ಶ್ರೀ ಲಕ್ಷ್ಮಮಣ್ಮೀ,ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಿ)ಈ ಇಬ್ಬರು ಮಹಾರಾಣಿಯರನ್ನ ನೆನೆದ ಯದುವೀರ್

104 Views

ಮೈಸೂರು:8 ಮಾರ್ಚ್ 2022

ನಂದಿನಿ ಮೈಸೂರು

ಭಾರತ್ ಹಾಸ್ಪಿಟಲ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿಯಾವರು ಉದ್ಘಾಟಿಸಿದರು.

ಸಂಸ್ಥೆಯಲ್ಲಿ ಸಾಧನೆ ಮಾಡಿದ ಡಾ.ಆರ್.ಇಂದ್ರ,ಡಾ.ವೈಎಸ್.ಮಾಧವಿ,ಭೂದೇವಿ,ಮಂಗಳ ರವರಿಗೆ ತ್ರಿಷಿಕಾ ಕುಮಾರಿರವರು ಸನ್ಮಾನಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯದುವೀರ್ ರವರು ಮೈಸೂರು ವಂಶಸ್ಥರು ಉಳಿದಿದ್ದಾರೆ ಎನ್ನುವುದಕ್ಕೆ ನಮ್ಮ ರಾಜವಂಶಸ್ಥರ ಇಬ್ಬರು ಮಹಿಳೆಯರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ಶ್ರೀ ಲಕ್ಷ್ಮಮಣ್ಮೀ,ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಿ)ಈ ಇಬ್ಬರು ಮಹಾರಾಣಿಯರಿಂದ ನಮ್ಮ ಮನೆತನ ಉಳಿದಿದೆ ಎಂದು ಹೇಳುತ್ತಿದ್ದೇನೆ.ಇವರ ಕಾಲದಲ್ಲಿ ಸಾಂಕ್ರಾಮಿಕ ರೋಗ ಇತ್ತು. ಜನರು ಭಯಪಡುತ್ತಿದ್ದರು.ವೈದ್ಯರು ಜಾಗೃತಿ ಮೂಡಿಸಿ ರೋಗ ನಿವಾರಣೆಗೆ ಶ್ರಮಿಸಿದ್ರು.ನಂತರ ಜನರ ಅನುಕೂಲಕ್ಕಾಗಿ ಆಸ್ಪತ್ರೆ ಸ್ಥಾಪಿಸಿದರು.
ಶಿಕ್ಷಣ,ಆರೋಗ್ಯ ಕ್ಷೇತ್ರ ಅಭಿವೃದ್ಧಿಗೊಳಿಸಿದ್ರು.ಇವರ ಕೊಡುಗೆ ಇಂದಿಗೂ ಜೀವಂತವಾಗಿದೆ.ಈ ಸಂದರ್ಭದಲ್ಲಿ ಸನ್ಮಾನಿತರಿಗೆ ಅಭಿನಂದನೆ ತಿಳಿಸುತ್ತೇನೆ.
ಮಹಿಳೆಯರಿಗೆ ಆರ್ಥಿಕ ಪರಿಸ್ಥಿತಿ ನಿವಾರಣೆ ಆಗಬೇಕಾದರೇ ಅವರ ಆರೋಗ್ಯ ಮುಖ್ಯ.ಹಳ್ಳಿ ಹಳ್ಳಿಗೆ ಬಸ್ ಮೂಲಕ ಆರೋಗ್ಯ ದ ಬಗ್ಗೆ ಜಾಗೃತಿ ನೀಡಲೂ ಮುಂದಾಗಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಸಿಒಒ ನಿರ್ಮಲಾ ಕೆ ಮೂರ್ತಿ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published.