“ಶಾಲಿಮರ್ ಫಂಕ್ಷನ್ ಹಾಲ್”ಗೆ ಪಾಲಿಕೆ ಬೀಗಮುದ್ರೆ

80 Views

 

ಮೈಸೂರು:19 ಸೆಪ್ಟೆಂಬರ್ 2021

ಮೈಸೂರು ಮಹಾನಗರಪಾಲಿಕೆ, ವಲಯ ಕಚೇರಿ-8ರ ವ್ಯಾಪ್ತಿಯ ವಾರ್ಡ್ ನಂ-29ರ “ಶಾಲಿಮರ್ ಫಂಕ್ಷನ್ ಹಾಲ್”, ಸ್ವತ್ತಿನ ನಂ. 4518, ಸೈಂಟ್ ಮೇರಿಸ್ ರಸ್ತೆ, 3ನೇ ಕ್ರಾಸ್, ಎನ್.ಆರ್ ಮೊಹಲ್ಲಾ, ಸ್ವತ್ತಿನ ಉದ್ದಿಮೆ ಪರವಾನಿಗೆ ಪಡೆಯದೇ ಹಾಗೂ ಆಸ್ತಿ ತೆರಿಗೆ ಕಂದಾಯವು 2011-12 ರಿಂದ 2021-22ನೇ ಸಾಲಿನವರೆಗೂ ಒಟ್ಟು ರೂ. 20.00 ಲಕ್ಷಕ್ಕೂ ಹೆಚ್ಚು ಬಾಕಿ ಇದ್ದು, ಈ ಸಂಬಂಧ ಹಲವು ಬಾರಿ ಸ್ವತ್ತಿನ ಮಾಲೀಕರಿಗೆ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆಯನ್ನು ಪಾವತಿಸುವಂತೆ ನೋಟಿಸ್ ಗಳನ್ನು ನೀಡಿದ್ದು ಹಾಗೂ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.

ಆದಾಗ್ಯೂ ಆಸ್ತಿ ತೆರಿಗೆ ಪಾವತಿಸದ ಕಾರಣ ಹಾಗೂ ಉದ್ದಿಮೆ ಪರವಾನಿಗೆ ಪಡೆಯದ ಕಾರಣ ಇಂದು ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮಿಕಾಂತ್ ರೆಡ್ಡಿ ಐಎಎಸ್‌ ರವರ ನಿರ್ದೇಶನದ ಮೇರೆಗೆ, ವಲಯ ಆಯುಕ್ತರಾದ ಶ್ರೀ ಶಿವಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಅನ್ವಯ ” ಶಾಲಿಮರ್ ಫಂಕ್ಷನ್ ಹಾಲ್”ನ್ನು ಬೀಗಮುದ್ರೆ ಹಾಕಿಸಿ ಮುಚ್ಚಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ವಲಯ ಕಂದಾಯಾಧಿಕಾರಿ, ಕಂದಾಯ ಪರಿಶೀಲಕರು, ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಜಪ್ತಿ ಮಾಡಿ ಬೀಗಮುದ್ರೆ ಹಾಕಿಸಲಾಯಿತು.

Leave a Reply

Your email address will not be published. Required fields are marked *