ಮೈಸೂರು:31 ಮಾರ್ಚ್ 2022
ನಂದಿನಿ ಮೈಸೂರು
ತೈಲ ಬೆಲೆ ಏರಿಕೆ ವಿರುದ್ಧ ಕಾರ್ಯಕರ್ತರು ತಮ್ಮ ಮನೆ ಮುಂದೆ ಪ್ರತಿಭಟಿಸಬೇಕೆಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಸೋನಿಯಾ ಗಾಂಧಿರವರ ಆದೇಶದ ಮೇರೆಗೆ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್ ಪ್ರತಿಭಟನೆ ನಡೆಸಿದರು.
ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂಕೆ ಸೋಮಶೇಖರ್ ವಿನೂತನ ಪ್ರತಿಭಟನೆಗೆ ಆಗಮಿಸಿ
ಕಾರು,ಬೈಕ್ ,ಗ್ಯಾಸ್ ಸಿಲಿಂಡರ್ ಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಯುವ ಕಾಂಗ್ರೆಸ್ ಮುಖಂಡ ನೇವಲ್ ತೈಲ ಬೆಲೆ ಏರಿಕೆಗೆ ಬೇಸತ್ತು ಮನೆಯ ಮುಂದೆ ಕಾರು ಬೈಕ್ ಸಂಚಾರಕ್ಕೆ ಗುಡ್ ಬಾಯ್ ಹೇಳಿ ಸೈಕಲ್ ಏರಿ ಹೊರಟ ದೃಶ್ಯ ಕಂಡು ಬಂತು.
ಗ್ಯಾಸ್ ,ಪೆಟ್ರೋಲಿಯಂ,ಡಿಸೇಲ್ ಬೆಲೆ ಏರಿಕೆ ಬಡವರ ಜೇಜು ಸುಡುತ್ತಿದೆ.ಸಿಲಿಂಡರ್ ಬೆಲೆ 950ಕ್ಕೆ ಏರಿಕೆಯಾಗಿದೆ.ದಿನ ನಿತ್ಯ ಬಳಸುವ
ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ಆಗುತ್ತಲೇ ಇದೆ.ಜನರು ಸಂಕಷ್ಟದಲ್ಲಿದ್ದಾರೆ.ಇಂದು ಸೋನಿಯಾ ಗಾಂಧಿರವರ ಆದೇಶದ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಮನೆ ಮುಂದೆ ವಾಹನ,ಗ್ಯಾಸ್ ಸಿಲಿಂಡರ್ ಇರಿಸಿ ಬೆಲೆ ಏರಿಕೆಗೆ ಎಳ್ಳು ನೀರು ಬಿಟ್ಟು ಜಾಗಟೆ ಬಡಿದು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದೇವೆ ಎಂದು ಅಶೋಕ್ ತಿಳಿಸಿದರು.
ಪ್ರತಿಭಟನೆಯಲ್ಲಿ ಸೌಮ್ಯ,ಸರ್ವಮಂಗಳ,ನೇಹ ಅಶೋಕ್,ನಾಗಮ್ಮ,ಉಮೇಶ್,ಸತೀಶ್,ಮೈಸೂರು ಬಸವಣ್ಣ ಸೇರಿದಂತೆ ಇತರರು ಹಾಜರಿದ್ದರು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು