ನಂದಿನಿ ಮನುಪ್ರಸಾದ್ ನಾಯಕ್
ಮೈಸೂರಿನಲ್ಲಿ ಜುಲೈ 3ರಿಂದ 12ರವರೆಗೆ “ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ–2026”
ಗುಜರಾತ್ನ ಶ್ರೀಮಂತ ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆಯ ಅನಾವರಣ


ಗುಜರಾತ್ ಸರ್ಕಾರದ ಕೈಗಾರಿಕೆ ಮತ್ತು ಗಣಿ ಇಲಾಖೆಯ ಅಧೀನದಲ್ಲಿರುವ ಕಾಟೇಜ್ ಹಾಗೂ ಗ್ರಾಮೀಣ ಕೈಗಾರಿಕೆಗಳ ಆಯುಕ್ತರ ಕಚೇರಿಯ ಇಂಡಸ್ಟ್ರಿಯಲ್ ಎಕ್ಸ್ಟೆನ್ಷನ್ ಕಾಟೇಜ್ (INDEXT-C) ವತಿಯಿಂದ “ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ–2026” ಅನ್ನು ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್, ರಿಂಗ್ ರಸ್ತೆ, ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಜುಲೈ 3ರಿಂದ 12ರವರೆಗೆ ಆಯೋಜಿಸಲಾಗಿದೆ.
ಮೈಸೂರಿನಲ್ಲಿ ಸತತ 11ನೇ ವರ್ಷ ಈ ಕರಕುಶಲ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, 2016ರಿಂದಲೂ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿರುವ ಈ ಮೇಳವು ಗುಜರಾತ್ನ ಸಾಂಪ್ರದಾಯಿಕ ಕರಕುಶಲಗಾರರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಪ್ರದರ್ಶಿಸಿ, ಮಾರಾಟ ಮಾಡುವ ಮೂಲಕ ಜೀವನೋಪಾಯವನ್ನು ವೃದ್ಧಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ಈ ಮೇಳದಲ್ಲಿ ಗುಜರಾತ್ನ ವಿವಿಧ ಭಾಗಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ನಿಪುಣ ಕರಕುಶಲಗಾರರು ಮತ್ತು ಕೈಮಗ್ಗ ನೇಕಾರರು ಭಾಗವಹಿಸಲಿದ್ದಾರೆ. ಸಂದರ್ಶಕರು ಗುಜರಾತ್ನ ವಿಶಿಷ್ಟ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ವೈವಿಧ್ಯಮಯ ಸಂಗ್ರಹವನ್ನು ಒಂದೇ ಸೂರಿನಡಿ ವೀಕ್ಷಿಸಿ ಖರೀದಿಸಬಹುದಾಗಿದೆ.
ಪ್ರದರ್ಶನದಲ್ಲಿ ಲಭ್ಯವಿರುವ ಪ್ರಮುಖ ವಸ್ತುಗಳು: ಸಾಂಪ್ರದಾಯಿಕ ಕಸೂತಿ ಹಾಗೂ ಮಿರರ್ ವರ್ಕ್,
ಜರಿ–ಜರ್ದೋಸಿ, ಕಲಾಕೃತಿಗಳು,
ಮಣಿಗಳ ಆಭರಣಗಳು, ಹಾಗೂ ಅಲಂಕಾರಿಕ ವಸ್ತುಗಳು,
ಸಾಂಪ್ರದಾಯಿಕ ಚಣಿಯಾ ಚೋಲಿ,
ಬಾಂದನಿ ಹಾಗೂ ಟೈ-ಡೈ ವಸ್ತ್ರಗಳು,
ಚರ್ಮದ ಕರಕುಶಲ ಉತ್ಪನ್ನಗಳು,
ಅಗೇಟ್ (ಅಕೀಕ್) ಕಲ್ಲಿನ ಕಲಾಕೃತಿಗಳು,
ಸೆಣಬು ಹಾಗೂ ಕೊಯಿರ್ ಉತ್ಪನ್ನಗಳು,
ಅಪ್ಲಿಕ್ ಕಲಾಕೃತಿಗಳು,
ಬಿದಿರು ಹಾಗೂ ಬೆತ್ತದ ಉತ್ಪನ್ನಗಳು,
ಮರ ಮತ್ತು ಲೋಹದ ಕರಕುಶಲ ವಸ್ತುಗಳು,
ಗೃಹಾಲಂಕಾರ ಹಾಗೂ ಅಲಂಕಾರಿಕ ವಸ್ತುಗಳು,
ಫ್ಯಾಷನ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳು.
ಈ ಮೇಳದ ವಿಶೇಷ ಆಕರ್ಷಣೆಯಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಗಾರರು ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲೆಗಳ ನೇರ ಪ್ರಾತ್ಯಕ್ಷಿಕೆ (Live Demonstration) ನೀಡಲಿದ್ದು, ಸಂದರ್ಶಕರು ಕರಕುಶಲ ಸೃಜನಶೀಲತೆಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ದೊರೆಯಲಿದೆ.
