ವಿಶ್ವ ಶೌಚಾಲಯ ದಿನದ ಜಾಗೃತಿ ಜಾಥಾ

ನಂದಿನಿ ಮೈಸೂರು

ವಿಶ್ವ ಶೌಚಾಲಯ ದಿನದ ಜಾಗೃತಿ ಜಾಥಾ 

ಮೈಸೂರು: ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ.ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯು ಶಿಕ್ಷಣಕ್ಕೆ ದೊಡ್ಡ ಅಡಚಣೆಯಾಗಿದ್ದು, ನೈರ್ಮಲ್ಯ ಸಂಬಂಧಿತ ಸಮಸ್ಯೆಗಳಿಂದ ಮಕ್ಕಳು ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದಾರೆ.

ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಸಮಗ್ರ ಗ್ರಾಮಾಭಿವೃದ್ಧಿಯ ಭಾಗವಾಗಿ ಕರ್ನಾಟಕ ಕ್ಲಸ್ಟರ್‌ನಲ್ಲಿ 72 ಅಂಗನವಾಡಿ ಮತ್ತು 71 ಶಾಲಾ ಶೌಚಾಲಯಗಳನ್ನು ನವೀಕರಿಸಿ ನಿರ್ಮಿಸಿದೆ.

ದೊಡ್ಡಕಣ್ಯ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾದಲ್ಲಿ 75 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಶೌಚಾಲಯದ ಬಳಕೆ ಮತ್ತು ನಿರ್ವಹಣೆಯ ಮಹತ್ವದ ಕುರಿತು ಘೋಷಣೆಗಳ ಫಲಕಗಳನ್ನು ಹಿಡಿದು ಸಮುದಾಯಕ್ಕೆ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *