ಬ್ಯಾಟರಿ ಕಳ್ಳನನ್ನ ಖೆಡ್ಡಕ್ಕೆ ಕೆಡವಿದ ಕವಲಂದೆ ಪೊಲೀಸರು

 

ಕವಲಂದೆ:19 ಸೆಪ್ಟೆಂಬರ್ 2021

ನ@ದಿನಿ

ನಂಜನಗೂಡು ತಾಲೂಕಿನ ಗಟ್ಟವಾಡಿಪುರ ಗ್ರಾಮದಲ್ಲಿ  ರಾತ್ರಿ ವೇಳೆ ಜಮೀನಿನಲ್ಲಿ ಸೋಲಾರ್ ಬ್ಯಾಟರಿ ಮತ್ತು ಟ್ರಾಕ್ಟರ್ ಬ್ಯಾಟರಿ ಕದ್ದು ಪರಾರಿಯಾಗಿದ್ದ ಕಳ್ಳನನ್ನ ಬಂಧಿಸುವಲ್ಲಿ ಕವಲಂದೆ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಬಗ್ಗೆ ಮಹದೇವನಾಯಕ ಕವಲಂದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಪಿಎಸ್ಐ ಮಹೇಂದ್ರ ನೇತೃತ್ವದಲ್ಲಿ ತನಿಖೆ ಕೈಗೊಂಡು ಚುರುಕುಗೊಳಿಸಿದ್ದಾರೆ. ಕವಲಂದೆ ಸಮೀಪ ಕೃಷ್ಣರಾಜಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಬಗ್ಗೆ ಬಾಯಿಬಿಟ್ಟಿದ್ದಾನೆ.

ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ 61 ವರ್ಷದ ಸಭೀರ್ ಬಂಧಿತ ಆರೋಪಿಯಾಗಿದ್ದು, ಆತನಿಂದ ಸೋಲಾರ್ ಬ್ಯಾಟರಿ ಮತ್ತು ಟ್ರಾಕ್ಟರ್ ಬ್ಯಾಟರಿ, ಕಳ್ಳತನಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಮಹೇಂದ್ರ, ಎಎಸ್ ಐ ಬಸವರಾಜು, ಸಿಬ್ಬಂದಿಗಳಾದ ಲೋಕೇಶ್, ಶ್ರೀಕಂಠ, ಪರಶಿವಮೂರ್ತಿ ಕೆಂಪರಾಜು ಇದ್ದರು.

Leave a Reply

Your email address will not be published. Required fields are marked *