ಸಮಾಜ ಸಂಘಟನೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ : ಸುಬ್ಬಣ್ಣ

 

ಮೈಸೂರು:20 ಸೆಪ್ಟೆಂಬರ್ 2021

ನ@ದಿನಿ

ಸಮಾಜ ಸಂಘಟನೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ  ಎಂದು ಸುಬ್ಬಣ್ಣ (ಸುಬ್ರಹ್ಮಣ್ಯ )
ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ ಸುಬ್ರಹ್ಮಣ್ಯ ಅವರು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ, ಜಿಲ್ಲಾ ಮಹಿಳಾ ಘಟಕ ರಚನೆ, ಕಾನೂನು ಘಟಕ ಯುವ ಘಟಕಗಳ ರಚನೆ ಹಾಗೂ ಸಮಾಜ ಸಂಘಟನೆ ಬಗ್ಗೆ ಸಮಾಜದ ಮುಖಂಡರು ಜನಪ್ರತಿನಿಧಿಗಳು ಯುವ ಮುಖಂಡರು ಹಾಗೂ ಸಮಾಜದ ಜನರೊಂದಿಗೆ ಅವರು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಇದೇ ತಿಂಗಳ 18 ರಿಂದ 25ನೆ ತಾರೀಕಿನವರೆಗೂ ಕೂಡ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡು ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕನಕದಾಸರ ಬಂಡೆ ಇರುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. 

ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ ಎಸ್ ಸುಬ್ರಹ್ಮಣ್ಯ ಅವರಿಗೆ ವೆಂಕಟೇಶಮೂರ್ತಿ ಪುಟ್ಟಬಸವಯ್ಯ ಮಂಡ್ಯ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಸುರೇಶ್, ಶ್ರೀರಂಗಪಟ್ಟಣ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಭಾಸ್ಕರ್, ಎಚ್ ಡಿ ಕೋಟೆ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷರಾದ ಶಿವಪ್ಪಕೋಟೆ ಮುಖಂಡರಾದ ಲೋಕೇಶ್ ಕುಮಾರ್, ಮುದ್ದೇಗೌಡ ಮತ್ತು ಶ್ರೀರಂಗಪಟ್ಟಣ ತಾಲ್ಲೂಕು ಕುರುಬ ಸಂಘದ ಸದಸ್ಯರು ಸುಬ್ಬಣ್ಣರವರನ್ನ ಸನ್ಮಾನಿಸಿದರು.

Leave a Reply

Your email address will not be published. Required fields are marked *