಲೆ ಕಷ್ಟ ಕೊಡ್ತಾನೋ ಏನು.  22 ವರ್ಷದ ಯುವಕ ಮಂಜುನಾಥ್ ಕಾಯಕವೇ ಕೈಲಾಸ ಎಂದು ಮುಂಜಾನೆ ಎದ್ದು  ದ್ವಿಚಕ್ರ ವಾಹನದಲ್ಲಿ ಉದ್ಬೂರಿನಿಂದ ಮೈಸೂರಿಗೆ ಮಾರಾಟಕ್ಕಾಗಿ ವಿಳ್ಳೆದೆಲೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಮೇ 29 ರಂದು ಮಾನಂದವಾಡಿ ರಸ್ತೆ ಅಂಬೇಡ್ಕರ್ ಜಂಕ್ಷನ್ ನಲ್ಲಿ ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ನಂ.ka -09 hl-4180 ರ ಸವಾರ ಮಂಜುನಾಥ್( 22 ವರ್ಷ) ಎಂಬುವರಗೆ ಮತ್ತೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.ನಂತರ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ.ಮಂಜುನಾಥ್ ನನ್ನ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

 

ನಮ್ಮ‌ ಕುಟುಂಬಕ್ಕೆ ಹೆಗಲಾಗಿದ್ದ ಮಗ ಅಪಘಾತದಲ್ಲಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳು ಸಹಾಯ ಮಾಡುವಂತೆ ತಂದೆ ಸೋಮಣ್ಣ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.

ನಾನು ಬಡವನಾಗಿದ್ದು ವಿಳ್ಯೆದೆಲೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇನೆ.ನನ್ನ ಮಗ ಮಂಜುನಾಥ್ ಕೂಡ ವಿಳ್ಯೆದೆಲೆ ಮಾರಾಟ ಮಾಡುತ್ತಾ ನನಗೆ ಹೆಗಲು ಕೊಟ್ಟಿದ್ದ.ಈಗಾಗಲೇ 12 ಲಕ್ಷ ಬಿಲ್ ಆಗಿದೆ.ಸಾಲಾ ಸೋಲಾ ಮಾಡಿ 6 ಲಕ್ಷ ಬಿಲ್ ಕಟ್ಟಿದ್ದೇವೆ.ಉಳಿದ ಹಣ ಕಟ್ಟಲೂ ನಮ್ಮ‌ ಬಳಿ ಹಣವಿಲ್ಲ.ಆಗಾಗಿ ಮುಖ್ಯಮಂತಿಗಳು,ಸಂಸದರು,ಶಾಸಕರು,ಸಚಿವರು,ಸಂಘ ಸಂಸ್ಥೆಯವರು,ದಾನಿಗಳು ಚಿಕಿತ್ಸಾ ವೆಚ್ಚ ಸಹಾಯ ಮಾಡಿ ಮಗನನ್ನು ಉಳಿಸಿಕೊಡುವಂತೆ ಅಂಗಲಾಚಿದರು.

ಮಂಜುನಾಥನ ಸ್ಥಿತಿ ಕಂಡು ತಾಯಿ,ಅಜ್ಜಿ ಸೇರಿದಂತೆ ಕುಟುಂಬದ ಸದಸ್ಯರು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿತ್ತು.

ಸಹಾಯ ಮಾಡಲಿಚ್ಚಿಸುವವರು

ಜೈರಾಮ್.ಎಚ್.ಎಸ್
A/c no:20255283396
ಫೋನ್ ಪೇ : 9731029436
ಗೂಗಲ್ ಪೇ :9731029436

 

Leave a Reply

Your email address will not be published. Required fields are marked *