ಕೆ.ಹರೀಶ್‌ಗೌಡರವರ 50 ನೇ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

ಮೈಸೂರು:28 ಜುಲೈ 2022

ನಂದಿನಿ ಮೈಸೂರು

ಚಾಮರಾಜ ವಿಧಾನಸಭಾ ಕ್ಷೇತ್ರ ದ ಕೆ.ಹರೀಶ್‌ಗೌಡರವರ 50 ನೇ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಉದ್ಯೋಗ ಮೇಳ ಹಾಗೂ ಅಂಗವಿಕಲರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೆ . ಹರೀಶ್‌ಗೌಡರ ಸ್ನೇಹ ಬಳಗ ಹಾಗೂ ಉದ್ಯೋಗದಾತ ಸಂಸ್ಥೆಯ ಸಹಯೋಗದೊಂದಿಗೆ
ಮೈಸೂರಿನ ಗೋಕುಲಂ 3 ನೇ ಹಂತದಲ್ಲಿರುವ
ಮೈಸೂರು ಒನ್ ಮೈದಾನ ಡಾಕ್ಟರ್ ಕಾರ್ನರ್ ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಾವಿರಾರು ಯುವಕ ಯುವತಿಯರು ಮೇಳದಲ್ಲಿ ಭಾಗಿಯಾಗಿ ಉದ್ಯೋಗ ಅವಕಾಶ ಪಡೆದುಕೊಂಡರು.

ರಾಜಕೀಯ ಮುಖಂಡರು, ಕಾರ್ಯಕರ್ತರು,ಆಭಿಮಾನಿಗಳು ಕೆ . ಹರೀಶ್‌ಗೌಡರವರಿಗೆ ಹೂಗುಚ್ಚ ನೀಡಿ ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದರು.

ನಂತರ ಮಾತನಾಡಿದ ಅವರು ನನ್ನ ಹುಟ್ಟು ಹಬ್ಬ ಅಂಗವಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.ನೂರಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದು ಸಾವಿರಾರು ಯುವಕ ಯುವತಿಯರು ನೋಂದಣಿ ಮಾಡಿಕೊಂಡು ಉದ್ಯೋಗ ಪಡೆದಿದ್ದಾರೆ.ಇಂತಹ ಸೇವಾ ಕಾರ್ಯಕ್ರಮ ತೃಪ್ತಿ ತಂದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *