ಮೈಸೂರು:17 ಸೆಪ್ಟೆಂಬರ್ 2021
ಸ್ಪೇಷಲ್ ಸ್ಟೋರಿ: ನ@ದಿನಿ
ಸ್ಪರ್ದೇ ಕಠಿಣವಾಗಿದ್ರೂ ಛಲ ಬಿಡದೇ ಎದುರಾಳಿಯನ್ನ ಮಕಾಡೇ ಮಲಗಿಸಿದ್ಲೂ.
ಕ್ರೀಡೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದಿದ್ದಳು ಗೆದ್ದು ಬಿಟ್ಟಿದ್ದಳು.ಸಾಧಿಸಿಯೇ ಸಾಧಿಸುತ್ತೇನೆ ಎಂದವಳು ಸಾಧಿಸಿ ತೋರಿಸಿದ್ಲೂ.ವಾರದ ಹಿಂದೆ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದ ಬಾಲಕಿ
ದೂರದ ಗೋವಾದಲ್ಲಿ ಚಿನ್ನವನ್ನೇ ಚಾಚಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಹೌದು,
ಗೋವಾದಲ್ಲಿ ಯುಜಿಎಕೆ,ಯು
ಜಿಎಫ್ ಐ,ಡಬ್ಲ್ಯೂಯುಜಿಎಫ್ ವತಿಯಿಂದ ಸೆ.10 ರಿಂದ 12 ರವರಗೆ ನಡೆದ ಕರ್ನಾಟಕ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ಸ್ ಷಿಪ್ 2021ರಲ್ಲಿ ಭಾಗವಹಿಸಿದ್ದ ಬಿಬಿ ಫಾತೀಮಾ ಯದುರಾಳಿಯ ಜೊತೆ ಸ್ಪರ್ಧೇ ಗಿಳಿದು ರೋಚಕ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.
ರಾಜೀವ್ ನಗರದಲ್ಲಿರುವ ಎಲೈಟ್ ಅಕಾಡೆಮಿಯಲ್ಲಿ ಕಳೆದ 3 ವರ್ಷಗಳಿಂದ
ಫರ್ಜತ್ ಆಲಿಯಾಸ್ ಮೊಹಮದ್ ಇಲಿಯಾಜ್ ರವರು ಫಾತಿಮಾಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.ಅವರ ಶ್ರಮದ ಫಲ ಫಾತೀಮಾಳಿಗೆ ಪದಕಗಳಿಸುವಂತೆ ಮಾಡಿದೆ.
ತಂದೆಯಿಂದ ದೂರವಾದ ಫಾತಿಮಾಳಿಗೆ ಆಸೆರೆಯಾಗಿರುವ ಮಂಗಳಮುಖಿ ಅಕ್ರಂ ಪಾಷಾ,ಪ್ರಣತಿ ಪ್ರಕಾಶ್.ಬಿಬಿ ಫಾತೀಮಾ ಗೋವಾಗೆ ತೆರಳಲು ಜನರ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ರು.ಸಹಾಯ ಹಸ್ತ ಚಾಚಿದ ದಾನಿಗಳಿಗೆ ಧನ್ಯವಾದ ತಿಳಿಸಿದರು. ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಹೆಸರು ತಂದುಕೊಟ್ಟಿರುವ ಬಿಬಿ ಫಾತೀಮಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಆಸೆಯನ್ನ ಹೇಳಿಕೊಂಡಿದ್ದಾಳೆ.
ಒಟ್ಟಾರೆ ಹೇಳೋದಾದರೇ ಬಡತನ ಜೀವನಕ್ಕಿರಬಹುದು ಸಾಧನೆಗಲ್ಲ ಎಂಬುದನ್ನ 15 ವರ್ಷದ ಬಿಬಿ ಫಾತೀಮಾ ತನ್ನ ಸಾಧನೆಯನ್ನ ಚಿನ್ನದ ಮೂಲಕ ತೋರಿಸಿಕೊಟ್ಟಿದ್ದಾಳೆ.