ವಕೀಲರ ಬಳಿ ಮತಯಾಚಿಸಿದ ಮಧು ಜಿ ಮಾದೇಗೌಡ

ಮೈಸೂರು:1 ಜೂನ್ 2022

ನಂದಿನಿ ಮೈಸೂರು

ಜೂನ್ 13 ರಂದು ನಡೆಯಲಿರುವ
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಗರಿಗೇದರಿದೆ.

ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಮೈಸೂರಿನ ನ್ಯಾಯಾಲಯಕ್ಕೆ ಆಗಮಿಸಿ ವಕೀಲ ಬಳಿ‌ ಮತಯಾಚಿಸಿದರು.

ಪ್ರಚಾರದ ವೇಳೆ ಮಾತನಾಡಿದ ಮಧು ಜಿ ಮಾದೇಗೌಡ ನಾನು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದೇನೆ. ಇಂದು ಮೈಸೂರಿನ ನ್ಯಾಯಲಯದ ಆವರಣದಲ್ಲಿ ವಕೀಲರನ್ನ ಭೇಟಿ ಮಾಡಿ ಮತ ಹಾಕುವಂತೆ ಮನವಿ ಮಾಡಿದ್ದೇನೆ.ವಕೀಲರು ಸಹ ಮತ ಹಾಕುವಂತೆ ಭರವಸೆ ನೀಡಿದ್ದಾರೆ. ಈಗಾಗಲೇ 60 ಸಾವಿರ ಪದವೀಧರರನ್ನು ಭೇಟಿ ಮಾಡಿದ್ದೇನೆ.
ಕಾಂಗ್ರೆಸ್ ನಾಯಕರು,ವಿಧಾನ ಪರಿಷತ್ ಸದಸ್ಯರು,ಶಾಸಕರು,ಮಾಜಿ ಶಾಸಕರು, ಕಾರ್ಯಕರ್ತರು ನನ್ನ ಪರ ಪ್ರಚಾರ ಮಾಡಿದ್ದಿದ್ದಾರೆ.ನನಗೆ ನಂಬಿಕೆ ಇದೆ ಈ ಬಾರಿ ಪದವೀಧರರು ನನಗೆ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ವಿಧಾನಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಸೋಮಶೇಖರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಾನಸ, ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್,ವಕೀಲರ ಸಂಘದ ಚುನಾಯಿತ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *