ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಂ ಶಿವಕುಮಾರ್

ಮೈಸೂರು:26 ಜುಲೈ 2022

ನಂದಿನಿ ಮೈಸೂರು

ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಶಿವಕುಮಾರ್ ರವರು ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಮೃಗಾಲಯದ ಆವರಣದಲ್ಲಿ
ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

 

ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳು ಕರ್ನಾಟಕ ಮೃಗಾಲಯ ಪ್ರಾಧಿಕಾರದ ರವಿ ಬಿ ಪಿ ರವರು ಹೂಗುಚ್ಛ ನೀಡಿ ಶುಭ ಹಾರೈಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷದಲ್ಲಿ 33 ವರ್ಷ ದುಡಿದಿದ್ದೇನೆ.ನಗರ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ.ಸಾಮಾನ್ಯವಾಗಿ ಎಲ್ಲರೂ ಜನ ಸೇವೆ ಮಾಡುತ್ತಾರೆ.ಪ್ರಾಣಿ ಸೇವೆ ಮಾಡುವುದು ಕೆಲವೇ ಕೆಲವರು.
ಪಕ್ಷ ನನ್ನನ್ನ ಗುರುತಿಸಿ ಮೃಗಾಲಯ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಟ್ಟಿದೆ.ನನ್ನ ಅಧಿಕಾರದ ಅವಧಿಯಲ್ಲಿ ಮೃಗಾಲಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಶಿವಮೊಗ್ಗದಲ್ಲಿ ನೂತನವಾಗಿ ಆರಂಭಿಸುತ್ತಿರುವ ಸಫಾರಿಗೆ ಮೈಸೂರು ಮೃಗಾಲಯದಿಂದ 21 ಕಾಟೆಗಳನ್ನು ರವಾಸಿಸಲಾಗುತ್ತಿದ್ದು ನೂತನ ಅಧ್ಯಕ್ಷ ಶಿವಕುಮಾರ್ ರವರು ಅಧಿಕೃತವಾಗಿ 3 ಕಾಟೆಗಳ ರವಾನೆಗೆ ಹಸಿರು ನಿಶಾನೆ ತೋರಿದರು.

ಪ್ರಾಧಿಕಾರದ ಸಂರಕ್ಷಣಾಧಿಕಾರಿಗಳು ಹಾಗೂ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರದ ಅಜಿತ್ ಕುಲಕರ್ಣಿ ,
ಮೃಗಾಲಯ ಪ್ರಾಧಿಕಾರದ ಸದಸ್ಯರುಗಳಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ,ನಗರಪಾಲಿಕೆ ನಾಮನಿರ್ದೇಶಕರಾದ ಕೆ ಜೆ ರಮೇಶ್ ,ವನಿತಾ ಪ್ರಸನ್ನ ,ಗೆಜ್ಜಗಳ್ಳಿ ಮಹೇಶ್ ,ಜೋಗಿ ಮಂಜು
ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು
ಅಭಿನಂದಿಸಿದರು.

Leave a Reply

Your email address will not be published. Required fields are marked *