ಟ್ರಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಸಾಗಿದ ಆರ್.ಅಶೋಕ್ ಆದಿವಾಸಿಗಳಿಂದ ಅದ್ದೂರಿ ಸ್ವಾಗತ

ನಂದಿನಿ ಮೈಸೂರು

ಎಚ್.ಡಿ.ಕೋಟೆ: ಜಿಲ್ಲಾಧಿಕಾರಿಗಳ ಹಳ್ಳಿಯ ಕಡೆ ಕಾರ್ಯಕ್ರಮ ಮತ್ತ ಗ್ರಾಮ ವಾಸ್ತವ್ಯದ ಅಂಗವಾಗಿ ಎಚ್.ಡಿ.ಕೋಟೆಯ ಭೀಮನಕೊಲ್ಲಿಗೆ ಆಗಮಿಸಿದ್ದ ಕಂದಾಯ ಸಚಿವ ಆರ್.ಅಶೋಕ್ ರವರನ್ನು ತೋಟಗಾರಿಕ ಇಲಾಖಾ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಸಾಂಪ್ರದಾಯಿಕ ಕುಣಿತಗಳೊಂದಿಗೆ ಟ್ರಾಕ್ಟರ್ ಮೂಲಕ ಮೆರವಣಿಗೆಯಲ್ಲಿ ವಿಶೇಷವಾಗಿ ಸ್ವಾಗತಿಸಲಾಯಿತು.

ಶನಿವಾರ ತಾಲ್ಲೂಕಿನ ಭೀಮನಕೊಲ್ಲಿಗೆ ಆಗಮಿಸಿದ ಸಚಿವ ಆರ್.ಅಶೋಕ್ ರವರನ್ನು ವಿವಿಧ ಆದಿವಾಸಿ ಸಮುದಾಯಗಳ ಸಾಂಪ್ರದಾಯಿಕ ಕುಣಿತಗಳು, ನಗಾರಿ, ಪೂಜಾ ಕುಣಿತ, ಕರಡಿ ಕುಣಿತ, ಬ್ಯಾಂಡ್ ಸೆಟ್, ಡೊಳ್ಳು ಕುಣಿತ, ನಂದಿ ಕಂಬ ಕುಣಿತ, ವೀರಗಾಸೆ, ಕಳಸದೊಂದಿಗೆ ಮುಂತಾದ ಸಾಂಪ್ರದಾಯಿಕ ಕುಣಿತದೊಂದಿಗೆ ಸಿಂಗರಿಸಿದ ಟ್ರಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಭೀಮಕೊಲ್ಲಿ ದೇವಸ್ಥಾನದ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.

ನಂದಿಧ್ವಜಕ್ಕೆ ಪೂಜೆ: ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಆರ್.ಅಶೋಕ್ ರವರು ಶಾಸಕ ಅನಿಲ್ ಚಿಕ್ಕಮಾದು ಹಾಗೂ ವಿವಿಧ ಮುಖಂಡರೊಂದಿಗೆ ಜೊತೆಗೂಡಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಮಳಿಗೆಗಳ ಉದ್ಘಾಟಿನೆ : ಇದೇ ವೇಳೆ ಭೀಮನಕೊಲ್ಲಿ ಮಹದೇಶ್ವರ ದೇವಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ವತಿಯಿಂದ ನಿರ್ಮಿಸಲಾಗಿದ್ದ ವಿವಿಧ ವಸ್ತು ಪ್ರದರ್ಶನರ ಮಳಿಗೆಗಳು ಉದ್ಘಾಟಿಸಿ ಬಳಿಕ ಮಳಿಗೆಗಳನ್ನು ಪರಿಶೀಲಿಸಿದರು. ಬಳಿಕ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಶಾಸಕ ಅನಿಲ್ ಚಿಕ್ಕಮಾದು, ಮುಖಂಡರಾದ ಕೃಷ್ಣಸ್ವಾಮಿ, ಹಂಚೀಪುರ ಗುರುಸ್ವಾಮಿ, ಗಿರೀಶ್, ಅರುಣ್ ಕುಮಾರ್ ಗೌಡ, ರಾಜೇಂದ್ರ, ಅರಸ್ಸು, ವಿಜಯ್ ಕುಮಾರ್, ರುದ್ರಪ್ಪ, ಗಣೇಶಾಚಾರಿ, ಸತೀಶ್ ಬಹದ್ದೂರ್, ತಹಸೀಲ್ದಾರ್ ಚಲುವರಾಜು, ಅಧಿಕಾರಿಗಳಾದ ಸಣ್ಣರಾಮಪ್ಪ, ರಾಜೇಶ್ ಜೊರಾಲ್ಡ್, ವೃತ್ತ ನಿರೀಕ್ಷಕ ಆನಂದ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *