ಮದುವೆ ನಿಶ್ಚಿತಾರ್ಥ ಇವೆಲ್ಲಾ ಸುಳ್ಳು ಸುದ್ದಿ ಎಂದು ಮಾಧ್ಯಮದವರ ಮುಂದೆ ಹೇಳುತ್ತಿದ್ದ ನಟ ಅಭಿಷೇಕ್ ಅವಿವಾ ಜೊತೆ ನಿಶ್ಚಿತಾರ್ಥ

ನಂದಿನಿ ಮೈಸೂರು

ಮದುವೆ ನಿಶ್ಚಿತಾರ್ಥ ಇವೆಲ್ಲಾ ಸುಳ್ಳು ಸುದ್ದಿ ಮಾಧ್ಯಮದವರು ನೀವೇ ಅದೆಷ್ಟು ಬಾರೀ ನನ್ನ ಮದುವೆ ಅಂತ ಸುದ್ದಿ ಬಿತ್ತರಿಸಿದ್ದೀರಾ? ನೀವು ಸುದ್ದಿ ಮಾಡಿ ನನಗೆ ಯಾರು ಹೆಣ್ಣನ್ನೇ ಕೊಡ್ತಿಲ್ಲ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿ ಜಾಣ್ಮೇಯಿಂದ ಜಾರಿಕೊಳ್ಳುತ್ತಿದ್ದ ನಟ ಅಭಿಷೇಕ್ ಅಂಬರೀಶ್ ಅವಿವಾರಿಂದ ಉಂಗುರ ತೊಡಿಸಿಕೊಂಡಿದ್ದಾರೆ.

https://fb.watch/hlntOQ_oIs/

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕುಟುಂಬಸ್ಥರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಅಭಿಷೇಕ್ ಹಾಗೂ ಅವಿವಾ ಡೈಮೆಂಡ್ ಉಂಗುರ ಬದಲಾಯಿಸಿಕೊಂಡಿದ್ದಾರೆ.ಅಭಿಷೇಕ್ ಅವಿವಾ ಉಂಗುರ ತೊಡಿಸುತ್ತಿದ್ದಂತೆ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು.

https://fb.watch/hlFMUBJDvg/

ಅವಿವಾ ಅಭಿಷೇಕ್ ನಿಶ್ಚಿತಾರ್ಥಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್,ರಾಕಿಂಗ್ ಸ್ಟಾರ್ ಯಶ್,ನಟಿ ರಾಧಿಕಾ ಪಂಡಿತ್,ರಾಕ್ ಲೈನ್ ವೆಂಕಟೇಶ್,ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಕನ್ನಡ ಚಿತ್ರರಂಗದ ನಟ ನಟಿಯರು ಹೂಗುಚ್ಚ ನೀಡಿ ಶುಭಕೋರಿದರು. 

ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ.ಅಭಿಷೇಕ್ ಹಾಗೂ ಅವಿವಾ ಮೊದಲಿಗೆ ಸ್ನೇಹಿತರಾಗಿದ್ದರು.ನಂತರ ಇಬ್ಬರಲ್ಲೂ ಒಬ್ಬರ ನಡುವೆ ಒಬ್ಬರು ಪ್ರೀತಿ, ಕಾಳಜಿ ಹೊಂದಿದ್ದರಿಂದ ಸ್ನೇಹ ಪ್ರೇಮವಾಗಿ ಬದಲಾಗಿದೆ.ನಂತರ ಅವಿವಾ ಬಿದ್ದಪ್ಪ ನನ್ನ ಬಾಳ ಸಂಗಾತಿಯಾಗಲಿ ಎಂದು ಅಭಿಷೇಕ್ ಆಸೆ ಪಟ್ಟಿದ್ದರು.ಇಬ್ಬರ ಕುಟುಂಬಸ್ಥರು ಮಾತು ಕತೆ ನಡೆಸಿ ಅವಿವಾ ಅಭಿಷೇಕ್ ಗೆ ನಿಶ್ಚಿತಾರ್ಥ ಮುದ್ರೆ ಹಾಕಿಸಿದ್ದಾರೆ.ಕೆಲ ವರ್ಷಗಳಿಂದಲೂ ಪ್ರೀತಿ ಗುಟ್ಟನ್ನ ಅಭಿಷೇಕ್ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ.ಸರ್ ನಿಮ್ಮ ಮದುವೆಯಂತೆ? ನಿಮ್ಮ‌ ಬಾಳ ಸಂಗಾತಿ ಯಾರು? ನಿಶ್ಚಿತಾರ್ಥ ಯಾವಾಗ?ಎಂದೆಲ್ಲಾ ಮಾಧ್ಯಮಗಳು ಪ್ರಶ್ನಿಸಿದಾಗ ನಗೆ ಚಟಾಕಿ ಹಾರಿಸಿ ಹೋಗುತ್ತಿದ್ದರು ನಟ ಅಭಿಷೇಕ್.

ನಿಶ್ಚಿತಾರ್ಥ ಉಂಗುರ ಬದಲಾಯಿಸಿಕೊಂಡಿರುವ ಅಭಿಷೇಕ್ ಅವಿವಾ ಮದುವೆ 2023 ಕ್ಕೆ ಅದ್ದೂರಿಯಾಗಿ ನಡೆಯಲಿದೆ.ಎಂಗೆಂಜ್ ಮೆಂಟ್ ಮಾಡಿಕೊಂಡ ಅವಿವಾ ಅಭಿಷೇಕ್ ಜೋಡಿಗೆ ಕನ್ನಡ ಸಿನಿ ನಟ ನಟಿಯರು,ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಅದೇನೇ ಆಗಲೀ ಮಾಡೆಲ್ ಅವಿವಾ ಬಿದ್ದಪ್ಪ ನಟ ಅಭಿಷೇಕ್ ಬಾಳ ಸಂಗಾತಿಯಾಗುವುದರ ಜೊತೆಗೆ ಮಂಡ್ಯದ  ಸೊಸೆಯಾಗಲಿದ್ದಾರೆ.

Leave a Reply

Your email address will not be published. Required fields are marked *