ಇದಲ್ಲದೆ, ಕಚ್ ಕ್ರಾಫ್ಟ್ ಗ್ಯಾಲರಿಯಲ್ಲಿ ಕಚ್ ಪ್ರದೇಶದ ಪ್ರಸಿದ್ಧ ಕುಚ್ಚಿ ಕಸೂತಿ, ಅಜ್ರಖ್ ಬ್ಲಾಕ್ ಪ್ರಿಂಟಿಂಗ್, ಬಂಧೇಜ್, ಶಾಲುಗಳು ಹಾಗೂ ಇತರ ಪರಂಪರೆಯ ಕರಕುಶಲ ವಸ್ತುಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತದೆ.
ಈ ಮೇಳಕ್ಕೆ ಇನ್ನಷ್ಟು ಸಾಂಸ್ಕೃತಿಕ ಮೆರುಗು ನೀಡುವ ಉದ್ದೇಶದಿಂದ ಜುಲೈ 3ರಿಂದ 5ರವರೆಗೆ ಗುಜರಾತ್ ಸರ್ಕಾರದ ಕ್ರೀಡೆ, ಯುವಜನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯ ಸಹಯೋಗದಲ್ಲಿ ಮೂರು ದಿನಗಳ ಸಾಂಪ್ರದಾಯಿಕ ಗುಜರಾತಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ: ಸಾಂಪ್ರದಾಯಿಕ ಗುಜರಾತಿ ರಾಸ್–ಗರ್ಬಾ
ಕಚ್ನ ಜಂಕಾರ್ ಡ್ಯಾನ್ಸ್ ಅಕಾಡೆಮಿಯಿಂದ ಕುಚ್ಚಿ ರಾಸ್–ಗರ್ಬಾ ಮತ್ತು
ಜುನಾಗಢದ ಶ್ರೀ ಭವಾನಿ ಟಿಪ್ಪಾಣಿ ಲೋಕ ನೃತ್ಯ ಮಂಡಳಿಯಿಂದ ಟಿಪ್ಪಾಣಿ ಜಾನಪದ ನೃತ್ಯ
ಗುಜರಾತ್ನ ಸಮೃದ್ಧ ಜಾನಪದ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಈ ಮೇಳವನ್ನು ಜುಲೈ 3ರಂದು ಮೈಸೂರಿನ ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಉದ್ಘಾಟಿಸಲಾಗುವುದು, ಗುಜರಾತ್ ಸರ್ಕಾರದ ಕಾಟೇಜ್ ಮತ್ತು ಗ್ರಾಮೀಣ ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಮತ್ತು INDEXT-C ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಶಾಹಿದ್, ಐಎಎಸ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.
INDEXT-C ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸಂಜಯ್ ಜೋಶಿ, ಐಎಎಸ್ ಅವರು ಮೈಸೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ, ಗುಜರಾತ್ನ ಸಮೃದ್ಧ ಕರಕುಶಲ ಪರಂಪರೆಯನ್ನು ವೀಕ್ಷಿಸುವಂತೆ ಹಾಗೂ ಕರಕುಶಲಗಾರರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರ ಜೀವನೋಪಾಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರವೇಶ ಮತ್ತು ವಾಹನ ನಿಲುಗಡೆ ಸಂಪೂರ್ಣ ಉಚಿತವಾಗಿದೆ. ಈ ಗುಜರಾತ್ ಕರಕುಶಲ ಉತ್ಸವವು ದಿನಾಂಕ 03 ಜುಲೈ ರಿಂದ 12 ಜುಲೈ ರವರೆಗೆ ಪ್ರತಿದಿನ ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ ಗಂಟೆ 9.00 ರತನಕ ಉಚಿತ ಪ್ರವೇಶದೊಂದಿಗೆ ನಡೆಯಲಿದೆ.
ಶ್ರೀ ಬಿ. ಇಳಂಗೋವನ್
ಉಪನಿರ್ದೇಶಕರು
ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾಗ ಮೈಸೂರು.
ಶ್ರೀ ಕೆ. ಎಸ್. ಟೈಲರ್
ಪ್ರಧಾನ ವ್ಯವಸ್ಥಾಪಕರು (ಹಾತ್) ಮತ್ತು ಜಂಟಿ ಆಯುಕ್ತರು ಇಂಡೆಕ್ಸ್ಟ್- ಸಿ, ಗುಜರಾತ್.
ಡಾ. ಸ್ನೇಹಲ್ ಮಕ್ವಾನ
ವ್ಯವಸ್ಥಾಪಕರು ( ಮಾರುಕಟ್ಟೆ) ಇಂಡೆಕ್ಸ್ಟ್ -ಸಿ ಗುಜರಾತ್