ನಂದಿನಿ ಮನುಪ್ರಸಾದ್ ನಾಯಕ್
ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿದೇವಿ ದೇವಸ್ಥಾನ ಸಾಂಪ್ರದಾಯಕವಾಗಿಉದ್ಘಾಟನೆಗೊಂಡಿತು.

ನಾಗನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಹೋಮ,ಹವನ ನೆರವೇರಿಸಲಾಯಿತು.ಶ್ರೀ ಲಕ್ಷ್ಮೀದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಶ್ರೀ ಸೋಮನಾಥ್ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ದೇವಸ್ಥಾನ ಉದ್ಘಾಟನೆಗೊಂಡಿತು.
ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ, ನಿಕಟ ಪೂರ್ವ ಸಚಿವರು ಮತ್ತು ಶಾಸಕರಾದ ಸಿಟಿ ರವಿ ,ಶಾಸಕರು, ಮೈಸೂರು ಜಿಲ್ಲಾ ನಗರಾಧ್ಯಕ್ಷರಾದ ಎಲ್. ನಾಗೇಂದ್ರ , ಜೆಡಿಎಸ್ ಮುಖಂಡರು ಮಾಜಿ ನಗರ ಪಾಲಿಕೆ ಸದಸ್ಯ ಅವ್ವಾ ಮಾದೇಶ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.5 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು ಜಿಲ್ಲೆಯ ಮುಖಂಡರಾದ ಜಗದೀಶ್ ಗೌಡರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.