ನಮ್ಮ ಯದು ವಂಶ ಬೆಳೆಯಲು ಕಾರಣವೇ ಮಹಿಳೆಯರು:ಯದುವೀರ್

ಮೈಸೂರು:8 ಮಾರ್ಚ್ 2022

ನಂದಿನಿ ಮೈಸೂರು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
ಸನ್ ಫ್ಯೂರ್ ವತಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಸೆಂಟ್ ಫಿಲೋಮಿನ ಚರ್ಚ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ
ಸಾಲುಮರದ ತಿಮ್ಮಕ್ಕ,ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕ ಕುಮಾರಿ ಒಡೆಯರ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

500 ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ,ಆರೋಗ್ಯಕರ ಸಂವಾದ ಸೇರಿದಂತೆ ಸಾಲು ಮರದ ತಿಮ್ಮಕ್ಕ ರವರ ಮೂಲಕ 500 ಸಸಿ ನೀಡಲಾಯಿತು.

ನಂತರ ಮಾತನಾಡಿದ ಅವರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಸೆಂಟ್ ಫಿಲೋಮಿನ ಚರ್ಚ್ ನಲ್ಲಿ ಮಹಿಳೆಯಿರಿಗೆ ಗೌರವಿಸೋ ಕಾರ್ಯಕ್ರಮ ಮಾಡಿದ್ದಾರೆ.ಒಳ್ಳೆಯ ಕಾರ್ಯಕ್ರಮ ಇದಾಗಿದೆ.ಎಲ್ಲಾ ಮಹಿಳೆಯರಿಗೂ ಅಂತರಾಷ್ಟ್ರೀಯ ದಿನಾಚರಣೆ ಶುಭಾಶಯಗಳನ್ನ ತಿಳಿಸುತ್ತೇನೆ.ನಮ್ಮ ಯದು ವಂಶ ಬೆಳೆಯಲು ಕಾರಣವೇ ಮಹಿಳೆಯರು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾದುದು. ಅಂತೆಯೇ ನಮ್ಮ ವಂಶಕ್ಕೂ ಮಹಿಳೆಯರು ಅನನ್ಯ ಸೇವೆ ಸಲ್ಲಿಸಿದ್ದಾರೆ. ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಾಗ ಮುಮ್ಮಡಿ ಕೃಷ್ಣರಾಜ ಒಡೆಯರ್‌ಗೆ ಕೇವಲ ೫ ವರ್ಷ. ಅಂತಹ ಸಂದರ್ಭದಲ್ಲಿ ಅಧಿಕಾರ ಪಡೆದುಕೊಂಡ ಲಕ್ಷ್ಮಮ್ಮಣ್ಣಿ ಅವರು ಯಶಸ್ವಿಯಾಗಿ ಮುನ್ನಡೆಸಿದರು ಎಂದರು.ಅಂದು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಜನರು ಲಸಿಕೆ ತೆಗೆದುಕೊಳ್ಳಲು ಭಯ ಪಡುತ್ತಿದ್ದರು. ಲಕ್ಷ್ಮಮ್ಮಣ್ಣಿಯವರೇ ಮುಂದೆ ನಿಂತು ಲಸಿಕೆ ಹಾಕಿಸಿದ್ದರು. ಜತೆಗೆ ಅಪಾರ ಜನಪರ, ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಾಜಮಾತೆ ಪ್ರಮೋದಾದೇವಿ ಒಡೆಯರ್‌ವರೆಗೆ ಎಲ್ಲರೂ ಯದು ವಂಶ ಬೆಳೆಯಲು ಕಾರಣರಾಗಿದ್ದಾರೆ. ಇಂದು ನಮ್ಮ ವಂಶಕ್ಕೆ ಏನಾದರೂ ಒಳ್ಳೆಯ ಹೆಸರಿದೆ ಎಂದರೆ ಅದಕ್ಕೆ ಕಾರಣವೇ ಮಹಿಳೆಯರು ಎಂದರು.

ಕಾರ್ಯಕ್ರಮದಲ್ಲಿ ಸನ್‌ಪ್ಯುರ್ ನಿರ್ದೇಶಕ ಅಬ್ದುಲ್ ಹನ್ನನ್ ಖಾನ್, ಫಾದರ್ ಸ್ಟ್ಯಾನ್ಲಿ, ಗೋಕರಣ್‌ಸಿಂಗ್, ಮನನ್ ಖಾನ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *