ಜೂಮ್ ಕಂಪನಿ ಆ್ಯಪ್ ಬ್ಯಾನ್ ಮಾಡುವಂತೆ ಅರಮನೆ ನಗರಿ ವಾಹನ ಚಾಲಕ ಕಾರ್ಮಿಕರ ಸಂಘ ಆಗ್ರಹ

ಮೈಸೂರು:28 ಜುಲೈ 2022

ನಂದಿನಿ ಮೈಸೂರು

ಜೂಮ್ ಕಂಪನಿ ಆ್ಯಪ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು ತೆರಿಗೆಯನ್ನು ವಂಚನೆ ಮಾಡುತ್ತಿದ್ದಾರೆ.ಇದರಿಂದ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ.ಜೂಮ್ ಕಂಪನಿ ಆ್ಯಪ್ ಬ್ಯಾನ್ ಮಾಡುವಂತೆ ಅರಮನೆ ನಗರಿ ವಾಹನ ಚಾಲಕ ಕಾರ್ಮಿಕರ ಸಂಘ ಅಧ್ಯಕ್ಷ ಮಹೇಶ್ ಆಗ್ರಹಿಸಿದರು.

ವೈಟ್‌ಬೋರ್ಡ್ ವಾಹನಗಳನ್ನು ಮಾಲೀಕರಿಂದ ಪಡೆದು ಅದನ್ನು ಆಫ್ ಮುಖಾಂತರ ಬುಕ್ಕಿಂಗ್ ಮಾಡಿರುವ ಗ್ರಾಹಕರುಗಳಿಗೆ ಬಾಡಿಗೆಗೆ ನೀಡುತ್ತಿದ್ದು , ಇದಕ್ಕೆ ಯಾವುದೇ ಬಿಲ್ ಅಥವಾ ರಶೀದಿಗಳು ಇರುವುದಿಲ್ಲ . ಇದರಿಂದ ಸರ್ಕಾರಕ್ಕೆ ಬರುವ ಜಿಎಸ್‌ಟಿ ಹಣ ಅಥವಾ ಯಾವುದೇ ತೆರಿಗೆ ಹಣ ಕೊಡುವುದಿಲ್ಲ ಮತ್ತು ವೈಟ್‌ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುವುದು ಕಾನೂನು ಪ್ರಕಾರ ಬಾಹಿರವಾಗಿರುತ್ತದೆ .
ಇದನ್ನು ತಿಳಿದು ಸಹಾ ಜೂಮ್ ಕಂಪನಿಯವರು ವೈಟ್‌ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಿರುತ್ತಾರೆ . ಇದರ ಬಗ್ಗೆ ನಮ್ಮ ಸಂಘದಿಂದ 6 ತಿಂಗಳ ಹಿಂದೆಯೇ ಮೈಸೂರಿನ ಎಲ್ಲಾ ಸಂಚಾರಿ ಠಾಣೆಗಳಿಗೂ ಹಾಗೂ ಆರ್.ಟಿ.ಓ. ಜಂಟಿ ಕಾರ್ಯ ದರ್ಶಿಯವರಿಗೂ ಮತ್ತು ಸಾರಿಗೆ ಸಚಿವರಿಗೂ ಸಹ ನಮ್ಮ ಲೆಟರೆಡ್ ಮೂಲಕ ಒಂದು ಮನವಿಯನ್ನು ನೀಡಿದ್ದೇವೆ. ಜೂಮ್ ಆ್ಯಪ್ ಬ್ಯಾನ್ ಮಾಡಬೇಕು ಇಲ್ಲವಾದ್ದಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ರವಿ,ಕಾರ್ಯದರ್ಶಿ ಆರ್ಯ,ಖಜಾಂಚಿ ಮಹದೇವ್,ಸಂಚಾಲಕ ದಿನೇಶ್,ಉಪಕಾರ್ಯದರ್ಶಿ ಮಹೇಶ್ ರೆಡ್ಡಿ, ಅವಿನಾಶ್,ವಿನೋದ್,ಕಾರ್ತಿಕ್,ಅಂಜನಿ ಹಾಜರಿದ್ದರು.

Leave a Reply

Your email address will not be published. Required fields are marked *