ಅಕ್ರಮ ಸಂಬಂಧದ ವಾಸನೆ ಅಣ್ಣನಿಂದಲೇ ತಮ್ಮನ ಕೊಲೆ

48 Views

 

ಸರಗೂರು : 20 ಸೆಪ್ಟೆಂಬರ್ 2021

*ಕ್ರೈಂ ರಿಪೋರ್ಟರ್:ನ@ದಿನಿ*

                     ಕಂಡವರ ಮನೆ ಹೆಣ್ಣು ಮಕ್ಕಳ ಮೇಲೆ ಕಣ್ಣಾಕಿದ್ರೇನೇ ನಾವು ಸುಮ್ಮನೆ ಬಿಡೋದಿಲ್ಲ.
ಬೇಲಿನೆ ಎದ್ದು ಹೊಲ ಮೇಯಿದಂಗೆ ಮನೆಯಲ್ಲಿರುವ ಅಣ್ಣನ ಹೆಂಡತಿ ಮೇಲೆ ಕಣ್ಣಾಕಿದ್ರೆ ಕಟ್ಟಿಕೊಂಡು ಗಂಡ ಬಿಟ್ಟಿಬಿಡ್ತಾನಾ ಹೇಳಿ.ನನ್ನ ಹೆಂಡತಿ ಮೇಲೆ ಕಾಣ್ತಾಕ್ತೀಯ ನಿನಗೊಂದು ಗತಿ ಕಾಣಿಸ್ತೀನಿ ಇರು ಎಂದುಕೊಂಡಿದ್ದ ಅಣ್ಣ ತಮ್ಮನ ಕಣ್ಣೀಗೆ ಕಾರದ ಪುಡಿ ಎರಚಿ ಕೊಲೆಗೈದಿದ್ದಾನೆ.

                    ಹೌದು ,ಜಮೀನಿನಲ್ಲಿ ಲುಂಗಿ ಶರ್ಟ್ ಧರಿಸಿ ಮಕಾಡೆ ಮಲಗಿರುವವ ಸರಗೂರು
ತಾಲ್ಲೂಕಿನ ಬಾಡಗ ಗ್ರಾಮದ ನಿವಾಸಿ ಗುರುಸ್ವಾಮಿ (30) ಮಹದೇವಸ್ವಾಮಿ ಎಂಬುವರಿಂದ ಹತ್ಯೆಯಾದ ಮೃತ ದುರ್ದೈವಿ. ಗುರುಸ್ವಾಮಿಗೆ ಇನ್ನೂ ಮದುವೆ ಆಗಿರಲಿಲ್ಲ.ಮಹದೇವಸ್ವಾಮಿಗೆ
ಗುರುಸ್ವಾಮಿ ಹಾಗೂ ತನ್ನ ಪತ್ನಿ ನಡುವೆ ಅಕ್ರಮ ಸಂಬಂಧದ ವಾಸನೆ ಮೂಗಿಗೆ ಬಡಿತಿತ್ತು.ಈ ವಿಚಾರವಾಗಿ ತಮ್ಮನಿಗೆ ಅಣ್ಣ ಬುದ್ದಿ ಮಾತು ಹೇಳಿದ್ನಂತೆ.ಅಣ್ಣನ ಮಾತಿಗೂ ತಮ್ಮ ಗುರುಸ್ವಾಮಿ ಕ್ಯಾರೆ ಎಂದಿರಲಿಲ್ಲ.ಸೆ.17 ರಂದು
ಗುರುಸ್ವಾಮಿ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಆತನ ಕಣ್ಣಿಗೆ ಕಾರದಪುಡಿ ಹಾಕಿ ಬಳಿಕ ಕುತ್ತಿಗೆಗೆ ಟವಲ್‍ನಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

                      ಇತ್ತ ರಾತ್ರಿಯಾದರು ಮನೆಗೆ ಬಾರದ ಗುರುಸ್ವಾಮಿಯನ್ನು ಕುಟುಂಬಸ್ಥರೊಂದಿಗೆ ಸೇರಿ ಹುಡುಕುವ ನಾಟಕವನ್ನು ಸಹ ಮಹದೇವಸ್ವಾಮಿ ಮಾಡಿದ್ದಲ್ಲದೇ ಬಳಿಕ ತಮ್ಮನ ಶವ ಪತ್ತೆಯಾದಾಗ ಸಾವಿನ ಬಗ್ಗೆ ಅನುಮಾನವನ್ನು ಸಹ ಆತನೇ ವ್ಯಕ್ತಪಡಿಸಿ ಸರಗೂರು ಠಾಣೆಯಲ್ಲಿ ದೂರನ್ನ ಸಹ ದಾಖಲು ಮಾಡಿದ್ದಾನೆ.
ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಸರಗೂರು ಠಾಣಾ ಪೊಲೀಸರು ವೃತ್ತ ನಿರೀಕ್ಷಕ ಆನಂದ್ ಹಾಗೂ ಪಿಎಸ್‍ಐ ಶ್ರವಣ ದಾಸ ರೆಡ್ಡಿ ನೇತೃತ್ವದಲ್ಲಿ ಸ್ವಯಂ ಪ್ರೇರಿತ ದೂರನ್ನು ಸಹ ದಾಖಲು ಮಾಡಿಕೊಂಡ ವಿಚಾರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಮೃತ ಗುರುಸ್ವಾಮಿಯ ಅಣ್ಣ ಮಹದೇವಸ್ವಾಮಿಯ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ
ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಮಹದೇವಸ್ವಾಮಿ ಆತ್ಮಹತ್ಯೆಗೂ ಯತ್ನಿಸಿದ್ದೇ ಎಂದು ಬಾಯಿಬಿಟ್ಟಿದ್ದ.ಇಬ್ಬರು ಮಕ್ಕಳ ಗತಿ ಏನಾಗಬಹುದು ಎಂದು ಮನವರಿಕೆ ಮಾಡಿಕೊಂಡು ಆತ್ಮಹತ್ಯೆಯಿಂದ ಹಿಂದೆ ಸೆರೆದಿದ್ದ.ತಮ್ಮನನ್ನ ಕೊಲೆ ಮಾಡಿದರೇ ನೆಮ್ಮದಿಯಂದಿರಬಹುದು ಎಂದು ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಧ್ಯ ಆತನನ್ನ ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸುವಲ್ಲಿ ಸರಗೂರು ಠಾಣಾ ಪೋಲೀಸರು ಯಶಸ್ವಿಯಾಗಿದ್ದಾರೆ.

                 ಯಾರಿಗೂ ಗೊತ್ತಾಗಲ್ಲ ಎಂದು ಚಾಪೆ ಕೆಳಗೆ ನುಗ್ಗಿ ಕೊಲೆ ಮಾಡಿದ್ದ. ರಂಗೋಲಿ ಕೆಳಗೆ ನುಗ್ಗಿ ತನಿಖೆ ನಡೆಸಿದ ಪೋಲಿಸರು ಕೊಲೆಗಾರನನ್ನ ಜೈಲಿಗಟ್ಟಿದ್ದಾರೆ. ಅಕ್ರಮ ಸಂಬಂಧದ ಅಣ್ಣ ತಮ್ಮನ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ.

Leave a Reply

Your email address will not be published.