ಕೃತಕ ಕಾವು ಕೊಟ್ಟು13 ನಾಗರಹಾವಿನ ಮರಿ ಜನನ ಮಾಡಿಸುವಲ್ಲಿ ಉರಗತಜ್ಞ ಬಸವರಾಜು ಯಶಸ್ವಿ

ನಂಜನಗೂಡು:31 ಮೇ 2022

ನಂದಿನಿ ಮೈಸೂರು

ಬಾವಿಯಲ್ಲಿ ಸಿಕ್ಕ ನಾಗರಹಾವು ಮೊಟ್ಟೆಯನ್ನು
ಕೃತಕವಾಗಿ ಸಂತಾನ ಮಾಡಿಸಲಾಗಿದ್ದು 13 ಮರಿ ನಾಗರಹಾವುಗಳ ಜನನ ಮಾಡಿಸುವಲ್ಲಿ ಉರಗತಜ್ಞ ಬಸವರಾಜುರವರು ಯಶಸ್ವಿಯಾಗಿದ್ದಾರೆ.

ನಂಜನಗೂಡು ತಾಲೂಕು ವರಳುವಾಡಿ ಗ್ರಾಮದ ಕುಳ್ಳ ನಾಯಕನ ಹುಂಡಿ ಜಮೀನಿನಲ್ಲಿ ಮಾರ್ಚ್ 14 ರಂದು ನಾಗರಹಾವು
ಬಾವಿ ಒಳಗೆ ಬಿದ್ದಿದ್ದನ್ನು ನೋಡಿ ರೈತರು ಭಯಭೀತರಾಗಿದ್ದರು.ಗೋಳೂರು ಸ್ನೇಕ್ ಬಸವರಾಜುರವರಿಗೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದ್ದಾರೆ.

ತಕ್ಷಣಕ್ಕೆ ಆಗಮಿಸಿದ ಬಸವರಾಜುರವರು ಬಾವಿಯಲ್ಲಿದ್ದ ನಾಗರಹಾವನ್ನು ರಕ್ಷಿಸಿದರು.ರಕ್ಷಣೆ ವೇಳೆ ನಾಗರಹಾವು ಗರ್ಭಧರಿಸಿರುವುದು ತಿಳಿದಿದೆ.ಇದನ್ನ ಗಮನಿಸಿದ ಬಸವರಾಜು ಹಾವಿನ ಮೊಟ್ಟೆಗಳನ್ನು ರಕ್ಷಿಸಿದ್ದಾರೆ.
ಉರಗ ರವೀಂದ್ರನಾಥ್ ಐತಾಳ್, ಎಸ್.ಚಂದ್ರಶೇಖರ್, ಯತೀಶ್ ಮಾರ್ಗದರ್ಶನದಲ್ಲಿ ಕಾವು ಕೊಟ್ಟು ಪೋಷಣೆ ಮಾಡಿದ್ದಾರೆ.


75 ದಿನಗಳ ಕಾಲ ಮರಳಿನಲ್ಲಿ ಕೃತಕ ಕಾವುಕೊಟ್ಟಿದ್ದರಿಂದ 13 ಹಾವಿನ ಮರಿಗಳು ಜನ್ಮ ತಾಳಿವೆ.ಗುಂಡ್ಲುಪೇಟೆ ಬಳಿ ಇರುವ ಓಂ ಕಾರ್ ಫಾರೆಸ್ಟ್ ನಲ್ಲಿ ಹಾವುಗಳನ್ನ ಬಿಟ್ಟಿದ್ದಾರೆ.

ಗೋಳೂರು ನಿವಾಸಿಯಾಗಿರುವ ಬಸವರಾಜು ಮರಗೆಲಸ ಮಾಡಿಕೊಂಡು ಪತ್ನಿ ಲೀಲಾ,ಯಶ್ವಂತ್,ಗಣೇಶ್ ಇಬ್ಬರು ಮಕ್ಕಳನ್ನ ಸಾಕುತ್ತಿದ್ದಾರೆ.ಜೊತೆಗೆ ಕಾರು ಚಾಲಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.ಇದರ ನಡುವೆ ಕಳೆದ 12 ವರ್ಷಗಳಿಂದ ಹಾವುಗಳನ್ನ ಹಿಡಿಯುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ.


ಹಾವುಗಳಲ್ಲದೇ ಪಕ್ಷಿ,ಪ್ರಾಣಿಗಳನ್ನು ಸಾಕಿ ಸಲುಯಿದ್ದಾರೆ.ಬಸವರಾಜುರವರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *