ವುಶು ಕ್ರೀಡೆಯಲ್ಲಿ 7 ವರ್ಷದ ಬಾಲಕಿ ಸಾಧನೆ,ಅತಿ ಚಿಕ್ಕ ವಯಸ್ಸಿನಲ್ಲೆ ಪದಕ ಪಡೆದ ರಾಷ್ಟ್ರದ ಏಕೈಕ ಪಟು ,ಭಯ ಪಟ್ರೇ ನಾವು ಯಾವತ್ತು ಮುಂದೋಗೋಕೆ ಆಗಲ್ಲ ಎಂದ ಪ್ರಣತಿ

ಮೈಸೂರು:1 ಏಪ್ರಿಲ್ 2022

ನಂದಿನಿ ಮೈಸೂರು

ಈ ಪೋರಿಯನ್ನ ನೋಡ್ತೀದ್ರೇ ಪಾಪ ಮುಗ್ದೇ ಅಂದುಕೊಂಡ್ರೇ ಅದು ನಿಮ್ಮ ಭ್ರಮೆ.ಸ್ಪರ್ದೇಗೆ ಇಳಿದ್ರೇ ಸಾಕು ಆಕೆಯ ಲೆವೆಲ್ ಯೇ ಬೇರೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಗಾದೆ ಇದೀಯಲ್ಲ ಆ ಗಾದೆಗೆ ಉದಾಹರಣೆಯಂತಿದ್ದಾಳೆ ಈ ಪುಟ್ಟ ಬಾಲಕಿ.ತನ್ನ 7ನೇ ವಯಸ್ಸಿನಲ್ಲಿ ವುಶು ಕ್ರೀಡೆಯಲ್ಲಿ ಅತಿ ಕಡಿಮೆ ವಯಸ್ಸಿನಲ್ಲೆ ಪದಕ ಪಡೆದ ರಾಷ್ಟ್ರದ ಏಕೈಕ ಪಟು ಈ ಪ್ರಣತಿ.

ಮೈಸೂರಿನ ಗಾಯತ್ರಿ ಪುರಂ ನ ಗಿರಿಧರ್.ಎಸ್.ಡಿ ಮತ್ತು ಸಂಗೀತಾ.ಎಲ್ ರವರ ಪುತ್ರಿ ಪ್ರತಿತಿ.ಜಿ ವುಶು ಚಾಂಪಿಯನ್ಸ್ ನಲ್ಲಿ ಸಾಧನೆಗೈದಿದ್ದಾಳೆ. ಪೋಲಿಸ್ ಪಬ್ಲಿಕ್ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಓದುತ್ತಿರುವ ಪ್ರಣತಿ.

ವುಶು ಕ್ರೀಡೆ ಎಂದರೇ ಸಾಂಪ್ರದಾಯಿಕ ಸಮರ ಕಲೆ,ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ.ಈ ಕ್ರೀಡೆಗೆ ಭಾರತ ಸರ್ಕಾರದಿಂದ ಮಾನ್ಯತೆ ಇದೆ ಜೊತೆಗೆ ಪ್ರೋತ್ಸಾಹ ಕೂಡ ನೀಡುತ್ತಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಧರ್ಮ ತಿಳಿಸಿದ್ರು.

ಪ್ರಸಕ್ತ ಸಾಲಿನಲ್ಲಿ ಕನ್ಯಾಕುಮಾರಿಯಲ್ಲಿ ನಡೆದ 21 ನೇ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್ ಷಿಷ್ ನಲ್ಲಿ ಕಂಚಿನ ಪದಕ ಗೆದ್ದ ಚಿಕ್ಕ ವಯಸ್ಸಿನಲ್ಲಿ ಮೈಸೂರಿಗೆ ಕೀರ್ತಿ ತಂದುಕೊಟ್ಟಿದ್ದಾಳೆ.ವುಶು ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಅತೀ ಕಿರಿಯ ಕ್ರೀಡಾಪಟು ಪ್ರಣತಿ.ಅದಲ್ಲದೇ ರಾಜ್ಯ ಮಟ್ಟದ ವುಶು ಚಾಂಪಿಯನ್ ಶಿಪ್ ನಲ್ಲಿ ಸತತ ಎರಡು ಚಿನ್ನದ ಪದಕ ಗೆದ್ದಿದ್ದಾಳೆ .ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತರಬೇತಿ ನೀಡುತ್ತಿದ್ದು,ಆಕೆಗೆ ಪ್ರತಿದಿನ 4 ಗಂಟೆ ಕಾಲ ತರಭೇತಿ ನೀಡುತ್ತೇವೆ.ತುಂಬ ಬುದ್ದಿವಂತೆಯಾಗಿದ್ದಾಳೆ.ಶ್ರದ್ದೇಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡುತ್ತಿರೋದು ಹೆಮ್ಮೆಯ ವಿಚಾರ.
ಪ್ರಣತಿ ಐಎಎಸ್ ಅಥವಾ ಐಪಿಎಸ್ ಮಾಡುವ ಕನಸನ್ನು ಹೊಂದಿದ್ದಾಳೆ.
ಮುಂದಿನ ದಿನಗಳಲ್ಲಿ ಆಕೆಗೆ ಉತ್ತಮ ಭವಿಷ್ಯವಿದೆ ಎಂದು ವುಶು ತರಬೇತುದಾರ ಆಶೀಫ್ .ಎಂ.ಕೆ ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲದೇ ಪ್ರಣತಿಯಂತೆ ನೀವು ವುಶು ಕ್ರೀಡೆಯಲ್ಲಿ ಸಾಧನೆ ಮಾಡಬಹುದು ನೀವು ಬನ್ನಿ ಮಕ್ಕಳೆ ಎಂದು ಆಹ್ವಾನಿಸಿದರು.

ಭಯ ಪಟ್ರೇ ನಾವು ಯಾವತ್ತು ಮುಂದೋಗೋಕೆ ಆಗಲ್ಲ.ಸ್ಪರ್ಧೇ ವೇಳೆ ನೋವಾಗೋದುಂಟು.ಹಾಗಂತಾ ನಾವು ಸಾಧನೆ ಮಾಡಬೇಕೆಂದ್ರೇ ಅದನ್ನೇಲ್ಲ ಫೇಸ್ ಮಾಡಬೇಕು ಅಂತಾಳೇ ಪ್ರಣತಿ.

ಅದೇನೇ ಆಗಲೀ ಆಟ ಆಡಿಕೊಂಡು ಇರೋ ಬಾಲ್ಯದ ವಯಸ್ಸಿನಲ್ಲಿ ಸಾಧನೆ ಮಾಡಿರುವ ಪ್ರಣತಿಗೆ ಒಂದು ಸಲಾಂ ಹೇಳಲೇ ಬೇಕು.

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು.

Leave a Reply

Your email address will not be published. Required fields are marked *