ಮೈಸೂರು:31 ಮಾರ್ಚ್ 2022
ನಂದಿನಿ ಮೈಸೂರು
ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂಅಸಂಘಟಿತ ಕಾರ್ಮಿಕ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಅರಮನೆ ಎದುರಿನ ರಾಜಕುಮಾರ್ ಪಾರ್ಕ್ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಬೈಕ್,ಗ್ಯಾಸ್ ಸಿಲಿಂಡರ್ ಗೆ ಮಂಗಳಾರತಿ ಮಾಡಿ
ಜಾಗಟೆ ಬಾರಿಸಿ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ,ಗ್ರಾಮಾಂತರ ಅಧ್ಯಕ್ಷ ಬಿಜೆ ವಿಜಯ್ ಕುಮಾರ್ ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆ ಸಂಕಷ್ಟ ಎದುರಾಗಿದೆ.ಪ್ರತಿದಿನ ದಿನನಿತ್ಯ ಬಳಸುವ ಅಡುಗೆ ಅನಿಲ,ಅಡುಗೆ ಎಣ್ಣೆ,ಪೆಟ್ರೋಲ್ ,ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ.ಬಡವರು ಜೀವನ ನಡೆಸೋಕೆ ಆಗುತ್ತಿಲ್ಲ.ಆದ್ದರಿಂದ ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂಅಸಂಘಟಿತ ಕಾರ್ಮಿಕ ವಿಭಾಗದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ.ತೈಲ ಬೆಲೆ ಕಡಿಮೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.