ಪ್ರೇರಣಾ ಮೋಟಾರ್ಸ್ ನ ಸಂತೋಷ್ ತಂಡ ಗೆಲುವು

 

ಮೈಸೂರು:19 ಸೆಪ್ಟೆಂಬರ್ 2021

೨೦ ನಿಮಿಷದ ಕಬ್ಬಡಿ ಆಟದ ಅಂತ್ಯದಲ್ಲಿ ೨೨ ಅಂಕಗಳಿಸುವ ಮೂಲಕ ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ನ ಸಂತೋಷ್ ತಂಡ ಗೆಲುವು ಸಾಧಿಸಿತು.

ಗ್ಲೋಬಲ್ ಡಿಸೇಲ್ ಇಂಜಿನಿಯರ್ಸ್ ಸಹಕಾರದೊಂದಿಗೆ ಪ್ರೇರಣಾ ಮೋಟಾರ್ಸ್ ಪ್ರೈವೈಟ್ ಲಿಮಿಟೆಡ್( ಟಾಟಾ ಮೋಟಾರ್ಸ್) ನಿಂದ ಪೆವಿಲಿಯನ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಒಂಭತ್ತು ತಂಡಗಳು ಭಾಗವಹಿಸಿದ್ದವು. ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ನ ಸಂತೋಷ್ ತಂಡ ಹಾಗೂ
ಸಿಎನ್ ಜಿ ಲಯನ್ಸ್ ತಂಡ ಅಂತಿಮವಾಗಿ ಸೆಣಸಾಡಿದವು. ಈ ಪೈಕಿ ೧೨ ಅಂಕಗಳಿಸಿದ ಸಿಎನ್ ಜಿ ಲಯನ್ಸ್ ತಂಡ ಸೋಲು ಕಂಡರೆ,
ಎದುರಾಳಿ ತಂಡಕ್ಕೆ ೧೨ ತಂಡ ಪಡೆದುಕೊಂಡಿತು. ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ತಂಡ ೨೨ ಅಂಕ ಪಡೆದು ಗೆದ್ದು ಬೀಗಿತು.

ಪ್ರೇರಣ ಮೋಟಾರ್ಸ್ ನ ವಿಭಾಗೀಯ ಮ್ಯಾನೇಜರ್ ಬಿ.ಎನ್.ರಾವ್, ಎಚ್.ಆರ್. ಅರುಣ್, ಗೆದ್ದ ತಂಡದ ನಾಯಕ ಸಂತೋಷ್,  ನಾಗೇಶ್, ಮಹೇಂದ್ರ, ಮಹದೇವ, ಅಭಿಲಾಶ್, ಶಂಕರ್, ಎಂ.ಮಂಜುನಾಥ್, ಎಂ.ಸುಹಾಸ್, ಗ್ಲೋಬಲ್ ಡಿಸೇಲ್ ಇಂಜಿನಿಯರ್ಸ್ ನ ವೆಂಕಟೇಗೌಡ, ರಾಜೀವ್, ಕಾಂತರಾಜು ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *