ಉಚಿತ ಬಂಜೆತನ ತಪಾಸಣೆ ಹಾಗೂ ಸಮಾಲೋಚನೆ ಶಿಬಿರ

40 Views

ಮೈಸೂರು:1 ಜೂನ್ 2022

ನಂದಿನಿ ಮೈಸೂರು

ಮೈಸೂರು ಪ್ರಸೂತಿ ಮತ್ತು ಸ್ತ್ರೀರೋಗ ಸಮಾಜವು ಮೈಸೂರಿನ ಫಲವತ್ತತೆ ತಜ್ಞರ ಸಹಯೋಗದಲ್ಲಿ ಉಚಿತ ಬಂಜೆತನ ತಪಾಸಣೆ ಹಾಗೂ ಸಮಾಲೋಚನೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಲಕ್ಷ್ಮೀಪುರಂನ ವೇದಾಂತ ಹೆಮ್ಮಿಗೆ ವೃತ್ತದಲ್ಲಿರುವ ಸಂತಸ ಐವಿಎಫ್‌ನಲ್ಲಿ ಏರ್ಪಡಿಸಿದ್ದ ಶಿಬಿರಕ್ಕೆ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಸಂಪಾದಕರಾದ ಕೆ.ಬಿ.ಗಣಪತಿ ಹಾಗೂ ಪತ್ನಿ ರ್ಯಾಲಿ ಗಣಪತಿ, ಡಾ.ಪ್ರಕಾಶ್ ಪ್ರಭು ದೀಪ ಬೆಳಗಿಸುವುದರ ಮೂಲಕ ಶಿಬಿರ ಉದ್ಘಾಟಿಸಿದರು.

ಕೆ.ಬಿ.ಗಣಪತಿರವರು ಮಾತನಾಡಿ ಮದುವೆಯಾದ ದಂಪತಿಗಳು ಮಕ್ಕಳಾಗದೆ ನೋವನ್ನ ಅನುಭವಿಸುತ್ತಿದ್ದಾರೆ.ಅಂತಹ ದಂಪತಿಗಳಿಗೆ ಮಕ್ಕಳು ಜನಿಸುವಂತೆ ವೈದ್ಯರು ಸೂಕ್ತ ಚಿಕಿತ್ಸೆ ‌ನೀಡುತ್ತಾರೆ.ದಂಪತಿಗಳಿಬ್ಬರು ತಾಳ್ಮೆಯಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೇ ನಿಮ್ಮ ಕನಸಿನ ಮಗು ನಿಮ್ಮ ಕೈ ಸೇರಲಿದೆ ಎಂದು ದಂಪತಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂತಸ ಐವಿಎಫ್‌ನ ನಿರ್ದೇಶಕಿ ಡಾ.ಸೌಮ್ಯ ದಿನೇಶ್, ಮಣಿಪಾಲ ಫರ್ಟಿಲಿಟಿಯ ಡಾ.ನಿವೇದಿತಾ ಶೆಟ್ಟಿ, ಚಿತ್ರಾ ಐವಿಎಫ್‌ನ ಡಾ.ಪ್ರಿಯಾ ಮಹೇಶ್, ಡಾ. ಸಂತಸ ಐವಿಎಫ್‌ನ ಯೋಗಿತಾ ರಾವ್, ಸಿರಿ ಕೇರಿ ಐವಿಎಫ್‌ನ ಡಾ ಶಿಲ್ಪಾ ಸಂತೃಪ್ತ್, ಸ್ಪಂದನ ಐವಿಎಫ್‌ನ ಡಾ ಜಯಶ್ರೀ ವಿರೂಪಾಕ್ಷ, ನವ್ಯ ಐವಿಎಫ್‌ನ ಡಾ ನವ್ಯ ನೈರುತ್ಯ, ಮಾತೃಚಯ ಐವಿಎಫ್‌ನ ಡಾ ಚೇತನ, ಪ್ರೇರಣಾ ಐವಿಎಫ್‌ನ ಡಾ ಮಾಧುರಿ, ಎಂಒಜಿಎಸ್ ಪದಾಧಿಕಾರಿಗಳಾದ ಡಾ.ಪಿ.ಪಿ.ಸೋನಿಯಾ ಮಂದಾರಪ್ಪ, ಡಾ. ಮತ್ತು ಡಾ.ಶ್ವೇತಾ ಪದಕಿ ಉಪಸ್ಥಿತರಿದ್ದರು.

Leave a Reply

Your email address will not be published.